ಭೀಕರ ಅಪಘಾತಕ್ಕೆ ಮೂವರು ಸ್ಥಳದಲ್ಲೇ ಕೊನೆಯುಸಿರು..

ಸ್ಕೂಟರ್ನಲ್ಲಿ ಪ್ರಯಾಣಿಸುತ್ತಿದ್ದ ರಮೇಶ್(40), ಉಷಾ(36), ಮೊನಿಷಾ(5) ಘಟನಾ ಸ್ಥಳದಲ್ಲಿ ಸಾವಿಗೀಡಾಗಿದ್ದಾರೆ. ಸಿದ್ದಾರ್ಥ್ (3)ಗೆ ಗಂಭೀರ ಗಾಯವಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಭೀಕರ ಅಪಘಾತಕ್ಕೆ ಮೂವರು ಸ್ಥಳದಲ್ಲೇ ಕೊನೆಯುಸಿರು..
ಸಾಂದರ್ಭಿಕ ಚಿತ್ರ

Updated on: Dec 11, 2020 | 10:11 AM

ಮೈಸೂರು: ಕಾರು ಮತ್ತು ದ್ವಿಚಕ್ರ ವಾಹನದ ನಡುವೆ ನಡೆದ ಭೀಕರ ಅಪಘಾತದಿಂದ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರಿನ ರಿಂಗ್ ರಸ್ತೆ ಜಂಕ್ಷನ್ ಬಳಿ ನಡೆದಿದೆ.

ಸ್ಕೂಟರ್​ನಲ್ಲಿ ಪ್ರಯಾಣಿಸುತ್ತಿದ್ದ ರಮೇಶ್(40), ಉಷಾ(36), ಮೊನಿಷಾ(5) ಘಟನಾ ಸ್ಥಳದಲ್ಲಿ ಸಾವಿಗೀಡಾಗಿದ್ದಾರೆ. ಸಿದ್ದಾರ್ಥ್ (3)ಗೆ ಗಂಭೀರ ಗಾಯವಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತರು ಮೈಸೂರಿನ ಟಿ.ಕೆ.ಬಡಾವಣೆ ನಿವಾಸಿಗಳಾಗಿದ್ದು, ಸಿದ್ದಲಿಂಗಪುರದಿಂದ ನಿನ್ನೆ ತಡರಾತ್ರಿ ವಾಪಸ್ಸು ಬರುತ್ತಿದ್ದ ವೇಳೆ ಅಪಘಾತ ನಡೆದಿದೆ. ಎನ್.ಆರ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

3 ದಿನದ ಹಿಂದೆಯೇ ನಾಪತ್ತೆಯಾಗಿದ್ದ ಯುವಕನ ಶವ ಪತ್ತೆ

 

Published On - 10:00 am, Fri, 11 December 20