ಒಂದು ಕೋಳಿ ಫಾರಂ ಹೊಸದಾಗಿ ಪ್ರಾರಂಭ ಮಾಡ್ಬೇಕು ಅಂದ್ರೆ ಅದಕ್ಕೊಂದು ಕಾನೂನು ನಿಯಮವಿದೆ. ಆದ್ರೆ ಇಲ್ಲೊಬ್ಬ ಅಸಾಮಿ ನಾನು ಸಚಿವರ ಆಪ್ತನೆಂದು ಇಡೀ ಗ್ರಾಮಸ್ಥರಿಗೆ ಬೆದರಿಕೆ ಹಾಕಿ ಕಾನೂನನ್ನ ಗಾಳಿಗೆ ತೂರಿ ಕೋಳಿ ಫಾರಂ (Poultry) ತೆರೆಯಲು ಮುಂದಾಗಿದ್ದಾನೆ.. ಅದರ ಡಿಟೈಲ್ಸ್ ಇಲ್ಲಿದೆ ನೋಡಿ. ಹೌದು ಗೃಹ ಸಚಿವ ಜಿ. ಪರಮೇಶ್ವರ್ (Home Minister G Parameshwara) ತವರು ಕ್ಷೇತ್ರ ಕೊರಟಗೆರೆಯಲ್ಲಿ ಅವರ ಬೆಂಬಲಿಗನ ಹಾವಳಿಗೆ ಇಡೀ ಗ್ರಾಮದ ಜನರು ಕಂಗಾಲಾಗಿ ಹೋಗಿದ್ದಾರೆ. ತುಮಕೂರು ಜಿಲ್ಲೆ ಕೊರಟಗೆರೆ (Koratagere) ತಾಲೂಕಿನ ವಡ್ಡಗೆರೆ ಗ್ರಾಮ ಪಂಚಾಯತಿಯ ಕಲ್ಕೆರೆ ಗ್ರಾಮದ ಹುಸೇನ್ ಸಾಬ್ ಆಟಾಟೋಪಕ್ಕೆ ಕಂಗಾಲಾಗಿದ್ದಾರೆ. ನಿಯಮದ ಪ್ರಕಾರ ಜನವಸತಿಯಿಂದ 500 ಮೀಟರ್ ಒಳಗೆ ಕೋಳಿ ಫಾರಂ ಸ್ಥಾಪಿಸುವಂತಿಲ್ಲ. ಅದರೆ ಗ್ರಾಮದಿಂದ 259 ಅಡಿ ದೂರದಲ್ಲೇ ಸುಮಾರು 8 ಸಾವಿರ ಕೋಳಿ ಸಾಕಾಣಿಕೆ ಮಾಡುವ ಬೃಹತ್ ಕೋಳಿಫಾರಂ ಪ್ರಾರಂಭ ಮಾಡಲು ಹೊರಟಿದ್ದಾನೆ ಈ ಹುಸೇನ್ ಸಾಬ್.
ಇನ್ನು ಕಲ್ಕೆರೆ ಗ್ರಾಮಸ್ಥರು ಕೋಳಿ ಫಾರಂ ತೆರೆಯದಂತೆ ವಿರೋಧ ವ್ಯಕ್ತಪಡಿಸಿದ್ದು, ಗ್ರಾಮ ಪಂಚಾಯ್ತಿ ಪಿಡಿಒ, ತಹಶೀಲ್ದಾರ್, ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿ ದೂರು ನೀಡಿದ್ದಾರೆ. ಗ್ರಾಮಸ್ಥರ ಸಮ್ಮುಖದಲ್ಲಿ ತಾಲ್ಲೂಕು ಸರ್ವೆಯರ್ ಗ್ರಾಮದಿಂದ ಕೋಳಿ ಫಾರಂ ವರೆಗೆ ಭೂ ಮಾಪನ ಮಾಡಿ ಸರ್ವೆ ರಿಪೊರ್ಟ್ ಕೂಡಾ ನೀಡಿದ್ದಾರೆ. ಅದರಲ್ಲಿ ಗ್ರಾಮದಿಂದ ಕೋಳಿ ಫಾರಂ ವರೆಗೆ ಕೇವಲ 259 ಮೀಟರ್ ಬಂದಿದ್ದು. ಕೋಳಿ ಫಾರಂಗೆ ಅನುಮತಿ ನೀಡಬಾರದೆಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ವರದಿ ಕೊಟ್ಟಿದ್ದಾರೆ.
ಇದನ್ನೂ ಓದಿ: ಹೊಸ ವರ್ಷಾಚರಣೆ ಸಂಬಂಧ ಗೃಹ ಸಚಿವ ಡಾ.ಪರಮೇಶ್ವರ್ ಸಭೆ; ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಸೂಚನೆ
ಕೋಳಿ ಫಾರಂ ಪ್ರಾರಂಭಿಸಿದಾಗಿಂದಲೂ ಗ್ರಾಮಸ್ಥರಿಗೆ ತೊಂದರೆ ಕೊಡುತ್ತಿರುವ ಸಚಿವ ಪರಮೇಶ್ವರ್ ಬೆಂಬಲಿಗ ಪರಮೇಶ್ವರ್ ಜೊತೆಗಿನ ಫೋಟೋ ತೋರಿಸಿ ಜನರಿಗೆ ಬೆದರಿಕೆ ಹಾಕಿ ನಮ್ದೆ ಸರ್ಕಾರ, ನಮ್ಮ ಸರ್ಕಾರ ಇರೊವರೆಗೂ ನಮ್ಮನ್ನ ಏನೂ ಮಾಡೋಕೆ ಆಗಲ್ಲ ಅಂತ ಗ್ರಾಮಸ್ಥರಿಗೆ ಬೆದರಿಕೆ ಹಾಕಿದ್ದಾನೆ ಎಂದು ಆರೋಪ ಮಾಡ್ತಿದ್ದಾರೆ.
ಇನ್ನು ಒಂದು ವೇಳೆ ಏನಾದ್ರು ಅಲ್ಲಿ ಕೋಳಿ ಫಾರಂ ಓಪನ್ ಆದ್ರೆ ನೋಣ ಕಾಟ ಹೆಚ್ಚಾಗಲಿದ್ದು, ಕೋಳಿ ವಾಸನೆಗೆ ಹೆದರಿ ನಾವೆಲ್ಲಾ ಗ್ರಾಮವನ್ನೇ ತೊರೆಯಬೇಕಾಗುತ್ತದೆ ಎಂದು ತಮ್ಮ ಅಳಲು ತೊಡಿಕೊಂಡಿದ್ದಾರೆ. ಕೋಳಿ ಫಾರಂ ತೆರೆಯದಂತೆ ಕಳೆದ ಎರಡು ತಿಂಗಳಿಂದ ಸತತವಾಗಿ ಹೋರಾಟ ಮಾಡುತ್ತಾ ಬಂದಿದ್ರು ಅಧಿಕಾರಿಗಳು ಮಾತ್ರ ಆತನ ವಿರುದ್ಧ ಕ್ರಮ ಕೈಗೊಳ್ಳದೇ ಇರೋದು ಗ್ರಾಮಸ್ಥರಿಗೆ ಆಶ್ಚರ್ಯ ಆತಂಕ ನೋವುಂಟು ಮಾಡಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 3:28 pm, Sat, 23 December 23