2020 ಜೀವಮಾನದಲ್ಲಿ ಮರೆಯಲಾಗದ ವರ್ಷ: ಸಿದ್ದಲಿಂಗ ಶ್ರೀಗಳು

2020 ಕೊರೊನಾ ವರ್ಷವೆಂದು ಹಣೆಪಟ್ಟಿ ಕಟ್ಟಿಕೊಂಡಿದೆ. ಜನಜೀವನ ಅಸ್ತವ್ಯಸ್ತವಾಗಿ, ಬದುಕು ನಡೆಸುವುದೇ ಕಷ್ಟವಾಗಿದೆ ಎಂದು ಹೇಳಿದರು.

2020 ಜೀವಮಾನದಲ್ಲಿ ಮರೆಯಲಾಗದ ವರ್ಷ: ಸಿದ್ದಲಿಂಗ ಶ್ರೀಗಳು
ಸಿದ್ದಲಿಂಗ ಶ್ರೀಗಳು
Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 31, 2020 | 10:58 PM

ತುಮಕೂರು: ಎಲ್ಲಾ ಕ್ಷೇತ್ರಗಳಲ್ಲೂ ಹಿನ್ನಡೆಯುಂಟಾದ 2020ರ ವರ್ಷವನ್ನು ಜೀವಮಾನದಲ್ಲಿ ಮರೆಯಲು ಸಾಧ್ಯವಿಲ್ಲ ಎಂದು ಸಿದ್ಧಗಂಗಾ ಮಠದ ಪೀಠಾಧಿಪತಿ ಸಿದ್ದಲಿಂಗ ಶ್ರೀಗಳು ತಿಳಿಸಿದ್ದಾರೆ.

2020 ಕೊರೊನಾ ವರ್ಷವೆಂದು ಹಣೆಪಟ್ಟಿ ಕಟ್ಟಿಕೊಂಡಿದೆ. ಜನಜೀವನ ಅಸ್ತವ್ಯಸ್ತವಾಗಿ, ಬದುಕು ನಡೆಸುವುದೇ ಕಷ್ಟವಾಗಿದೆ. ಅಲ್ಲದೇ 2020ನೇ ವರ್ಷ ಶತಮಾನಕ್ಕೆ ಆಗುವಷ್ಟು ಪಾಠ ಕಲಿಸಿದೆ. ಹೊಸ ವರ್ಷಕ್ಕೆ ಕಾಲಿಟ್ಟರು ಕೊರೊನಾ ಹಾವಳಿ ಕಡಿಮೆಯಾಗಿಲ್ಲ. ಸದ್ದುಗದ್ದಲವಿಲ್ಲದೆ ಹಾಗೂ ಯಾವುದೇ ಸಂಭ್ರಮವಿಲ್ಲದೆ 2021ನ್ನು ಸ್ವಾಗತಿಸುವ ಅನಿವಾರ್ಯ ಎದುರಾಗಿದೆ  ಎಂದು ಸಿದ್ದಲಿಂಗ ಸ್ವಾಮೀಜಿ  ಅಭಿಪ್ರಾಯಪಟ್ಟರು.

ಹೊಸ ವರ್ಷದ ಹುರುಪಿನಲ್ಲಿ ಜನರು ಮಠಕ್ಕೆ ಬರಲಿದ್ದು, ಪ್ರತಿ ವರ್ಷದಂತೆ ಮಠದಲ್ಲಿ ವ್ಯವಸ್ಥೆ ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಮಾರ್ಚ್ ತಿಂಗಳಲ್ಲಿ SSLC ಮತ್ತು PUC ಪರೀಕ್ಷೆ ಮಾಡಲ್ಲ: ಸಚಿವ ಸುರೇಶ್ ಕುಮಾರ್