ಕೊರಟಗೆರೆಯಲ್ಲಿ ಹುಚ್ಚು ನಾಯಿ ದಾಳಿ; ವೃದ್ದೆ ಸೇರಿದಂತೆ 10ಕ್ಕೂ ಹೆಚ್ಚು ಜನರಿಗೆ ಗಾಯ

ಮುಂಜಾನೆಯಿಂದಲೂ ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡುತ್ತಿರುವ ಹುಚ್ಚು ನಾಯಿ, ಓರ್ವ ವೃದ್ದೆಯ ಮುಖಕ್ಕೆ ಕಚ್ಚಿ ಗಂಭೀರ ಗಾಯಗೊಳಿಸಿದೆ. ಈ ಮೂಲಕ ಕೊರಟಗೆರೆಯಲ್ಲಿ ಆತಂಕ ಸೃಷ್ಟಿ ಮಾಡಿದೆ. ಈ ಹಿನ್ನಲೆ ಸಾರ್ವಜನಿಕರು ನಾಯಿ ಹಿಡಿಯುವಂತೆ ಪಟ್ಟಣ ಪಂಚಾಯತಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಿಲ್ಲವೆಂಬ ಆರೋಪ ಕೇಳಿಬಂದಿದೆ.

ಕೊರಟಗೆರೆಯಲ್ಲಿ ಹುಚ್ಚು ನಾಯಿ ದಾಳಿ; ವೃದ್ದೆ ಸೇರಿದಂತೆ 10ಕ್ಕೂ ಹೆಚ್ಚು ಜನರಿಗೆ ಗಾಯ
ಕೊರಟಗೆರೆಯಲ್ಲಿ ಹುಚ್ಚು ನಾಯಿ ದಾಳಿ
Edited By:

Updated on: Mar 07, 2024 | 6:41 PM

ತುಮಕೂರು, ಮಾ.07: ಜಿಲ್ಲೆಯ ಕೊರಟಗೆರೆ(Koratagere) ಪಟ್ಟಣದಲ್ಲಿ 10ಕ್ಕೂ ಹೆಚ್ಚು ಜನರ ಮೇಲೆ ಹುಚ್ಚು ನಾಯಿ(Mad Dog) ದಾಳಿ ನಡೆಸಿದೆ.  ಮುಂಜಾನೆಯಿಂದಲೂ ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡುತ್ತಿರುವ ಹುಚ್ಚು ನಾಯಿ, ಓರ್ವ ವೃದ್ದೆಯ ಮುಖಕ್ಕೆ ಕಚ್ಚಿ ಗಂಭೀರ ಗಾಯಗೊಳಿಸಿದೆ. ಈ ಮೂಲಕ ಕೊರಟಗೆರೆಯಲ್ಲಿ ಆತಂಕ ಸೃಷ್ಟಿ ಮಾಡಿದೆ. ಈ ಹಿನ್ನಲೆ ಸಾರ್ವಜನಿಕರು ನಾಯಿ ಹಿಡಿಯುವಂತೆ ಪಟ್ಟಣ ಪಂಚಾಯತಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಿಲ್ಲವೆಂಬ ಆರೋಪ ಕೇಳಿಬಂದಿದೆ. ಕೂಡಲೇ ಹುಚ್ಚು ನಾಯಿ ಸೆರೆ ಹಿಡಿಯುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಇನ್ನು ನಾಯಿ ಕಡಿತಕ್ಕೊಳಗಾದವರಿಗೆ ಕೊರಟಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜೊತೆಗೆ ಗಂಭೀರ ಗಾಯಗೊಂಡಿರುವ ವೃದ್ದೆಯನ್ನ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲು, ಎಷ್ಟೇ ಬಾರಿ ಕರೆ ಮಾಡಿದರೂ ಆಂಬ್ಯುಲೆನ್ಸ್ ಬಾರದ ಹಿನ್ನಲೆ, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ತಾಯಿಯಿಂದ ಬೇರ್ಪಟ್ಟ ಮರಿ ಆನೆ ನಗರದಲ್ಲಿ ಬಿಂದಾಸ್ ಓಡಾಟ

ಚಾಮರಾಜನಗರ: ತಾಯಿಯಿಂದ ಬೇರ್ಪಟ್ಟ ಮರಿ ಆನೆ ನಗರದಲ್ಲಿ ಬಿಂದಾಸ್ ಓಡಾಟ ನಡೆಸಿದೆ. ಚಾಮರಾಜನಗರ ಜಿಲ್ಲೆಯ ಗಡಿ ಭಾಗದ ತಮಿಳುನಾಡಿನ ಅರೆಪಾಳ್ಯಕ್ಕೆ ಬಂದ ಮರಿಯಾನೆ, ದಿಕ್ಕು ತಪ್ಪಿಸಿಕೊಂಡು ಹಾಸನೂರು ಸಮೀಪದ ಅರೆಪಾಳ್ಯದಲ್ಲಿ ಓಡಾಟ ನಡೆಸಿದೆ. ತಮಿಳುನಾಡು ಅರಣ್ಯಾಧಿಕಾರಿಗಳಿಂದ ಆನೆ ಮರಿ ರಕ್ಷಿಸಿ ಆರೈಕೆ ಮಾಡಲಾಗುತ್ತಿದೆ. ಇನ್ನು ತಾಯಿ ಆನೆಯನ್ನ ಪತ್ತೆ ಹಚ್ಚಲು ತಮಿಳುನಾಡು ಅರಣ್ಯಾಧಿಕಾರಿಗಳು ಮುಂದಾಗಿದ್ದಾರೆ.

ಇದನ್ನೂ ಓದಿ:ಕಲಬುರಗಿ: ಸಿಕ್ಕವರ ಮೇಲೆ ದಾಳಿ ಮಾಡಿದ ಹುಚ್ಚು ನಾಯಿ; ಆಸ್ಪತ್ರೆ ‌ಪಾಲಾದ 13 ಜನ, ಮುಂದೆನಾಯ್ತು?

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಪ್ಡೇಟ್​ ಆಗುತ್ತಿದೆ…..