ದೇವಾಲಯದ ಹುಂಡಿ ಕಳ್ಳತನ, ನಾಣ್ಯಬಿಟ್ಟು ನೋಟು ಕದ್ದೊಯ್ದ ಖದೀಮರು

ಆನೇಕಲ್: ದೇವಾಲಯದ ಬಾಗಿಲು ಮುರಿದು ಕಳ್ಳರು ಹುಂಡಿಯಲ್ಲಿದ್ದ ಹಣ ಲೂಟಿ ಮಾಡಿರುವ ಘಟನೆ ಚಿಕ್ಕಹೊಸಹಳ್ಳಿಯ ಮಾದೇಶ್ವರ ದೇವಾಲಯದಲ್ಲಿದೆ ನಡೆದಿದೆ. ಖದೀಮರು ನಿನ್ನೆ ರಾತ್ರಿ ಮಾದೇಶ್ವರ ದೇವಾಲಯದ ಬಾಗಿಲು ಮುರಿದು ಹುಂಡಿಯಲ್ಲಿದ್ದ ಲಕ್ಷಾಂತರ ಹಣವನ್ನು ದೋಚಿದ್ದಾರೆ. ಚಾಲಾಕಿ ಖದೀಮರು ಕೇವಲ ನೋಟುಗಳನ್ನು ಮಾತ್ರ ಕದ್ದಿದ್ದು, ಚಿಲ್ಲರೆ ನಾಣ್ಯಗಳನ್ನು ದೇವಾಲಯದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಮಹಾಶಿವರಾತ್ರಿ ಹಬ್ಬದ ಹಿನ್ನಲೆ ಭಕ್ತರು ಹೆಚ್ಚಿನ ಕಾಣಿಕೆ ಹಾಕಿರ್ತಾರೆ ಹುಂಡಿಯಲ್ಲಿ ಬಹಳ ಹಣ ಶೇಖರಣೆಯಾಗಿರೋದು ತಿಳಿದೇ ಖದೀಮರು ತಮ್ಮ ಕೈಚಳಕ ತೋರಿಸಿದ್ದಾರೆ. ಇನ್ನು ಈ ಪ್ರಕರಣ […]

ದೇವಾಲಯದ ಹುಂಡಿ ಕಳ್ಳತನ, ನಾಣ್ಯಬಿಟ್ಟು ನೋಟು ಕದ್ದೊಯ್ದ ಖದೀಮರು

Updated on: Feb 24, 2020 | 4:04 PM

ಆನೇಕಲ್: ದೇವಾಲಯದ ಬಾಗಿಲು ಮುರಿದು ಕಳ್ಳರು ಹುಂಡಿಯಲ್ಲಿದ್ದ ಹಣ ಲೂಟಿ ಮಾಡಿರುವ ಘಟನೆ ಚಿಕ್ಕಹೊಸಹಳ್ಳಿಯ ಮಾದೇಶ್ವರ ದೇವಾಲಯದಲ್ಲಿದೆ ನಡೆದಿದೆ. ಖದೀಮರು ನಿನ್ನೆ ರಾತ್ರಿ ಮಾದೇಶ್ವರ ದೇವಾಲಯದ ಬಾಗಿಲು ಮುರಿದು ಹುಂಡಿಯಲ್ಲಿದ್ದ ಲಕ್ಷಾಂತರ ಹಣವನ್ನು ದೋಚಿದ್ದಾರೆ. ಚಾಲಾಕಿ ಖದೀಮರು ಕೇವಲ ನೋಟುಗಳನ್ನು ಮಾತ್ರ ಕದ್ದಿದ್ದು, ಚಿಲ್ಲರೆ ನಾಣ್ಯಗಳನ್ನು ದೇವಾಲಯದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.

ಮಹಾಶಿವರಾತ್ರಿ ಹಬ್ಬದ ಹಿನ್ನಲೆ ಭಕ್ತರು ಹೆಚ್ಚಿನ ಕಾಣಿಕೆ ಹಾಕಿರ್ತಾರೆ ಹುಂಡಿಯಲ್ಲಿ ಬಹಳ ಹಣ ಶೇಖರಣೆಯಾಗಿರೋದು ತಿಳಿದೇ ಖದೀಮರು ತಮ್ಮ ಕೈಚಳಕ ತೋರಿಸಿದ್ದಾರೆ. ಇನ್ನು ಈ ಪ್ರಕರಣ ಆನೇಕಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Published On - 4:03 pm, Mon, 24 February 20