ಬಾಂಬ್ ಪ್ರಕರಣದ ಬಳಿಕ ಪುನರಾರಂಭಗೊಳ್ಳಲು ಅಣಿಯಾಗುತ್ತಿರುವ ಬೆಂಗಳೂರು ಬ್ರೂಕ್ಫೀಲ್ಡ್ ಪ್ರದೇಶದ ದಿ ರಾಮೇಶ್ವರಂ ಕೆಫೆ

ಬಾಂಬ್ ಪ್ರಕರಣದ ಬಳಿಕ ಪುನರಾರಂಭಗೊಳ್ಳಲು ಅಣಿಯಾಗುತ್ತಿರುವ ಬೆಂಗಳೂರು ಬ್ರೂಕ್ಫೀಲ್ಡ್ ಪ್ರದೇಶದ ದಿ ರಾಮೇಶ್ವರಂ ಕೆಫೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 05, 2024 | 5:16 PM

ಕೆಫೆಯಲ್ಲಿ ಬಾಂಬ್ ಇಟ್ಟವನ ಚಲನವಲನಗಳ ಸಿಸಿಟಿವಿ ಫುಟೇಜ್ ಲಭ್ಯವಾಗಿದ್ದರೂ ಅವನ ಬಗ್ಗೆ ಇನ್ನೂ ಸುಳಿವಿಲ್ಲ. ಅವನು ಪಾತಾಳದಲ್ಲಿ ಅಡಗಿ ಕೂತಿದ್ದರೂ ಪೊಲೀಸರಾಗಲೀ ಬೇರೆ ಬೇರೆ ಏಜೆನ್ಸಿಗಳ ತನಿಖಾಧಕಾರಿಗಳಾಗಲೀ ಹೊರಗೆಳೆದು ತರುತ್ತಾರೆ ಅದರಲ್ಲಿ ಅನುಮಾನವೇ ಬೇಡ, ಆದರೆ ಅವನ ದುಷ್ಕೃತ್ಯದಿಂದಾಗಿ ಬೆಂಗಳೂರು ನಿವಾಸಿಗಳ ನೆಮ್ಮದಿ ಹಾಳಾಗಿದ್ದು ಸುಳ್ಳಲ್ಲ.

ಬೆಂಗಳೂರು: ನಗರದ ಬ್ರೂಕ್ಫೀಲ್ಡ್ ಪ್ರದೇಶದಲ್ಲಿರುವ ದಿ ರಾಮೇಶ್ವರಂ ಕೆಫೆ (The Rameshwaram Café) ಯಾವತ್ತೂ ಈ ಸ್ಥಿತಿಯಲ್ಲಿ ಕಂಡಿದಿಲ್ಲ. ಪ್ರತಿದಿನ ಗ್ರಾಹಕರಿಂದ ಗಿಜಿಗಿಡುತ್ತಿದ್ದ ಹೋಟೆಲ್ ಬಾಂಬ್ ಪ್ರಕರಣದ (bomb blast case) ಬಳಿಕ ಗ್ರಾಹಕರಿಗಾಗಿ ಮುಚ್ಚಿದ್ದು ಅಲ್ಲಿ ಕೇವಲ ಪೊಲೀಸರು, ಬೇರೆ ಏಜೆನ್ಸಿಗಳ ತನಿಖಾಧಿಕಾರಿಗಳು, ಡಾಗ್ ಸ್ಕ್ವ್ಯಾಡ್ ಮತ್ತು ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಮಾತ್ರ ಕಾಣುತ್ತಿದ್ದರು. ನಿನ್ನೆಯಿಂದ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು (NIA officials) ಮಹಜರ್ ನಡೆಸಿದ್ದು ಇವತ್ತು ಅವರು ತಮ್ಮ ಕೆಲಸ ಮುಗಿಸಿ ವಾಪಸ್ಸು ಹೋಗಿದ್ದಾರೆ. ಕೆಫೆಯ ಮಾಲೀಕ ಶುಕ್ರವಾರದಿಂದ ಗ್ರಾಹಕರಿಗಾಗಿ ಸೇವೆ ಆರಂಭಿಸಲಾಗುವುದೆಂದು ಹೇಳಿದ್ದಾರೆ. ಇದೇ ಹಿನ್ನೆಲೆಯಲ್ಲಿ ಕೆಫೆಯ ಸ್ವಚ್ಛತಾ ಕಾರ್ಯ ಯದ್ಧೋಪಾದಿಯಲ್ಲಿ ಶುರುಮಾಡಲಾಗಿದೆ. ಕೆಫೆಯಲ್ಲಿ ಬಾಂಬ್ ಇಟ್ಟವನ ಚಲನವಲನಗಳ ಸಿಸಿಟಿವಿ ಫುಟೇಜ್ ಲಭ್ಯವಾಗಿದ್ದರೂ ಅವನ ಬಗ್ಗೆ ಇನ್ನೂ ಸುಳಿವಿಲ್ಲ. ಅವನು ಪಾತಾಳದಲ್ಲಿ ಅಡಗಿ ಕೂತಿದ್ದರೂ ಪೊಲೀಸರಾಗಲೀ ಬೇರೆ ಬೇರೆ ಏಜೆನ್ಸಿಗಳ ತನಿಖಾಧಕಾರಿಗಳಾಗಲೀ ಹೊರಗೆಳೆದು ತರುತ್ತಾರೆ ಅದರಲ್ಲಿ ಅನುಮಾನವೇ ಬೇಡ, ಆದರೆ ಅವನ ದುಷ್ಕೃತ್ಯದಿಂದಾಗಿ ಬೆಂಗಳೂರು ನಿವಾಸಿಗಳ ನೆಮ್ಮದಿ ಹಾಳಾಗಿದ್ದು ಸುಳ್ಳಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಬೆಂಗಳೂರಲ್ಲಿ ನಿಗೂಢ ಸ್ಫೋಟ: ರಾಮೇಶ್ವರಂ ಕೆಫೆಯಲ್ಲಿ ಇದಕ್ಕೂ ಮೊದಲು ಸಹ ಸ್ಫೋಟಕಗಳನ್ನಿಡುವ ಪ್ರಯತ್ನ ನಡೆದಿತ್ತೇ?