
ವಿಜಯಪುರ: ಮನೆಯಲ್ಲಿ ಕಳ್ಳತನ ಮಾಡಿದ ಖದೀಮರು ಅಡುಗೆ ಕೋಣೆಯಲ್ಲಿದ್ದ ಊಟವನ್ನು ಮಾಡಿ ಹೋಗಿರುವ ಘಟನೆ ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ರತ್ನಾಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಶಿವಾಜಿ ಕೃಷ್ಣಪ್ಪ ಹರಗೆ ಎಂಬುವವರ ಮನೆಯಲ್ಲಿ ಘಟನೆ ನಡೆದಿದ್ದು, ಮನೆಯಲ್ಲಿ ಯಾರು ಇಲ್ಲದಿರುವುದನ್ನ ಗಮನಿಸಿದ ಚೋರರು ಮನೆಗೆ ನುಗ್ಗಿ ಮನೆಯಲ್ಲಿದ್ದ 13,000 ರೂಪಾಯಿ ನಗದು ಕದ್ದು, ಬಳಿಕ ಅಡುಗೆ ಕೋಣೆಯಲ್ಲಿದ್ದ ಊಟವನ್ನೂ ಮಾಡಿ ಹೋಗಿದ್ದಾರೆ. ಕಳ್ಳರ ಈ ಕೈಚೆಳಕ ಬೆಳಗ್ಗೆ ಬೆಳಕಿಗೆ ಬಂದಿದ್ದು, ತಿಕೋಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
Published On - 10:27 am, Sat, 2 January 21