ತುಮಕೂರು, ಡಿ.16: ರೈತರ ಮಕ್ಕಳಿಗೆ ಹೆಣ್ಣು ಕೊಡುತ್ತಿಲ್ಲ, ಹಾಗಾಗಿ ಕನ್ಯಾಭಾಗ್ಯ ಯೋಜನೆ ಜಾರಿಗೆ ತಂದು ಮದುವೆ ಮಾಡಿಸಿ ಎಂದು ರೈತನೊಬ್ಬ ಜನತಾ ದರ್ಶನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ್ದಾರೆ. ತುಮಕೂರು (Tumakur) ಜಿಲ್ಲೆಯ ಶಿರಾ ನಗರದ ಮಿನಿ ವಿಧಾನಸೌಧ ಆವರಣದಲ್ಲಿ ಜನತಾ ದರ್ಶನ ನಡೆಯುತ್ತಿದ್ದು, ನೂತನ ಜಿಲ್ಲಾಧಿಕಾರಿ ಶುಭಕಲ್ಯಾಣ್ ಕಾರ್ಯಕ್ರಮದಲ್ಲಿ ಜನರ ಅಹವಾಲುಗಳನ್ನು ಸ್ವೀಕರಿಸುತ್ತಿದ್ದರು.
ಈ ವೇಳೆ ರೈತರ ಮಕ್ಕಳಿಗೆ ಹೆಣ್ಣು ಕೊಡ್ತಿಲ್ಲ, ದಯವಿಟ್ಟು ನಮ್ಮ ಮಕ್ಕಳಿಗೆ ಹೆಣ್ಣು ಕೊಡ್ಸಿ ಎಂದು ಬರೆದ ಅರ್ಜಿಯನ್ನ ಕೊಟ್ಟ ಶಿರಾ ತಾಲೂಕಿನ ಚಿಕ್ಕನಕೋಟೆ ಗ್ರಾಮದ ರೈತ ರಾಮಣ್ಣ ರೈತರು ದೇಶದ ಬೆನ್ನೆಲುಬು, ಅನ್ನ ಹಾಕುವ ದೇವರು ಎಂಬೆಲ್ಲ ಹೊಗಳಿಕೆ ನಮಗೆ ಬೇಡ, ಕನ್ಯಾಭಾಗ್ಯ ಯೋಜನೆ ಜಾರಿಗೊಳಿಸಿ ರೈತ ಮಕ್ಕಳನ್ನ ಮದುವೆ ಮಾಡಿಸಿ ಎಂದು ಮನವಿ ಸಲ್ಲಿಸಿದ್ದಾರೆ.
ಇದನ್ನೂ ಓದಿ:ರೈತರ ಮಕ್ಕಳಿಗೆ ಯಾಕಯ್ಯ ಹೆಣ್ಣು ಕೊಡಲ್ಲ? ನಾನು ಮದುವೆಯಾಗಿಲ್ವಾ ಅಂತ ಸಿದ್ದರಾಮಯ್ಯ ಹೇಳಿದಾಗ ಸಭಿಕರಿಗೆ ಜೋರು ನಗು!
ರೈತರ ಮಕ್ಳಳಿಗೆ ಯಾಕೆ ಹೆಣ್ಣು ಕೊಡಲ್ಲ? ನಾನು ಮದುವೆಯಾಗಿಲ್ವಾ? ಸಿದ್ದರಾಮಯ್ಯ
ಮೈಸೂರು: ಮೈಸೂರಿನಲ್ಲಿ ಅಕ್ಟೋಬರ್ 07 ರಂದು ಆಯೋಜಿಲಾಗಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಷಣ ಮಾಡುವಾಗ ಸಭಿಕರಲ್ಲಿ ಒಬ್ಬರು ರೈತರ ಮಕ್ಕಳಿಗೆ ಹೆಣ್ಣು ಕೊಡುತ್ತಿಲ್ಲ ಎಂದು ಹೇಳಿದ್ದರು. ಅವರ ಮಾತಿಗೆ ರೇಗಿದ ಸಿದ್ದರಾಮಯ್ಯ, ‘ಹಾಗೆಲ್ಲ ಸುಳ್ಳಾಡಬಾರದು, ರೈತರ ಮಕ್ಕಳಿಗೆ ಹೆಣ್ಣ್ಯಾಕೆ ಕೊಡಲ್ಲ ಎಂದು ಪ್ರಶ್ನಿಸಿದ್ದರು. ರೈತರ ಹೆಣ್ಣು ಮಕ್ಕಳು, ಗಂಡು ಮಕ್ಕಳು ಯಾರೂ ಮದುವೆ ಆಗಿಲ್ವಾ? ಓದಿದರೂ ನಿರುದ್ಯೋಗಿಯಾಗುರುವ ಯುವಕನಿಗೆ ಹೆಣ್ಣು ಕೊಡಲ್ಲ ಎಂದ ಸಿದ್ದರಾಮಯ್ಯ, ನಾನೂ ರೈತನ ಮಗನೇ ನಂಗೆ ಮದುವೆಯಾಗಿಲ್ವಾ ಎಂದು ಹೇಳಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:55 pm, Sat, 16 December 23