ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ: ಬಳ್ಳಾರಿಯಲ್ಲಿ ಶಂಕಿತ ಬಾಂಬರ್ಗಾಗಿ ಹುಡುಕಾಟ ನಡೆಸಿರುವ ಎನ್ಐಎ ಅಧಿಕಾರಿಗಳು
ಅವರಿಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಶಂಕಿತನು ಬಾಂಬ್ ಸ್ಫೋಟಿಸಿದ ಬಳಿಕ ಬೆಂಗಳೂರುನಿಂದ ತುಮಕೂರುಗೆ ಹೋಗಿದ್ದಾನೆ ಮತ್ತು ಅಲ್ಲಿಂದ ಬಳ್ಳಾರಿಯ ಕಡೆ ಹೊರಟಿದ್ದಾನೆ. ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ನಿನ್ನೆ ತುಮಕೂರುನಲ್ಲಿ ಹುಡುಕಾಟ ನಡೆಸಿ ಅಲ್ಲಿಂದ ಬಳ್ಳಾರಿಗೆ ತೆರಳಿದ್ದಾರೆ. ದೃಶ್ಯಗಳಲ್ಲಿ ಬಳ್ಳಾರಿ ನಗರದ ಕೇಂದ್ರೀಯ ಬಸ್ ನಿಲ್ದಾಣವನ್ನು ನೋಡಬಹುದು.
ಬಳ್ಳಾರಿ: ಕಳೆದ ವಾರ ಬೆಂಗಳೂರು ಬ್ರೂಕ್ಫೀಲ್ಡ್ ಪ್ರದೇಶದಲ್ಲಿರುವ ದಿ ರಾಮೇಶ್ವರಂ ಕೆಫೆಯಲ್ಲಿ (The Rameshwaram Café) ನಡೆದ ಬಾಂಬ್ ಸ್ಫೋಟ ಪ್ರಕರಣದ ತನಿಖೆ ತೀವ್ರಗೊಂಡಿದೆಯಾದರೂ ಐಈಡಿ ಬಾಂಬನ್ನು ಟೈಮರ್ ಮೂಲಕ ಸಿಡಿಸಿದ ಶಂಕಿತನ (suspected bomber) ಸುಳಿವು ತನಿಖಾ ಏಜೆನ್ಸಿಗಳಿಗೆ (investigating agencies) ಇದುವರೆಗೆ ಸಿಕ್ಕಿಲ್ಲ. ಎನ್ಐಎ ಅಧಿಕಾರಿಗಳು ಅವನನ್ನು ಪತ್ತೆ ಮಾಡುವ ಕಾರ್ಯದಲ್ಲಿ ತೊಡಗಿದ್ದು, ತುಮಕೂರು ಮತ್ತು ಬಳ್ಳಾರಿಯಲ್ಲಿ ಹುಡುಕಾಟ ನಡೆಸಿದ್ದಾರೆ. ಅವರಿಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಶಂಕಿತನು ಬಾಂಬ್ ಸ್ಫೋಟಿಸಿದ ಬಳಿಕ ಬೆಂಗಳೂರುನಿಂದ ತುಮಕೂರುಗೆ ಹೋಗಿದ್ದಾನೆ ಮತ್ತು ಅಲ್ಲಿಂದ ಬಳ್ಳಾರಿಯ ಕಡೆ ಹೊರಟಿದ್ದಾನೆ. ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ನಿನ್ನೆ ತುಮಕೂರುನಲ್ಲಿ ಹುಡುಕಾಟ ನಡೆಸಿ ಅಲ್ಲಿಂದ ಬಳ್ಳಾರಿಗೆ ತೆರಳಿದ್ದಾರೆ. ದೃಶ್ಯಗಳಲ್ಲಿ ಬಳ್ಳಾರಿ ನಗರದ ಕೇಂದ್ರೀಯ ಬಸ್ ನಿಲ್ದಾಣವನ್ನು ನೋಡಬಹುದು. ಎನ್ಐಎ ನ ಹತ್ತು ಅಧಿಕಾರಿಗಳು ಎರಡು ಕಾರರುಗಳಲ್ಲಿ ಬಳ್ಳಾರಿಯಲ್ಲಿ ಬೀಡು ಬಿಟ್ಟಿದ್ದಾರೆ. ಏತನ್ಮಧ್ಯೆ ಬಾಂಬ್ ಸ್ಫೋಟಗೊಳಿಸಿದವನ ಫೋಟೋಗಳನ್ನು ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ್ದು ಸುಳಿವು ನೀಡಿದವರಿಗೆ ರೂ. 10 ಲಕ್ಷ ಬಹುಮಾನ ಘೋಷಿಸಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬಾಂಬ್ ಪ್ರಕರಣದ ಬಳಿಕ ಪುನರಾರಂಭಗೊಳ್ಳಲು ಅಣಿಯಾಗುತ್ತಿರುವ ಬೆಂಗಳೂರು ಬ್ರೂಕ್ಫೀಲ್ಡ್ ಪ್ರದೇಶದ ದಿ ರಾಮೇಶ್ವರಂ ಕೆಫೆ