ಹಿಂದಿನ ಎಲ್ಲಾ ದಾಖಲೆ ಉಡೀಸ್: ಹೊಸ ದಾಖಲೆ ನಿರ್ಮಿಸಿದ ಕಂಬಳ ವೀರ!

ಹಿಂದಿನ ಎಲ್ಲಾ ದಾಖಲೆ ಉಡೀಸ್: ಹೊಸ ದಾಖಲೆ ನಿರ್ಮಿಸಿದ ಕಂಬಳ ವೀರ!

ಮಂಗಳೂರು: ಉಕ್ಕಿನಂತಹ ದೇಹ.. ಶರವೇಗದಲ್ಲಿ ಗುರಿ ಮುಟ್ಟೋ ವೇಗ. ಒಂದ್ಸಲ ಕೆಸರುಗದ್ದೆಗೆ ಕಾಲಿಟ್ರೆ ಗೆಲುವಿನ ಕೇಕೆ ಹಾಕ್ತಿರೋದೆ.. ಹೆಜ್ಜೆ ಇಟ್ರೆ ಸಾಕು ಚಿನ್ನದ ಬೇಟೆ ಫಿಕ್ಸ್.. FLOW.. ಇದೇ ಮಿಂಚಿನ ಓಟ.. ಇದೇ ರಣೋತ್ಸಾಹ.. ಇದೇ ಛಲ.. ಕರಾವಳಿಯ ಉಸೇನ್​ ಬೋಲ್ಟ್.. ಕಂಬಳದ ವೀರ ಶ್ರೀನಿವಾಸ ಗೌಡನತ್ತ ಎಲ್ಲರೂ ತಿರುಗಿ ನೋಡ್ತಿದ್ದಾರೆ. ಯೆಸ್​.. ದೇಶಾದ್ಯಂತ ಸದ್ದು ಮಾಡ್ತಿರೋ.. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಹಲ್​ಚಲ್ ಸೃಷ್ಟಿಸಿರೋ ಕಂಬಳದ ಕುವರ ಶ್ರೀನಿವಾಸ್​​​ ಗೌಡ ಅಂದ್ರೆ ಮನೆ ಮಾತಾಗಿದ್ದಾರೆ. ದಕ್ಷಿಣಕನ್ನಡ ಜಿಲ್ಲೆ […]

sadhu srinath

|

Feb 24, 2020 | 12:21 PM

ಮಂಗಳೂರು: ಉಕ್ಕಿನಂತಹ ದೇಹ.. ಶರವೇಗದಲ್ಲಿ ಗುರಿ ಮುಟ್ಟೋ ವೇಗ. ಒಂದ್ಸಲ ಕೆಸರುಗದ್ದೆಗೆ ಕಾಲಿಟ್ರೆ ಗೆಲುವಿನ ಕೇಕೆ ಹಾಕ್ತಿರೋದೆ.. ಹೆಜ್ಜೆ ಇಟ್ರೆ ಸಾಕು ಚಿನ್ನದ ಬೇಟೆ ಫಿಕ್ಸ್.. FLOW.. ಇದೇ ಮಿಂಚಿನ ಓಟ.. ಇದೇ ರಣೋತ್ಸಾಹ.. ಇದೇ ಛಲ.. ಕರಾವಳಿಯ ಉಸೇನ್​ ಬೋಲ್ಟ್.. ಕಂಬಳದ ವೀರ ಶ್ರೀನಿವಾಸ ಗೌಡನತ್ತ ಎಲ್ಲರೂ ತಿರುಗಿ ನೋಡ್ತಿದ್ದಾರೆ.

ಯೆಸ್​.. ದೇಶಾದ್ಯಂತ ಸದ್ದು ಮಾಡ್ತಿರೋ.. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಹಲ್​ಚಲ್ ಸೃಷ್ಟಿಸಿರೋ ಕಂಬಳದ ಕುವರ ಶ್ರೀನಿವಾಸ್​​​ ಗೌಡ ಅಂದ್ರೆ ಮನೆ ಮಾತಾಗಿದ್ದಾರೆ. ದಕ್ಷಿಣಕನ್ನಡ ಜಿಲ್ಲೆ ಮೂಡಬಿದ್ರೆ ತಾಲೂಕಿನ ಮಿಜಾರು ನಿವಾಸಿ ಶ್ರೀನಿವಾಸ್ ಗೌಡ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ.

ಹಿಂದಿನ ಎಲ್ಲಾ ದಾಖಲೆ ಉಡೀಸ್: ಕೆಸರು ಗದ್ದೆಯಲ್ಲಿ ಕೋಣಗಳ ಜೊತೆ ಮಿಂಚಿನಂತೆ ಹೆಜ್ಜೆ ಇಡೋ ಶ್ರೀನಿವಾಸ ಗೌಡ ಹಿಂದಿನ ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡಿದ್ದಾರೆ. ಕೇರಳದ ಕಾಸರಗೋಡು ಜಿಲ್ಲೆ ಪೈವಳಿಕೆ ಬೋಳಂಗಳದಲ್ಲಿ ನಡೆದ ಕಂಬಳದಲ್ಲಿ ಎರಡು ಚಿನ್ನ ಮತ್ತು ಎರಡು ಬೆಳ್ಳಿ ಪದಕ ಪಡೆದಿದ್ದಾರೆ. ಈ ಮೂಲಕ ಕಂಬಳ ಇತಿಹಾಸದಲ್ಲೇ ಒಂದೇ ವರ್ಷದಲ್ಲಿ 39 ಚಿನ್ನದ ಪದಕ ಪಡೆಯೋ ಮೂಲಕ ನಂಬರ್ ಒನ್ ಪಟ್ಟ ಗಟ್ಟಿ ಮಾಡ್ಕೊಂಡಿದ್ದಾರೆ.

ಇನ್ನು, ಫೆಬ್ರವರಿ 2 ರಂದು ಐಕಳದಲ್ಲಿ ನಡೆದಿದ್ದ ಕಂಬಳದಲ್ಲಿ 143 ಮೀಟರ್ ದೂರವನ್ನು 12.46 ಸೆಕೆಂಡ್ ಕ್ರಮಿಸಿ ರೆಕಾರ್ಡ್ ಮಾಡಿದ್ರು. ಇದೀಗ ಕಾಸರಗೋಡು ಜಿಲ್ಲೆಯಲ್ಲಿ ನಡೆದ ಹಗ್ಗ ಮತ್ತು ನೇಗಿಲು ವಿಭಾಗದಲ್ಲಿ ಮಿಂಚಿನಂತೆ ಓಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ರು.

ಒಟ್ನಲ್ಲಿ ಕರಾವಳಿಯಲ್ಲಿ ನಡೆಯೋ ಸ್ಪೆಷಲ್ ಕ್ರೀಡೆ ಕಂಬಳದಲ್ಲಿ ಶ್ರೀನಿವಾಸಗೌಡ ಸಾಧನೆಯ ಶಿಖರವನ್ನೇರಿದ್ದಾರೆ. ಕಂಬಳ ಸೀಜನ್​ನಲ್ಲಿ ಇನ್ನೂ ಎರಡ್ಮೂರು ಕಂಬಳ ನಡೆಯಲಿದ್ದು ಅಲ್ಲೂ ಚಿನ್ನದ ಬೇಟೆಯಾಡೋಕೆ ಕರಾವಳಿ ಉಸೇನ್ ಬೋಲ್ಟ್ ಕಣ್ಣಿಟ್ಟಿದ್ದಾರೆ.

Follow us on

Most Read Stories

Click on your DTH Provider to Add TV9 Kannada