ಬೆಂಗಳೂರು: ಸಾರಿಗೆ ಸಿಬ್ಬಂದಿಯನ್ನು ಸರ್ಕಾರಿ ನೌಕರರೆಂದು ಪರಿಗಣಿಸಲು ಆಗ್ರಹಿಸಿ ನಡೆಸುತ್ತಿರುವ ಹೋರಾಟಕ್ಕೆ ಗೌರವಾಧ್ಯಕ್ಷರನ್ನಾಗಿ ಕೋಡಿಹಳ್ಳಿ ಚಂದ್ರಶೇಖರ್ರನ್ನು ಅಧಿಕೃತವಾಗಿ ಆಯ್ಕೆ ಮಾಡಲಾಗಿದೆ.
ಕೋಡಿಹಳ್ಳಿ ಚಂದ್ರಶೇಖರ್ ರೈತ ಮುಖಂಡ, ಅವರಿಗೂ ಸಾರಿಗೆ ನೌಕರರಿಗೂ ಸಂಬಂಧವಿಲ್ಲ. ನೌಕರರು ಮಾತುಕತೆಗೆ ಬರಲಿ ಎಂದು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಹೇಳಿದ್ದರು. ಅದಕ್ಕೀಗ ತಕ್ಕ ತಿರುಗೇಟು ನೀಡಿದ ಸಾರಿಗೆ ನೌಕರರು, ಕೋಡಿಹಳ್ಳಿ ಚಂದ್ರಶೇಖರ್ರನ್ನು ಹೋರಾಟದ ಗೌರವ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಅಧಿಕೃತ ಘೋಷಣೆಯ ಪತ್ರವನ್ನು ಸಚಿವ ಸವದಿಗೆ ನೀಡಲು ಮಹಿಳಾ ಘಟಕದ ಅಧ್ಯಕ್ಷೆ ಚಂಪಕವತಿ, ಪದಾಧಿಕಾರಿಗಳಾದ ಜಗದೀಶ್, ತಿಪ್ಪೇಸ್ವಾಮಿ ಇತರರು ಅವರ ನಿವಾಸಕ್ಕೆ ಹೊರಟಿದ್ದಾರೆ.
ಕೋಡಿಹಳ್ಳಿ ಚಂದ್ರಶೇಖರ್ಗೂ, ಸಾರಿಗೆ ಸಿಬ್ಬಂದಿಗೂ ಸಂಬಂಧವಿಲ್ಲ; ನೌಕರರೇ ಚರ್ಚೆಗೆ ಬನ್ನಿ- ಸಚಿವ ಸವದಿ
ನಡುರಾತ್ರಿ ಗಡುವು ನೀಡಿದ ಸಚಿವ ಸವದಿ, ನಾಳೆಯಿಂದ ಖಾಸಗಿ ಬಸ್ ಬಳಕೆಯ ಎಚ್ಚರಿಕೆ ರವಾನೆ