ಜವಾಬ್ದಾರಿ ಮರೆತ ಮಹಿಳಾ ಆಯೋಗದ ಅಧ್ಯಕ್ಷೆ; ಸಂತ್ರಸ್ತೆ ಪಕ್ಕದಲ್ಲೇ ಇದ್ರೂ‌ ತಿರುಗಿ ನೋಡದ‌ ನಾಗಲಕ್ಷ್ಮೀ ಚೌಧರಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 14, 2024 | 8:49 PM

ನಿನ್ನೆ (ಮಾ.13) ಮಧುಗಿರಿ ಪಟ್ಟಣದಲ್ಲಿ ಕಾಂಗ್ರೆಸ್​ನ ಮಹಿಳಾ ಸಮಾವೇಶದಲ್ಲಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ‌ಚೌಧರಿ ಭಾಗಿಯಾಗಿದ್ದರು. ಕಾರ್ಯಕ್ರಮ ನಡೆದ ಸ್ಥಳದ ಪಕ್ಕದಲ್ಲೇ ಇರುವ ಸರ್ಕಾರಿ ಆಸ್ಪತ್ರೆಯಲ್ಲಿ ಸಂತ್ರಸ್ಥ ಬಾಲಕಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಕನಿಕರಕ್ಕೂ ಗಾಯಾಳು ಮಗುವನ್ನ ನಾಗಲಕ್ಷ್ಮಿ‌ಚೌದರಿ ಭೇಟಿ ಮಾಡದೆ ಜವಾಬ್ದಾರಿ ಮರೆತಿದ್ದಾರೆ.

ಜವಾಬ್ದಾರಿ ಮರೆತ ಮಹಿಳಾ ಆಯೋಗದ ಅಧ್ಯಕ್ಷೆ; ಸಂತ್ರಸ್ತೆ ಪಕ್ಕದಲ್ಲೇ ಇದ್ರೂ‌ ತಿರುಗಿ ನೋಡದ‌ ನಾಗಲಕ್ಷ್ಮೀ ಚೌಧರಿ
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ
Follow us on

ತುಮಕೂರು, ಮಾ.14: ಸಂತ್ರಸ್ತೆ ಪಕ್ಕದಲ್ಲೇ ಇದ್ದರೂ ಕೂಡ ವಿಚಾರಿಸಿದೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ(Karnataka State Commission for Women)  ಡಾ.ನಾಗಲಕ್ಷ್ಮಿ ಚೌಧರಿ ತಮ್ಮ ಜವಾಬ್ದಾರಿ ಮರೆತಿದ್ದಾರೆ.ಬ್ಯಾಂಕ್​ನಲ್ಲಿ ಬಾಲಕಿಯ ಹೆಸರಿನಲ್ಲಿದ್ದ ಹಣಕ್ಕಾಗಿ ದೊಡ್ಡಮ್ಮ ಇಸ್ತ್ರಿ ಪೆಟ್ಟಿಗೆಯಿಂದ ಸುಟ್ಟ ಘಟನೆ ಶಿರಾ (Sira) ತಾಲೂಕಿನ ನಿಡಘಟ್ಟೆ ಗ್ರಾಮದಲ್ಲಿ ನಿನ್ನೆ(ಮಾ.13) ನಡೆದಿತ್ತು. ಈ ಹಿನ್ನಲೆ ಗಂಭೀರ ಗಾಯಗೊಂಡ ಬಾಲಕಿ ಲಕ್ಷ್ಮಿಯನ್ನು ಮಧುಗಿರಿ ತಾಲೂಕು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದೇ ವೇಳೆ ಮಹಿಳಾ ಆಯೋಗದ ಅಧ್ಯಕ್ಷೆ ಮಧುಗಿರಿಗೆ ಬಂದರೂ ಕೂಡ ಗಾಯಾಳು ಬಾಲಕಿಯನ್ನ ಭೇಟಿಯಾಗಿಲ್ಲ.

ಕಾಂಗ್ರೆಸ್​ನ ಮಹಿಳಾ ಸಮಾವೇಶದಲ್ಲಿ ಭಾಗಿಯಾಗಿದ್ದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ

ನಿನ್ನೆ (ಮಾ.13) ಮಧುಗಿರಿ ಪಟ್ಟಣದಲ್ಲಿ ಕಾಂಗ್ರೆಸ್​ನ ಮಹಿಳಾ ಸಮಾವೇಶದಲ್ಲಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ‌ಚೌಧರಿ ಭಾಗಿಯಾಗಿದ್ದರು. ಕಾರ್ಯಕ್ರಮ ನಡೆದ ಸ್ಥಳದ ಪಕ್ಕದಲ್ಲೇ ಇರುವ ಸರ್ಕಾರಿ ಆಸ್ಪತ್ರೆಯಲ್ಲಿ ಸಂತ್ರಸ್ಥ ಬಾಲಕಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಕನಿಕರಕ್ಕೂ ಗಾಯಾಳು ಮಗುವನ್ನ ನಾಗಲಕ್ಷ್ಮಿ‌ಚೌದರಿ ಭೇಟಿ ಮಾಡಿಲ್ಲ. ಕೇವಲ ರಾಜಕಾರಣ ಭಾಷಣ ಮಾಡಿಕೊಂಡು ತೆರಳಿದ್ದಾರೆ. ಈ ಅಧ್ಯಕ್ಷೆಯ ನಡೆಗೆ ಸಾರ್ವಜನಿಕರಿಂದ ಭಾರೀ  ಆಕ್ರೋಶ ವ್ಯಕ್ತವಾಗಿದೆ.

ಇದನ್ನೂ ಓದಿ:ತುಮಕೂರು: ಬ್ಯಾಂಕ್​ನಲ್ಲಿದ್ದ ಹಣಕ್ಕಾಗಿ ಇಸ್ತ್ರಿ ಪೆಟ್ಟಿಗೆಯಿಂದ ಮಗಳ ತೊಡೆ ಸುಟ್ಟ ದೊಡ್ಡಮ್ಮ

ತನ್ನ ದೊಡ್ಡಮ್ಮನಿಂದ ಗಾಯಗೊಂಡು‌ ಚಿಕಿತ್ಸೆ ಪಡೆಯುತ್ತಿರುವ ಲಕ್ಷ್ಮಿ

ಮಧುಗಿರಿ ತಾಲೂಕಿನ ಪೂಜಾರಹಳ್ಳಿ ಗ್ರಾಮದ ನಿವಾಸಿಯಾಗಿರುವ ಬಾಲಕಿ ಲಕ್ಷ್ಮೀಯ ತಾಯಿ ಕಳೆದ ನಾಲ್ಕು ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಮೃತ ತಾಯಿ ನರಸಮ್ಮ ಹಾಗೂ ಬಾಲಕಿ ಲಕ್ಷ್ಮೀ ಹೆಸರಿನಲ್ಲಿ ಜಂಟಿ ಖಾತೆ (Joint Account) ಇತ್ತು. ಮೃತ ತಾಯಿ ತನ್ನ ಮಗಳಿಗಾಗಿ ನಾಲ್ಕು ಲಕ್ಷ ಫಿಕ್ಸ್ ಡೆಪಾಸಿಟ್ ಮಾಡಿದ್ದರು. ಇದು ನರಸಮ್ಮ ಅವರ ಕಣ್ಣು ಕುಕ್ಕುವಂತೆ ಮಾಡಿತು. ಹೀಗಾಗಿ ನರಸಮ್ಮ ಶಿವರಾತ್ರಿ ಹಬ್ಬಕ್ಕೆಂದು (ಮಾ.09) ಲಕ್ಷ್ಮೀಯನ್ನು ತಮ್ಮ ಊರಿಗೆ ಕರೆಸಿದ್ದಾಳೆ. ಬಳಿಕ ನರಸಮ್ಮ ಚೆಕ್​ಗೆ ಸಹಿ‌ ಮಾಡು ಅಂತ ಬಾಲಕಿ ಲಕ್ಷ್ಮೀಗೆ ಕಿರುಕುಳ ನೀಡಿದ್ದಾಳೆ. ಆದರೂ ಬಾಲಕಿ ಲಕ್ಷ್ಮೀ ಒಪ್ಪದಿದ್ದಾಗ ನರಸಮ್ಮ ಇಸ್ತ್ರಿ ಪೆಟ್ಟಿಗೆಯಿಂದ ಬಾಲಕಿ ಲಕ್ಷ್ಮೀ ತೊಡೆಗೆ ಸುಟ್ಟಿದ್ದಳು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:45 pm, Thu, 14 March 24