ತುಮಕೂರು: ಮಹಿಳಾ PSI ಜೊತೆ ಅಸಭ್ಯ ವರ್ತನೆ, ನಿಂದನೆ ಆರೋಪ; ಯೂತ್ ಕಾಂಗ್ರೆಸ್ ಅಧ್ಯಕ್ಷನ ಬಂಧನ

|

Updated on: Feb 27, 2023 | 10:26 AM

ಮಹಿಳಾ ಪಿಎಸ್​ಐ ಜೊತೆ ಅಸಭ್ಯ ವರ್ತನೆ, ಅವಾಚ್ಯ ಶಬ್ದದಿಂದ ನಿಂದನೆ ಹಾಗೂ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಡಿ ತುಮಕೂರು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಶಿ ಹುಲಿಕುಂಟೆಯನ್ನು ಪೊಲೀಸರು ಬಂಧಿಸಿದ್ದಾರೆ.

ತುಮಕೂರು: ಮಹಿಳಾ PSI ಜೊತೆ ಅಸಭ್ಯ ವರ್ತನೆ, ನಿಂದನೆ ಆರೋಪ; ಯೂತ್ ಕಾಂಗ್ರೆಸ್ ಅಧ್ಯಕ್ಷನ ಬಂಧನ
ತುಮಕೂರು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಶಿ ಹುಲಿಕುಂಟೆ
Follow us on

ತುಮಕೂರು: ಮಹಿಳಾ ಪಿಎಸ್​ಐ (Lady PSI) ಜೊತೆ ಅಸಭ್ಯ ವರ್ತನೆ, ಅವಾಚ್ಯ ಶಬ್ದದಿಂದ ನಿಂದನೆ ಹಾಗೂ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಡಿ ತುಮಕೂರು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ (Youth Congress Pressedent) ಶಶಿ ಹುಲಿಕುಂಟೆಯನ್ನು ಪೊಲೀಸರು ಬಂಧಿಸಿದ್ದಾರೆ.

ತುಮಕೂರು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಬಂಧನದ ಹಿನ್ನೆಲೆ

ಫೆ.20 ರಂದು ತುಮಕೂರು ನಗರದಲ್ಲಿ ಬಿಜೆಪಿ (BJP) ಶಾಸಕ ಜ್ಯೋತಿ ಗಣೇಶ್ (MLA Jyoti Ganesh) ವಿರುದ್ಧ, ಅವರ ಭಾವಚಿತ್ರ ಇರುವ ಪೋಸ್ಟರ್​ಗಳ ಮೇಲೆ ಪೇ ಎಂಎಲ್​ಎ (PayMLA) ಎಂಬಂತಹ ಪೋಸ್ಟರ್ ಅಂಟಿಸಿದ್ದರು. ‘PayMLA ನಿಮಗೆ ಕೆಲಸ ಆಗಬೇಕೆ, ನನಗೆ ಪೇ ಮಾಡಿ, ಭ್ರಷ್ಟಾಚಾರವೇ ನನ್ನ ಮೊದಲ ಆಧ್ಯತೆ’ ಎಂದು ಬರೆದಿರುವ ಪೋಸ್ಟರ್ ಅಂಟಿಸಲಾಗಿತ್ತು.

ಇದನ್ನು ಯೂತ್ ಕಾಂಗ್ರೆಸ್ ಕಾರ್ಯಕರ್ತರು ಅಂಟಿಸಿದ್ದರು. ಈ ಸಂಬಂಧ ನಾಲ್ವರನ್ನು ತಿಲಕ್ ಪಾರ್ಕ್ ಪೊಲೀಸರು ಬಂದಿಸಿ ಠಾಣೆಯಲ್ಲಿ ಇಟ್ಟುಕೊಂಡಿದ್ದರು‌. ಇದಕ್ಕೆ ಜಿಲ್ಲಾ ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಶಿ ಹುಲಿಕುಂಟೆ ಪಿಎಸ್​ಐ ರತ್ನಮ್ಮರಿಗೆ ಕಾರ್ಯಕರ್ತರನ್ನು ಬಿಡುಗಡೆ ಮಾಡುವಂತೆ ಒತ್ತಡ ಹಾಕಿದ್ದಾರೆ. ಆದರೆ ಪಿಎಸ್​ಐ ಬಿಡುಗಡೆ ಮಾಡದ ಕಾರಣ ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಅವಾಜ್ ಹಾಕಿದ್ದಾರೆ. ಅಲ್ಲದೇ 3 ತಿಂಗಳ ಬಳಿಕ ನಮ್ಮ ಸರ್ಕಾರ ಬರುತ್ತೆ ಆಗ ನಿಮ್ಮನ್ನೆಲ್ಲ ನೋಡಿಕೊಳ್ಳುತ್ತೇನೆ ನಿಮ್ಮನ್ನು, ಸಸ್ಪೆಂಡ್ ಮಾಡಿಸುತ್ತೇನೆ ಅಂತ ಮನಬಂದಂತೆ ಅವಾಜ್ ಹಾಕಿದ್ದಾನೆ. ತಿಲಕ್‌ ಪಾರ್ಕ್ ಪಿಎಸ್​ಐ ರತ್ಮಮ್ಮರಿಗೆ ಅವಾಜ್ ಹಾಗೂ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಡಿ ಕೇಸ್ ದಾಖಲಿಸಿ ಬಂಧಿಸಲಾಗಿದೆ.

ಇನ್ನು ತುಮಕೂರು ನಗರದ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಶಶಿ ಹುಲಿಕುಂಟೆ ಶಾಸಕರ ವಿರುದ್ಧ ಪೇ ಎಮ್​ಎಲ್​ಎ ಪೋಸ್ಟರ್ ಅಂಟಿಸಲು ಕಾರಣಕಾರ್ತನಾಗಿದ್ದರು. ಸದ್ಯ ಇವರ ವಿರುದ್ಧ ಸ್ವಪಕ್ಷದವರೇ ಬೇಸರಗೊಂಡಿದ್ದು ಜಿಲ್ಲೆಯ ಕಾಂಗ್ರೆಸ್ ನಾಯಕರ ಗಮನಕ್ಕೆ ತರದೆ ಪೋಸ್ಟರ್ ಅಂಟಿಸಿ ವಿವಾದ ಸೃಷ್ಟಿಸಿಕೊಂಡಿದ್ದಾರಂಬ ಮಾತುಗಳು ಕೇಳಿಬಂದಿವೆ. ಜಿಲ್ಲೆಯ ನಾಯಕರಾದ ಮಾಜಿ ಡಿಸಿಎಮ್ ಪರಮೇಶ್ವರ್, ಮಾಜಿ ಶಾಸಕ ಕೆಎನ್ ರಾಜಣ್ಣರಿಗೂ ಗಮನಕ್ಕೆ ತಾರದೇ ಪೋಸ್ಟರ್ ಅಂಟಿಸಿರುವ ಮಾಹಿತಿ ಲಭ್ಯವಾಗಿದೆ.

ವರದಿ-ಮಹೇಶ್ ಟಿವಿ9 ತುಮಕೂರು