ಶಿರಾ ತಾಲೂಕು ಎಸ್ ಸಿ ಕಾಲೋನಿಯಲ್ಲಿ ಹತ್ತಾರು ಗುಡಿಸಿಲುಗಳಿಗೆ ಬೆಂಕಿ, ನೆಲದಿಮ್ಮನಹಳ್ಳಿ ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ
ತುಮಕೂರು ಜಿಲ್ಲೆ, ಶಿರಾ ತಾಲೂಕು ಕಳ್ಳಂಬೆಳ ಹೋಬಳಿ ನೆಲದಿಮ್ಮನಹಳ್ಳಿ ಎಸ್ ಸಿ ಕಾಲೋನಿಯಲ್ಲಿ ನಿನ್ನೆ ಬುಧವಾರ ಸಂಜೆ ಹತ್ತಾರು ಗುಡಿಸಿಲುಗಳಿಗೆ ಬೆಂಕಿ ಬಿದ್ದಿದೆ. ಸುಮಾರು 20 ವರ್ಷಗಳಿಂದ ಗುಡಿಸಿಲುಗಳಲ್ಲಿ ಸುಮಾರು 30 ಕುಟುಂಬಗಳು ವಾಸವಾಗಿದ್ದು ನೆಲದಿಮನಹಳ್ಳಿ ಗ್ರಾಮ ಪಂಚಾಯಿತಿ ಅಲ್ಲಿಗೆ ಯಾವುದೇ ಮೂಲಭೂತ ಸೌಕರ್ಯಗಳನ್ನು ನೀಡದೆ ಸತಾಯಿಸುತ್ತಾ ಬಂದಿದೆ.
ತುಮಕೂರು, ಮಾರ್ಚ್ 7: ಜಿಲ್ಲೆಯ ಶಿರಾ ತಾಲೂಕು ಕಳ್ಳಂಬೆಳ ಹೋಬಳಿ ನೆಲದಿಮ್ಮನಹಳ್ಳಿ ಎಸ್ ಸಿ ಕಾಲೋನಿಯಲ್ಲಿ ನಿನ್ನೆ ಬುಧವಾರ ಸಂಜೆ ಹತ್ತಾರು ಗುಡಿಸಿಲುಗಳಿಗೆ ಬೆಂಕಿ ಬಿದ್ದಿದೆ. ಸುಮಾರು 20 ವರ್ಷಗಳಿಂದ ಗುಡಿಸಿಲುಗಳಲ್ಲಿ ಸುಮಾರು 30 ಕುಟುಂಬಗಳು ವಾಸವಾಗಿದ್ದು ನೆಲದಿಮನಹಳ್ಳಿ ಗ್ರಾಮ ಪಂಚಾಯಿತಿ ಅಲ್ಲಿಗೆ ಯಾವುದೇ ಮೂಲಭೂತ ಸೌಕರ್ಯಗಳನ್ನು ನೀಡದೆ ಸತಾಯಿಸುತ್ತಾ ಬಂದಿದೆ. ಅಧಿಕಾರಿಗಳು ಯಾವುದೇ ಮನೆಯ ಗ್ರಾಂಟುಗಳನ್ನು ನೀಡದೆ ಸತಾಯಿಸುತ್ತಾ ಬಂದಿದ್ದಾರೆ.
ತುಮಕೂರು, ಮಾ.05: ಇತ್ತೀಚೆಗೆ ಅಗ್ನಿ ಅವಘಡಗಳು ತುಸು ಹೆಚ್ಚುತ್ತಿದೆ. ಅದರಂತೆ ಇದೀಗ ಪೇಪರ್ ಗೋದಾಮಿನಲ್ಲಿ ಆಕಸ್ಮಿಕ ಬೆಂಕಿ ತಗುಲಿ ನಾಲ್ವರಿಗೆ ಗಾಯವಾದ ಘಟನೆ ತುಮಕೂರು ತಾಲೂಕಿನ ವಸಂತನರಸಾಪುರ (Vasanthanarasapura) ಕೈಗಾರಿಕಾ ಪ್ರದೇಶದಲ್ಲಿ ಸಂಭವಿಸಿದೆ. ಜೋದಾನಿ ಪ್ರೈ. ಲಿಮಿಟೆಡ್ ಸಂಸ್ಥೆಗೆ ಸೇರಿದ ಪೇಪರ್ ಗೋದಾಮು ಇದಾಗಿದ್ದು, ಕೆಲಸದ ವೇಳೆ ಈ ದುರ್ಘಟನೆ ನಡೆದಿದೆ. ಈ ಕುರಿತು ಕೋರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಎಸ್ಪಿ ನಿವಾಸದ ಹೊರ ಭಾಗದಲ್ಲಿ ಹುಲ್ಲಿಗೆ ಆಕಸ್ಮಿಕವಾಗಿ ಬೆಂಕಿ
ಯಾದಗಿರಿ: ನಗರದ ಚಿತ್ತಾಪುರ ರಸ್ತೆಯಲ್ಲಿರುವ ಎಸ್ಪಿ ನಿವಾಸದ ಹೊರ ಭಾಗದಲ್ಲಿ ಹುಲ್ಲಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಘಟನೆ ನಡೆದಿದೆ. ಬೇಸಿಗೆಕಾಲ ಆಗಿರುವುದರಿಂದ ಸ್ವಲ್ಪ ಬೆಂಕಿ ತಗುಲಿದರೂ ದೊಡ್ಡ ಮಟ್ಟದಲ್ಲಿ ಅದು ಹರಡುತ್ತದೆ. ಇದೀಗ ಒಣಗಿರುವ ಹುಲ್ಲಿಗೆ ಬೆಂಕಿ ತಗುಲಿ ಈ ಅವಘಡ ಸಂಭವಿಸಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿದ್ದು, ಅಗ್ನಿಶಾಮಕ ದಳ ಹಾಗೂ ಪೊಲೀಸರ ಸಹಕಾರದೊಂದಿಗೆ ಬೆಂಕಿ ನಂದಿಸಲಾಗಿದೆ. ಈ ಘಟನೆ ಯಾದಗಿರಿ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನೂ ಓದಿ:ಚಾಮರಾಜನಗರ ವ್ಯಾಪ್ತಿಯಲ್ಲಿ ಕಾಡಿಗೆ ಬೆಂಕಿ: ಕಿಡಿಗೇಡಿಗಳು ಬೆಂಕಿ ಹಾಕಿರುವುದು ಮೇಲ್ನೊಟಕ್ಕೆ ಪತ್ತೆ