ಹೊಸವರ್ಷಾಚರಣೆ ಸಂಬಂಧ ಗೃಹ ಸಚಿವ ಡಾ.ಪರಮೇಶ್ವರ್ ಸಭೆ; ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಸೂಚನೆ

ಬೆಂಗಳೂರಿನಲ್ಲಿ MG ರೋಡ್, ಕಮರ್ಷಿಯಲ್ ಸ್ಟೀಟ್​ನಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಜನ ಸೇರಿ ಹೊಸ ವರ್ಷವನ್ನು ಆಚರಣೆ ಮಾಡುತ್ತಾರೆ. ಅನೇಕ ಸಂದರ್ಭಗಳಲ್ಲಿ ಕೆಲವು ಅಹಿತಕರ ಘಟನೆಗಳು ಸಹ ನಡೆದಿದೆ. ಎಲ್ಲರನ್ನೂ ಕರೆದು ಸಭೆ ಮಾಡಿದ್ದೇನೆ. ಯಾವುದೇ ರೀತಿಯಲ್ಲಿ ಅಹಿತಕರ ಘಟನೆ ನಡೆಯಬಾರದು ಎಂದು ಗೃಹ ಸಚಿವ ಪರಮೇಶ್ವರ್ ಸಭೆ ಬಳಿಕ ಹೇಳಿದರು.

ಹೊಸವರ್ಷಾಚರಣೆ ಸಂಬಂಧ ಗೃಹ ಸಚಿವ ಡಾ.ಪರಮೇಶ್ವರ್ ಸಭೆ; ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಸೂಚನೆ
ಜಿ ಪರಮೇಶ್ವರ
Follow us
Anil Kalkere
| Updated By: ಆಯೇಷಾ ಬಾನು

Updated on: Dec 22, 2023 | 1:30 PM

ಬೆಂಗಳೂರು, ಡಿ.22: ಹೊಸವರ್ಷಾಚರಣೆ ಸಂಬಂಧ ಗೃಹ ಸಚಿವ ಡಾ.ಪರಮೇಶ್ವರ್ (Dr G Parameshwar) ಅವರು ವಿಧಾನಸೌಧದಲ್ಲಿ ಪೊಲೀಸ್​ ಅಧಿಕಾರಿಗಳ (Bengaluru Police) ಜೊತೆ ಸಭೆ ನಡೆಸಿದ್ದು ಹೊಸ ವರ್ಷಾಚರಣೆ (New Year) ವೇಳೆ ಯಾವುದೇ ರೀತಿಯಲ್ಲಿ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಸೂಚನೆ ನೀಡಿದ್ದಾರೆ. ಹಾಗೂ ಕೊರೊನಾ (Coronavirus) ಹೆಚ್ಚಾಗುತ್ತಿದ್ದು ಮುಂಜಾಗ್ರತಾ ಕ್ರಮ ಕೈಗೊಳ್ಳಲು ತಿಳಿಸಿದ್ದಾರೆ.

ಇಂದು ವಿಧಾನಸೌಧದಲ್ಲಿ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್, ನಗರ ಪೊಲೀಸ್ ಆಯುಕ್ತ ದಯಾನಂದ್ ಸೇರಿ ಹಲವಾರು ಅಧಿಕಾರಿಗಳ ಜೊತೆ ಗೃಹ ಸಚಿವ ಡಾ.ಪರಮೇಶ್ವರ್ ಅವರು ಸಭೆ ನಡೆಸಿದರು. ಸಭೆ ಬಳಿಕ ಮಾತನಾಡಿದ ಅವರು, ಬೆಂಗಳೂರಿನಲ್ಲಿ MG ರೋಡ್, ಕಮರ್ಷಿಯಲ್ ಸ್ಟೀಟ್​ನಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಜನ ಸೇರಿ ಹೊಸ ವರ್ಷವನ್ನು ಆಚರಣೆ ಮಾಡುತ್ತಾರೆ. ಅನೇಕ ಸಂದರ್ಭಗಳಲ್ಲಿ ಕೆಲವು ಅಹಿತಕರ ಘಟನೆಗಳು ಸಹ ನಡೆದಿದೆ. ಪೊಲೀಸ್ ಇಲಾಖೆ, ಮತ್ತು ಅಬಕಾರಿ ಇಲಾಖೆ, ಮೆಟ್ರೋ, ಕೆಎಸ್​ಆರ್​ಟಿಸಿ ಎಲ್ಲರನ್ನೂ ಕರೆದು ಸಭೆ ಮಾಡಿದ್ದೇನೆ. ಯಾವುದೇ ರೀತಿಯಲ್ಲಿ ಅಹಿತಕರ ಘಟನೆ ನಡೆಯಬಾರದು. ಅದರ ಜೊತೆಗೂ ಕೋವಿಡ್ ಪ್ರಾರಂಭವಾಗಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ ಬಗ್ಗೆ ಸಭೆ ಕರೆದಿದ್ದೆವು. ಎಲ್ಲಾ ರೀತಿಯ ತಯಾರಿ ಮಾಡಿಕೊಳ್ಳಲು ಎಜೆನ್ಸಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ಇದನ್ನೂ ಓದಿ: ಡ್ರಿಂಕ್ ಆ್ಯಂಡ್‌ ಡ್ರೈವ್ ವಿಶೇಷ ಕಾರ್ಯಾಚರಣೆ; ಒಂದೇ ರಾತ್ರಿ 2,804 ವಾಹನಗಳ ತಪಾಸಣೆ ಮಾಡಿ 75 ಕೇಸ್ ದಾಖಲಿಸಿದ ಸಂಚಾರಿ ಪೊಲೀಸರು

ಅವರವರ ಇಲಾಖೆಯಲ್ಲಿ ಏನೆಲ್ಲ ಮಾಡಬೇಕು ಅನ್ನೋದು ಸೂಚನೆ ಕೊಡಲಾಗಿದೆ. ಯಾವುದೇ ರೀತಿ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಬೇಕಾಗಿದೆ. ಬೇರೆ ಬೇರೆ ದೃಷ್ಟಿ ಇಟ್ಟುಕೊಂಡು ಹೊರಗಿನ ಜನ‌ ತೊಂದರೆ ಮಾಡಬಹುದು, ಅದನ್ನ ಸಹ ನಾವು ಗಮನಿಸುತ್ತೇವೆ. ಇಂಟಲಿಜೆನ್ಸ್ ವಿಂಗ್ ಅದನ್ನ ವಾಚ್ ಮಾಡಲಿದೆ ಎಂದರು. ಇನ್ನು ಇದೇ ವೇಳೆ ಕ್ರಿಸ್ಮಸ್ ಹಾಗೂ ಹೊಸ ವರ್ಷಕ್ಕೆ ನಿರ್ಬಂಧ ವಿಚಾರವಾಗಿ ಮಾತನಾಡಿದ ಸಚಿವ ಪರಮೇಶ್ವರ್, ಸಧ್ಯಕ್ಕೆ ಯಾವುದೇ ಬದಲಾವಣೆ ಮಾಡಲು ಹೋಗೋದಿಲ್ಲ. ಹೆಚ್ಚು ಜನ ಇದ್ದಾಗ ಮಾಸ್ಕ್ ಹಾಕಬೇಕು ಎಂದು ಆರೋಗ್ಯ ಇಲಾಖೆಯಿಂದ ಸೂಚನೆ ಬಂದಿದೆ. ಅದನ್ನ ಬಿಟ್ಟರೆ ಬೇರೆ ಯಾವುದೇ ನಿರ್ಬಂಧ ಇಲ್ಲ.

ಮೆಟ್ರೋಗೆ MG ರೋಡ್ ಎಂಟ್ರಿಯಾಗುವ ಬದಲು ಕುಂಬ್ಳೆ ಸರ್ಕಲ್ ಅಥವಾ ಟ್ರಿನಿಟಿ ಸರ್ಕಲ್ ಗೆ ಹೋಗಬಹುದು. ಸಣ್ಣ ಪುಟ್ಟ ಅಡ್ಜೆಸ್ಟ್ ಮೆಂಟ್ ಬಿಟ್ಟರೆ ಬೇರೆ ಏನು ಇಲ್ಲ. ಯಾರು ಅನಾವಶ್ಯಕವಾಗಿ ಟೆಂಟ್ ಗಳನ್ನ ಹಾಕಿಕೊಂಡು ಲಿಕ್ಕರ್ ಸರ್ವ್ ಮಾಡೋದು ಅಂಥದ್ದು ಕಂಡು ಬಂದ್ರೆ ರೆಗ್ಯೂಲೇಟ್ ಮಾಡ್ತೀವಿ. MG ರೋಡ್ ಮತ್ತು ಬ್ರಿಗೇಡ್ ರೋಡ್ ನಲ್ಲಿ ಯಾವುದೇ ನಿರ್ಬಂಧ ಇಲ್ಲ ಎಂದು‌ ಸ್ಪಷ್ಟಪಡಿಸಿದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಪತ್ನಿ ಗರ್ಭವತಿಯಾಗಿದ್ದಾಗ ಮನೆಗೆ ಅಡಿಪಾಯ ಹಾಕಬಹುದಾ? ವಿಡಿಯೋ ನೋಡಿ
ಪತ್ನಿ ಗರ್ಭವತಿಯಾಗಿದ್ದಾಗ ಮನೆಗೆ ಅಡಿಪಾಯ ಹಾಕಬಹುದಾ? ವಿಡಿಯೋ ನೋಡಿ
Nithya Bhavishya: ಈ ರಾಶಿಯವರಿಗೆ ಇಂದು ಆರ್ಥಿಕ ಯೋಗವಿದೆ
Nithya Bhavishya: ಈ ರಾಶಿಯವರಿಗೆ ಇಂದು ಆರ್ಥಿಕ ಯೋಗವಿದೆ
ವಿಚಾರಣೆ ನಂತರ ಮಾತಾಡದೆ ಕಾರಲ್ಲಿ ಹೊರಟುಹೋದ ಮಲ್ಲಿಕಾರ್ಜುನ ಸ್ವಾಮಿ
ವಿಚಾರಣೆ ನಂತರ ಮಾತಾಡದೆ ಕಾರಲ್ಲಿ ಹೊರಟುಹೋದ ಮಲ್ಲಿಕಾರ್ಜುನ ಸ್ವಾಮಿ
ಜಯನಗರ ಶಾಸಕರು ಬೆಂಗಳೂರಿನ ಆಧೋಗತಿಯನ್ನು ತೋರಿಸಬೇಕು: ಡಿಕೆಶಿ ಸವಾಲ್
ಜಯನಗರ ಶಾಸಕರು ಬೆಂಗಳೂರಿನ ಆಧೋಗತಿಯನ್ನು ತೋರಿಸಬೇಕು: ಡಿಕೆಶಿ ಸವಾಲ್
ಬಿಗ್ ಬಾಸ್ ಮನೆಗೆ ಕಾಲಿಡುತ್ತಲೇ ವಿಶೇಷ ಅಧಿಕಾರ ಪಡೆದ ರಜತ್, ಶೋಭಾ ಶೆಟ್ಟಿ
ಬಿಗ್ ಬಾಸ್ ಮನೆಗೆ ಕಾಲಿಡುತ್ತಲೇ ವಿಶೇಷ ಅಧಿಕಾರ ಪಡೆದ ರಜತ್, ಶೋಭಾ ಶೆಟ್ಟಿ
ಗೋದಾವರಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕನ ರಕ್ಷಿಸಿದ ಪತ್ರಕರ್ತರು
ಗೋದಾವರಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕನ ರಕ್ಷಿಸಿದ ಪತ್ರಕರ್ತರು
ನನ್ನಂತೆ ಬಸವರಾಜ ಬೊಮ್ಮಾಯಿ ಸಹ ಮಧುಮೇಹದಿಂದ ಬಳಲುತ್ತಿದ್ದಾರೆ: ಸಿದ್ದರಾಮಯ್ಯ
ನನ್ನಂತೆ ಬಸವರಾಜ ಬೊಮ್ಮಾಯಿ ಸಹ ಮಧುಮೇಹದಿಂದ ಬಳಲುತ್ತಿದ್ದಾರೆ: ಸಿದ್ದರಾಮಯ್ಯ
ಉಗ್ರಂ ಮಂಜು-ಮೋಕ್ಷಿತಾ ನಡುವೆ ದುಷ್ಮನಿ; ತೊಡೆ ತಟ್ಟಿದ ತ್ರಿವಿಕ್ರಮ್
ಉಗ್ರಂ ಮಂಜು-ಮೋಕ್ಷಿತಾ ನಡುವೆ ದುಷ್ಮನಿ; ತೊಡೆ ತಟ್ಟಿದ ತ್ರಿವಿಕ್ರಮ್
ಕೋವಿಡ್ ಹಗರಣ: ಕೆಲ ಅಂತೆ-ಕಂತೆಗಳಿಗೆ ತೆರೆ ಎಳೆದ ಡಾ ಸಿಎನ್​ ಮಂಜುನಾಥ್
ಕೋವಿಡ್ ಹಗರಣ: ಕೆಲ ಅಂತೆ-ಕಂತೆಗಳಿಗೆ ತೆರೆ ಎಳೆದ ಡಾ ಸಿಎನ್​ ಮಂಜುನಾಥ್
ನಮ್ಮ ಸರ್ಕಾರದ ವಿರುದ್ಧ ಯಾವುದೇ ಆರೋಪ ಸಾಬೀತಾಗಿಲ್ಲ: ಚಲುವರಾಯಸ್ವಾಮಿ
ನಮ್ಮ ಸರ್ಕಾರದ ವಿರುದ್ಧ ಯಾವುದೇ ಆರೋಪ ಸಾಬೀತಾಗಿಲ್ಲ: ಚಲುವರಾಯಸ್ವಾಮಿ