ಗೃಹ ಸಚಿವ ಪರಮೇಶ್ವರ್ ಕ್ಷೇತ್ರದಲ್ಲಿ ಅಮಾನವೀಯ ಘಟನೆ: ಬರಿಗೈಲಿ ಮಲ ಬಾಚುವ ಪದ್ಧತಿ ಜೀವಂತ

| Updated By: Ganapathi Sharma

Updated on: Nov 07, 2024 | 2:40 PM

ಬರಿಗೈಲಿ ಮಲ ಬಾಚುವ ಪದ್ಧತಿ ರಾಜ್ಯದಲ್ಲಿ ಇನ್ನೂ ಜೀವಂತವಿರುವುದು ಬಹಿರಂಗವಾಗಿದೆ. ಅದರಲ್ಲಿಯೂ ಗೃಹ ಸಚಿವ ಡಾ. ಜಿ ಪರಮೇಶ್ವರ ತವರು ಜಿಲ್ಲೆ ತುಮಕೂರಿನಲ್ಲಿಯೇ ಘಟನೆ ನಡೆದಿರುವುದು ಗೊತ್ತಾಗಿದೆ. ಈ ಸಂಬಂಧ ವಿಡಿಯೋ ಟಿವಿ9ಗೆ ಲಭ್ಯವಾಗಿದೆ. ವಿಡಿಯೋ ಇಲ್ಲಿದೆ ನೋಡಿ.

ತುಮಕೂರು, ನವೆಂಬರ್ 7: ಗೃಹ ಸಚಿವ ಜಿ ಪರಮೇಶ್ವರ ಅವರ ವಿಧಾನಸಭಾ ಕ್ಷೇತ್ರದಲ್ಲೇ ಬರಿಗೈಲಿ ಮಲ ಬಾಚುವ ಪದ್ಧತಿ ಜೀವಂತ ಇರುವುದು ಗೊತ್ತಾಗಿದೆ. ತುಮಕೂರಿನ ಕೊರಟಗೆರೆ ಕೆಎಸ್​​ಆರ್​ಟಿಸಿ ಬಸ್ ನಿಲ್ದಾಣದ ಶೌಚಾಲಯದ ಪಿಟ್​​ನಿಂದ ಹೊರಬಂದಿದ್ದ ಮಲವನ್ನು ಬಾಚಿ ಎತ್ತಿಹಾಕಲು ಹಿಂದುಳಿದ ಸಮುದಾಯದವರ ಬಳಕೆ ಮಾಡಲಾಗಿದೆ. ಬರಿಗೈಯಲ್ಲಿ ಗುದ್ದಲಿ ಹಿಡಿದು ಮಲ ಸ್ವಚ್ಛಗೊಳಿಸುತ್ತಿದ್ದ ಬಾಲಕ ಹಾಗೂ ವ್ಯಕ್ತಿ ಬಳಿ ಆ ಬಗ್ಗೆ ಪ್ರಶ್ನಿಸುತ್ತಿದ್ದಂತೆಯೇ ಕೆಲಸ ಸ್ಥಗಿತಗೊಳಿಸುವಂತೆ ಅಧಿಕಾರಿ, ಸಿಬ್ಬಂದಿ ಸನ್ನೆ ಮೂಲಕ ತಿಳಿಸಿದ್ದಾರೆ. ಕೂಡಲೇ ಕೆಲಸ ಬಿಟ್ಟು ಬಾಲಕ ಹಾಗೂ ವ್ಯಕ್ತಿ ತೆರಳಿದ್ದಾರೆ. ಮಾಧ್ಯಮದವರ ಜೊತೆ ಮಾತನಾಡದಂತೆ ಬಾಲಕನಿಗೆ ಸಿಬ್ಬಂದಿ ಸನ್ನೆ ಮಾಡುತ್ತಿದ್ದರು.

ಬಸ್ ನಿಲ್ದಾಣದ ಆವರಣದಲ್ಲಿರುವ ಪ್ರಯಾಣಿಕರ ಶೌಚಾಲಯದ ಪಿಟ್ ತುಂಬಿ ಫ್ಲಾಟ್ ಫಾರಂಗೆ ಹರಿದಿತ್ತು. ಪ್ರಯಾಣಿಕರು ದುರ್ನಾತದಲ್ಲೇ ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ನಿಲ್ದಾಣದ ಫ್ಲಾಟ್ ಫಾರಂಗೆ ಹರಿಯುತ್ತಿದ್ದ ಮಲ ಸ್ವಚ್ಛಗೊಳಿಸಲು ಬಾಲಕನ ಬಳಸಲಾಗಿದೆ. ಆ ಮೂಲಕ ಮಲ ಹೊರುವ ಪದ್ಧತಿ ನಿಷೇಧ ಹಾಗೂ ಬಾಲ ಕಾರ್ಮಿಕ ಪದ್ಧತಿ ನಿಷೇದ ಕಾನೂನು ಉಲ್ಲಂಘನೆಯಾಗಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ