ನಾಲ್ಕು ಭಾಷೆಗೆ ಡಬ್ ಆಗಿದೆ ‘ಒಂದು ಸರಳ ಪ್ರೇಮಕಥೆ’

ನಾಲ್ಕು ಭಾಷೆಗೆ ಡಬ್ ಆಗಿದೆ ‘ಒಂದು ಸರಳ ಪ್ರೇಮಕಥೆ’

ಮಂಜುನಾಥ ಸಿ.
|

Updated on: Mar 05, 2024 | 5:46 PM

Ondu Sarala Premakathe: ಇತ್ತೀಚೆಗಷ್ಟೆ ಬಿಡುಗಡೆ ಆಗಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿರುವ ಸಿಂಪಲ್ ಸುನಿ ನಿರ್ದೇಶಿಸಿ, ವಿನಯ್ ರಾಜ್​ಕುಮಾರ್ ನಟಿಸಿರುವ ‘ಒಂದು ಸರಳ ಪ್ರೇಮಕಥೆ’ ಸಿನಿಮಾವನ್ನು ನಾಲ್ಕು ಭಾಷೆಗೆ ಡಬ್ ಮಾಡಲಾಗಿದೆ.

ವಿನಯ್ ರಾಜ್​ಕುಮಾರ್ (Vinay Rajkumar) ನಟಿಸಿ ಸಿಂಪಲ್ ಸುನಿ (Simple Suni) ನಿರ್ದೇಶನ ಮಾಡಿರುವ ‘ಒಂದು ಸರಳ ಪ್ರೇಮಕಥೆ’ ಸಿನಿಮಾ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿ ಮೆಚ್ಚುಗೆ ಗಳಿಸಿಕೊಂಡಿದೆ. ಸಿನಿಮಾದ ಹಾಸ್ಯ, ನವಿರಾದ ಪ್ರೇಮಕಥೆ ಪ್ರೇಕ್ಷಕರಿಗೆ ಹಿಡಿಸಿದೆ. ಸಿನಿಮಾದ ಬಗ್ಗೆ ಧನಾತ್ಮಕ ವಿಮರ್ಶೆಗಳು ಬಂದಿದ್ದು, ಸಿನಿಮಾವನ್ನು ಯುವ ಪ್ರೇಕ್ಷಕರು ಹಾಗೂ ಕೌಟುಂಬಿಕ ಎರಡೂ ಬಗೆಯ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಸಿನಿಮಾ ಹಿಟ್ ಆದ ಖುಷಿಯನ್ನು ಹಂಚಿಕೊಳ್ಳಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಸಿಂಪಲ್ ಸುನಿ, ತಮ್ಮ ಸಿನಿಮಾ 25 ದಿನಗಳು ಪೂರೈಸಿರುವ ಬಗ್ಗೆ ಖುಷಿ ವ್ಯಕ್ತಪಡಿಸಿದ ಜೊತೆಗೆ ಸಿನಿಮಾವನ್ನು ನಾಲ್ಕು ಬೇರೆ ಭಾಷೆಗಳಿಗೆ ಡಬ್ ಮಾಡಿಸಿರುವ ಬಗ್ಗೆಯೂ ಮಾತನಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ