AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಲಾರ: ಬಿಸಿಲಿನ ತಾಪಕ್ಕೆ ಮರದಲ್ಲೇ ಒಣಗುತ್ತಿರುವ ಮಾವು; ರೈತರಲ್ಲಿ ಮೂಡಿತು ಆತಂಕ

ಬರಗಾಲಕ್ಕೆ ತುತ್ತಾಗಿದ್ದ ಕೋಲಾರ ಜಿಲ್ಲೆಯ ರೈತರಿಗೆ ಬೇಸಿಗೆ ಆರಂಭವಾಗಿ ತಾಪಮಾನ ಹೆಚ್ಚಾಗುತ್ತಿದ್ದಂತೆ ಮತ್ತೊಂದು ಸಂಕಷ್ಟ ಎದುರಾಗಿದೆ. ಮಾವು ಬೆಳೆದ ರೈತರಿಗೆ ತಾಪಮಾನವೇ ಮುಳ್ಳಾಗುತ್ತಿದ್ದು, ಮಿತಿಮೀರಿದ ತಾಪಮಾನ ಹಾಗೂ ವಾತಾವರಣದ ಏರುಪೇರಿನಿಂದಾಗಿ ಮಾವಿನ ಮರದಲ್ಲಿದ್ದ ಹೂವುಗಳು ಉದುರಲಾರಂಭಿಸಿದ್ದು, ಇದರಿಂದ ರೈತರ ನಿರೀಕ್ಷೆಗಳು ಕದಡುತ್ತಿವೆ.

ಕೋಲಾರ: ಬಿಸಿಲಿನ ತಾಪಕ್ಕೆ ಮರದಲ್ಲೇ ಒಣಗುತ್ತಿರುವ ಮಾವು; ರೈತರಲ್ಲಿ ಮೂಡಿತು ಆತಂಕ
ಬಿಸಿಲಿಗೆ ಬಾಡಿದ ಮಾವು. ತೋಟಗಾರಿಕೆ ಇಲಾಖೆ ಉಪನಿರ್ದೇಶಕ
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Edited By: |

Updated on:Mar 02, 2024 | 7:55 PM

Share

ಕೋಲಾರ, ಮಾ.02: ಕೋಲಾರ(Kolar) ಜಿಲ್ಲೆಯ ಮಾವು ಬೆಳೆಗಾರರಿಗೆ(Mango Farmers) ಇದೀಗ ಆತಂಕ ಶುರುವಾಗಿದೆ. ಜಿಲ್ಲೆಯಲ್ಲಿ ಮಾತ್ರವೇ ಸುಮಾರು 52 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತದೆ. ಆದ್ರೆ, ಮಾವು ಬೆಳೆಗಾರರಿಗೆ ಈ ಬಾರಿ ಕಣ್ಣಲ್ಲಿ ನೀರು ತರಿಸುವಂತ್ತಾಗಿದೆ. ಇಷ್ಟೋತ್ತಿಗಾಗಲೇ ಹೂ ಬಿಟ್ಟು, ಪೀಚು ಕಟ್ಟಬೇಕಿದ್ದ ಮಾವು, ಫೆಬ್ರವರಿ ಕಳೆದರೂ ಕೂಡ ಸರಿಯಾಗಿ ಹೂ ಬಿಟ್ಟಿಲ್ಲ. ಎಂದಿನಂತೆ ಜನವರಿಯಲ್ಲಿ ಶೇ.70 ರಷ್ಟು ಹೂ, ಚಿಗುರು ಕಾಣಿಸಿಕೊಳ್ಳಬೇಕಾಗಿತ್ತು. ಆದ್ರೆ, ಬಿಸಿಲಿನ ತಾಪಮಾನ, ವಾತಾವರಣದಲ್ಲಿ ಏರುಪೇರಾದ ಹಿನ್ನೆಲೆ ಬಿಸಿಲಿನ ಕಣ್ಣಾಮುಚ್ಚಾಲೆಯಾಟಕ್ಕೆ ಮರಗಳು ಚಿಗುರದೆ, ಸರಿಯಾಗಿ ಹೂ ಬಂದಿಲ್ಲ. ಇದರೊಂದಿಗೆ ಈಗಾಗಲೇ ಬಂದಿರುವ ಹೂವು ಕೂಡಾ ಒಣಗಿ ಉದುರಲಾರಂಭಿಸಿದೆ. ಸದ್ಯ ಇದೆಲ್ಲದಕ್ಕೂ ಕಾರಣ ಮಾವಿಗೆ ಬಂದಿರುವ ರೋಗಗಳೇ ಎಂದು ಮಾವು ಬೆಳೆಗಾರರು ಹೇಳುತ್ತಿದ್ದಾರೆ.

ಸದ್ಯ ಮಾವಿನ ತೋಟಗಳಲ್ಲಿ ದಿಕ್ಕೆ ತೋಚದಂತಾಗಿರುವ ಮಾವು ಬೆಳೆಗಾರರು, ಹೀಗೆ ಮುಂದುವರೆದಿದ್ದೆ ಆದಲ್ಲಿ ಮಾವಿನ ಫಸಲು ಸಿಗುವುದು ಅನುಮಾನವಾಗಿದೆ. ಹಾಗಾಗಿ ತೋಟಗಾರಿಕಾ ಇಲಾಖೆ, ರೈತರಿಗೆ ಸರಿಯಾದ ಮಾರ್ಗದರ್ಶನ ಮಾಡಬೇಕು ಎನ್ನುವುದು ರೈತರ ಹಾಗೂ ಮಾವು ಬೆಳೆಗಾರರ ಮಾತಾಗಿದೆ. ಇನ್ನು ಸಾವಿರಾರು ಎಕರೆಯಲ್ಲಿ ಮಾವು ಬೆಳೆಯುವ ಜಿಲ್ಲೆಯ ರೈತರು, ದೇಶದ ನಾನಾ ರಾಜ್ಯಗಳು ಸೇರಿದಂತೆ ವಿದೇಶಗಳಿಗೆ ಮಾವನ್ನ ಕಳುಹಿಸಿ ಕೊಡುತ್ತಾರೆ. ಆದ್ರೆ, ಮಾವು ಆರಂಭದಲ್ಲೆ ಕೈಕೊಡುವ ಸೂಚನೆ ನೀಡಿದ್ದು, ಇಲಾಖೆ ಕೂಡ ಈಗಾಗಲೇ ಅರಿವು ಮೂಡಿಸುವ ಕಾರ್ಯ ಮಾಡುತ್ತಿದೆ.

ಇದನ್ನೂ ಓದಿ:ಬರಗಾಲದ ಮಧ್ಯೆ ರೈತರ ಕೈ ಹಿಡಿದ ಮಾವು ಬೆಳೆ; ಮುಂದಿನ ವರ್ಷದ ಮಾರ್ಚ್‌ನಲ್ಲಿಯೇ ಮಾರುಕಟ್ಟೆಗೆ ಮಾವು ಪ್ರವೇಶ

ಮಾವು ಹೂ, ಚಿಗುರು ಬರದೆ ಇರುವುದರಿಂದ ಎಚ್ಚೆತ್ತುಕೊಂಡಿರುವ ತೋಟಗಾರಿಕೆ ಇಲಾಖೆ, ರೈತರಿಗೆ ಅರಿವು ಮೂಡಿಸಲು ಮುಂದಾಗಿದೆ. ಈಗಾಗಲೇ ತೋಟಗಾರಿಕೆ ವಿಜ್ಞಾನಿಗಳನ್ನ ಕರೆಸಿ ಮಾವು ತಡವಾಗಲು ಹಾಗೂ ಬಿಟ್ಟಿರುವ ಹೂವು ಉದುರಲು ಕಾರಣಗಳ ಹುಡುಕಾಟದಲ್ಲಿದೆ. ಇನ್ನುಊ ವಿಶೇಷತೆ ಅಂದರೆ, ಈ ಬಾರಿ ಉತ್ತಮ ಮಾವು ಫಸಲಿನ ನಿರೀಕ್ಷೆ ಇದ್ದು, ಫಸಲು ಹೆಚ್ಚಾಗಿ ಬರಬೇಕಾಗಿತ್ತು. ಆದ್ರೆ, ಕೀಟ ಬಾಧೆ, ಮರಕ್ಕೆ ರೋಗ-ರುಜಿನಗಳು, ವಾತಾವರಣದಲ್ಲಿನ ಏರುಪೇರಿಂದ ಮಾವಿನ ಹೂವು ಒಣಗಿ ಉದುರಲಾರಂಭಿಸಿದೆ. ಇದರಿಂದ ಮಾವು ಬೆಳೆಗಾರರು ಕಂಗಾಲಾಗಿರುವುದನ್ನ ಮನಗಂಡ ಇಲಾಖೆ, ಔಷಧಿಗಳನ್ನ ಸಿಂಪಡಿಸಿ ಮರಗಳ ಕಾಳಜಿ ವಹಿಸುವಂತೆ ಸೂಚಿಸಿದೆ.

ಕೆಲವು ಔಷಧಗಳನ್ನ ಹಾಗೂ ರೈತರು ಪಾಲಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಳ್ಳುವಂತೆ ಇಲಾಖೆ ರೈತರಿಗೆ ಅರಿವು ಮೂಡಿಸುತ್ತಿದೆ. ಒಟ್ಟಾರೆ ಮಾವುಗಳ ರಾಜ ಆರಂಭದಲ್ಲೇ ಮಾವು ಬೆಳೆಗಾರರಿಗೆ ಆತಂಕ ಮೂಡಿಸುತ್ತಿದ್ದು, ಈಗಾಗಲೇ ಒಂದು ಸುತ್ತು ಬರಕ್ಕೆ ತುತ್ತಾಗಿರುವ ಜಿಲ್ಲೆಯ ರೈತರಿಗೆ ಈ ಬಾರಿ ಮಾವು ಬೆಳೆಯೂ ಕೈ ಕೊಡುವ ಸಾಧ್ಯತೆ ಹೆಚ್ಚಾಗಿದೆ. ವರ್ಷಕ್ಕೊಂದು ಬೆಳೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ಸದ್ಯ ಮಾವು ಬೆಳೆಯೂ ಕೂಡ ರೈತರ ಕೈಹಿಡಿಯುವ ಸಾಧ್ಯತೆ ಕಡಿಮೆಯಾಗಿದ್ದು, ಸರ್ಕಾರ ಈಗಲೇ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:52 pm, Sat, 2 March 24

ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ
ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ
ಮಹಿಳಾ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು
ಮಹಿಳಾ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ
ಇದು ಯಾವ ಸೀಮೆಯ ಬೌಲಿಂಗ್: ಪಾಕ್ ಸ್ಪಿನ್ನರ್ ಶೈಲಿಗೆ ಗ್ರೀನ್​ ಆಕ್ರೋಶ
ಇದು ಯಾವ ಸೀಮೆಯ ಬೌಲಿಂಗ್: ಪಾಕ್ ಸ್ಪಿನ್ನರ್ ಶೈಲಿಗೆ ಗ್ರೀನ್​ ಆಕ್ರೋಶ