- Kannada News Photo gallery Bigg Boss: Avinash who portrayed himself as strong contestant as been weaken now
ಮಾವುತನಾಗಲು ಬಂದ ಅವಿನಾಶ್ಗೆ ಎಂಥಹಾ ಗತಿ ಬಂತು
Bigg Boss: ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಬಂದ ಅವಿನಾಶ್, ನಾನು ಮಾವುತ ಎನ್ನುವ ಮೂಲಕ ಗಟ್ಟಿ ಸ್ಪರ್ಧಿ ವಿನಯ್ಗೆ ಎದುರಾಳಿ ಎಂದಿದ್ದರು. ಆದರೆ ಅವಿನಾಶ್ ಅನ್ನು ಮನೆಯ ಸದಸ್ಯರು ಸರಿಯಾಗಿ ಆಡಿಕೊಂಡಿದ್ದಾರೆ.
Updated on: Dec 07, 2023 | 7:52 PM

ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಬಂದ ಅವಿನಾಶ್, ಬಂದ ದಿನ ತಾವು ವಿನಯ್ಗೆ ಶಕ್ತ ಎದುರಾಳಿ ಎಂದು ಹೇಳಿದ್ದರು.

ವಿನಯ್ ಅನ್ನು ಬಿಗ್ಬಾಸ್ ಮನೆಯ ಆನೆ ಎನ್ನಲಾಗುತ್ತದೆ. ಆನೆಯನ್ನು ಪಳಗಿಸುವ ಮಾವುತ ನಾನು ಎಂದು ಖಡಕ್ ಆಗಿ ಅವಿನಾಶ್ ಹೇಳಿದ್ದರು.

ಆದರೆ ಈಗ ಬಿಗ್ಬಾಸ್ ಮನೆಯಲ್ಲಿ ಅವಿನಾಶ್ ಮೇಕೆಯಾಗಿ, ಒಮ್ಮೆ ಹುಚ್ಚು ಕುದುರೆಯಾಗಿ, ಒಮ್ಮೆ ಕಾಮಿಡಿ ಪೀಸ್ ಆಗಿ ಹೀಗೆ ಹಲವು ಪಾತ್ರಗಳನ್ನು ವಹಿಸುತ್ತಿದ್ದಾರೆ.

ರಕ್ಕಸ-ಗಂಧರ್ವರ ನಡುವಿನ ಗುದ್ದಾಟದಲ್ಲಿ ಗಂಧರ್ವನಾದ ಅವಿನಾಶ್ ಅನ್ನು ವಿನಯ್ ತಂಡ ಸರಿಯಾಗಿ ಆಡಿಕೊಂಡಿದೆ.

ಮಾವುತನಾಗಲು ಬಂದ ಅವಿನಾಶ್ ಅನ್ನು ಮೇಕೆ ಮಾಡಿದ್ದಾರೆ ರಾಕ್ಷಸರ ವೇಷದಲ್ಲಿರುವ ವಿನಯ್ ಮತ್ತು ತಂಡ. ವರ್ತೂರು ಹಾಗೂ ತುಕಾಲಿ ಸಂತು ಸಹ ಅವಿನಾಶ್ ಅನ್ನು ಆಡಿಕೊಂಡಿದ್ದಾರೆ.

ವರ್ತೂರು ಸಂತೋಷ್, ಅವಿನಾಶ್ ಒಳಗಡೆ ರೋಷದ ಕಿಚ್ಚನ್ನು ಹೊತ್ತಿಸಲು ಇನ್ನಿಲ್ಲದಂತೆ ಪ್ರಯತ್ನಿಸುತ್ತಿದ್ದಾರೆ. ‘ನೀವು ವೀರನಾಗಬೇಕು’ ಎಂದಿದ್ದಾರೆ.

ಇದರಿಂದ ಸ್ಫೂರ್ತಿಗೊಂಡ ಅವಿನಾಶ್, ‘ವೀರನಾ… ಧೀರನಾ…’ ಎಂದು ಹೇಳುತ್ತ ಎದ್ದುನಿಂತಿದ್ದಾರೆ. ಆದರೆ ಅದೂ ಸಹ ಹಾಸ್ಯದಂತೆಯೇ ಕಾಣುತ್ತಿದೆ.



















