AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮೇಶ್ವರಂ ಕೆಫೆಯಲ್ಲಿ 2 ಬಾಂಬ್ ಒಂದೇ ಸಲ ಸ್ಫೋಟಿಸಲು ಆರೋಪಿ ಪ್ಲ್ಯಾನ್: FSL​ ​ವರದಿ ಬಹಿರಂಗ

ನಿನ್ನೆ ಕುಂದಲಹಳ್ಳಿಯ ರಾಮೇಶ್ವರಂ ಕೆಫೆ ಹೋಟೆಲ್‌ನಲ್ಲಿ ಸ್ಫೋಟ ಸಂಭವಿಸಿದೆ. 9 ಜನ ಗಾಯಗೊಂಡಿದ್ದಾರೆ. ಅಪರಿಚಿತ ವ್ಯಕ್ತಿ ಇಟ್ಟು ಹೋಗಿರುವ ಬ್ಯಾಗ್‌ನಿಂದ ಸ್ಫೋಟ ಸಂಭವಿಸಿದ್ದು, ತನಿಖೆ ನಡೆಯುತ್ತಿದೆ. ಇದೀಗ ಬಾಂಬ್​ ಸ್ಫೋಟ ಬಗ್ಗೆ ಎಫ್​ಎಸ್​ಎಲ್​​ ​ವರದಿ ಬಹಿರಂಗವಾಗಿದ್ದು, 2 ಬಾಂಬ್ ಒಂದೇ ಸಲ ಸ್ಫೋಟಿಸಲು ಆರೋಪಿಯಿಂದ ಪ್ಲ್ಯಾನ್ ಮಾಡಲಾಗಿತ್ತು ಎಂಬ ಸ್ಫೋಟಕ ಮಾಹಿತಿ ಲಭ್ಯವಾಗಿದೆ.

ರಾಮೇಶ್ವರಂ ಕೆಫೆಯಲ್ಲಿ 2 ಬಾಂಬ್ ಒಂದೇ ಸಲ ಸ್ಫೋಟಿಸಲು ಆರೋಪಿ ಪ್ಲ್ಯಾನ್: FSL​ ​ವರದಿ ಬಹಿರಂಗ
ಬಾಂಬ್ ಸ್ಫೋಟ ಪ್ರಕರಣ
Kiran HV
| Updated By: ಗಂಗಾಧರ​ ಬ. ಸಾಬೋಜಿ|

Updated on: Mar 02, 2024 | 7:20 PM

Share

ಬೆಂಗಳೂರು, ಮಾರ್ಚ್​ 2: ನಿನ್ನೆ ಕುಂದಲಹಳ್ಳಿಯ ರಾಮೇಶ್ವರಂ ಕೆಫೆ (Rameshwaram Cafe) ಹೋಟೆಲ್‌ನಲ್ಲಿ ಸ್ಫೋಟ ಸಂಭವಿಸಿದೆ. 9 ಜನ ಗಾಯಗೊಂಡಿದ್ದಾರೆ. ಅಪರಿಚಿತ ವ್ಯಕ್ತಿ ಇಟ್ಟು ಹೋಗಿರುವ ಬ್ಯಾಗ್‌ನಿಂದ ಸ್ಫೋಟ ಸಂಭವಿಸಿದ್ದು, ತನಿಖೆ ನಡೆಯುತ್ತಿದೆ. ಇದೀಗ ಬಾಂಬ್​ ಸ್ಫೋಟ ಬಗ್ಗೆ ಎಫ್​ಎಸ್​ಎಲ್​​ ​ವರದಿ ಬಹಿರಂಗವಾಗಿದ್ದು, 2 ಬಾಂಬ್ ಒಂದೇ ಸಲ ಸ್ಫೋಟಿಸಲು ಆರೋಪಿಯಿಂದ ಪ್ಲ್ಯಾನ್ ಮಾಡಲಾಗಿತ್ತು ಎಂಬ ಸ್ಫೋಟಕ ಮಾಹಿತಿ ಲಭ್ಯವಾಗಿದೆ. ಟೈಮರ್​ ಫಿಕ್ಸ್​ ಮಾಡುವಾಗ 5 ಸೆಕೆಂಡ್​ ಅಂತರದ ಬಗ್ಗೆ ಗೊತ್ತಿಲ್ಲದಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. 5 ಸೆಕೆಂಡ್ ಅಂತರದಲ್ಲಿ 2 ಬಾಂಬ್​ ಸ್ಫೋಟವಾಗಿದ್ದರಿಂದ ಪ್ರಮಾದ ತಪ್ಪಿದೆ. ಒಂದೇ ವೇಳೆ 2 ಬಾಂಬ್ ಸ್ಫೋಟಗೊಂಡಿದ್ದರೆ ಕಟ್ಟಡವೇ ನೆಲಸಮ ಆಗುವುದರೊಂದಿಗೆ ಸಾವು-ನೋವು ಹೆಚ್ಚಾಗುವ ಸಾಧ್ಯತೆ ಇತ್ತು.

ಬೆಂಗಳೂರು ಬಾಂಬ್‌ ಸ್ಫೋಟ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಏಳೆಂಟು ತಂಡ ಮಾಡಿಕೊಂಡು ಬಾಂಬರ್‌ಗಾಗಿ ಹುಡುಕಾಡುತ್ತಿದ್ದಾರೆ.

ಪಕ್ಕಾ‌ ಫ್ರೀ ಪ್ಲಾನ್ ಮಾಡಿ ಸ್ಫೋಟಗೊಳಿಸಿದ ಬಾಂಬರ್

ಎಲ್ಲೂ ಕೂಡ ಸಂಪೂರ್ಣ ಮುಖ ಚಹರೆ ಬಿಟ್ಟುಕೊಡದ ಶಂಕಿತ ಉಗ್ರ, ಮುಖ ಕಾಣದಂತೆ ಬ್ಲಾಕ್ ಮಾಸ್ಕ್, ಸ್ಪೆಕ್ಸ್, ವೈಟ್ ಕ್ಯಾಪ್ ಧರಿಸಿ ಬಂದಿದ್ದಾನೆ. ಹೋಟೆಲ್ ಸುತ್ತಮುತ್ತಲ ಸಿಸಿ ಕ್ಯಾಮಾರದಲ್ಲಿ ಶಂಕಿತ ಚಲನವಲನ ಸೆರೆ ಆಗಿದೆ. ಬೆನ್ನಿಗೆ ಚಿಕ್ಕದೊಂದು ಬ್ಯಾಗ್ ಹಾಕಿ ನಡೆದಾಡುವ ದೃಶ್ಯ ಕಂಡುಬಂದಿದೆ. ಮುಖ ಚಹರೆ ಸಂಪೂರ್ಣ ಇದುವರೆಗೆ ಯಾವ ಸಿಸಿ ಕ್ಯಾಮಾರದಲ್ಲೂ ಸೆರೆಯಾಗಿಲ್ಲ. ರಾಮೇಶ್ವರಂ ಕೆಫೆ ಎಡಭಾಗದ ಬಸ್ ನಿಲ್ದಾಣದಲ್ಲಿ ಬಸ್ ಏರಿ ಹೊರಟಿದ್ದಾನೆ. ಶಂಕಿತ ಸಂಪೂರ್ಣ ಮುಖ ಚಹರೆ ಸಿಗದೆ ಇರುವುದು ಪೊಲೀಸರಿಗೆ ಸವಾಲಾಗಿದೆ.

ಇದನ್ನೂ ಓದಿ: ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ; ನಾಲ್ವರು ಶಂಕಿತರನ್ನು ವಶಕ್ಕೆ ಪಡೆದ ಪೊಲೀಸರು

ಬಾಂಬ್ ಸ್ಫೋಟಿಸಿದ ಆರೋಪಿಯ ಫೋಟೋ ಆಧರಿಸಿ ವಿಚಾರಣೆ ಮಾಡಲಾಗಿತ್ತಿದೆ. ಫೋಟೋದಲ್ಲಿರುವ ಆರೋಪಿ ಭೇಟಿಯಾಗಿದ್ದೀರಾ ಎಂದು ಈ ಹಿಂದೆ ಬಾಂಬ್ ಸ್ಫೋಟಿಸಿದ​ ಆರೋಪಿಗಳನ್ನು ತನಿಖಾ​ ತಂಡ ವಿಚಾರಣೆ ನಡೆಸಿದೆ. ಜೈಲಿನ ಅಧಿಕಾರಿಗಳಿಂದ, 3 ತಿಂಗಳ ಹಿಂದಿನ ಮಾಹಿತಿಯನ್ನು ಪೊಲೀಸರು ಕಲೆ  ಹಾಕುತ್ತಿದ್ದಾರೆ. ಬಾಂಬ್​ ಪ್ರಕರಣದ ಆರೋಪಿಗಳನ್ನು ಯಾರು ಭೇಟಿ ಮಾಡಿದ್ದಾರೆ. ಜೈಲಿನ​ ವಿಸಿಟರ್​​​ ಲಿಸ್ಟ್​​ ಪರಿಶೀಲನೆ ನಡೆಸಲಾಗಿದೆ.

ಇದನ್ನೂ ಓದಿ: ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್: ಈವರೆಗೆ ಏನೆಲ್ಲಾ ಬೆಳವಣಿಗೆಗಳು ಆಯ್ತು? ಇಲ್ಲಿದೆ ವಿವರ

ಸ್ಫೋಟದಲ್ಲಿ 10 ಜನ ಗಾಯಗೊಂಡಿದ್ದಾರೆ. ಈ ಪೈಕಿ ಇಂದು ಮೂವರು ಡಿಸ್ಚಾರ್ಜ್ ಆಗಿದ್ದಾರೆ. ನಾಗಶ್ರೀ ಅನ್ನೋರ ಬಲಗಣ್ಣಿಗೆ ಗಂಭೀರ ಗಾಯ ಆಗಿದೆ. ಸ್ಫೋಟದ ರಭಸಕ್ಕೆ ಕಣ್ಣಿನ ಗುಡ್ಡೆ ಒಡೆದು ಹೊರಬಂದಿದೆ. ಹೀಗಾಗಿ ಮತ್ತೆ ದೃಷ್ಟಿ ಬರುವುದು ಕಷ್ಟವಿದೆ ಎಂದು ವೈದ್ಯರು ಹೇಳಿದ್ದಾರೆ. ಬೆಂಗಳೂರಿನಲ್ಲಿ ಆಗಿರುವ ಬಾಂಬ್‌ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಸದ್ಯ ಮೂವರನ್ನ ವಶಕ್ಕೆ ಪಡೆದಿರುವ ಪೊಲೀಸರು ತೀವ್ರ ವಿಚಾರಣೆ ಮಾಡುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.