ತುಮಕೂರು: 2019ರಲ್ಲಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಅಪರಾಧಿ ರಂಗಸ್ವಾಮಿ(45)ಗೆ 22 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು ₹30 ಸಾವಿರ ದಂಡ ವಿಧಿಸಿ ತುಮಕೂರಿನ ಪೋಕ್ಸೋ ನ್ಯಾಯಾಲಯ ಆದೇಶ ಹೊರಡಿಸಿದೆ.
9ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ರಂಗಸ್ವಾಮಿ ವಿರುದ್ಧ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಠಾಣೆಯಲ್ಲಿ 2019ರಲ್ಲಿ ಕೇಸ್ ದಾಖಲಾಗಿತ್ತು. ಸದ್ಯ ಈಗ ಈ ಸಂಬಂಧ ಅಪರಾಧಿಗೆ ಪೋಕ್ಸೋ ಕಾಯ್ದೆಯಡಿ 20, ಐಪಿಸಿ ಅಡಿ 2 ವರ್ಷ ಶಿಕ್ಷೆ ವಿಧಿಸಿ ನ್ಯಾಧೀಶರಾದ ಎನ್. ಕೃಷ್ಣಯ್ಯ ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ಸರ್ಕಾರಿ ವಕೀಲರಾದ ಜಿ.ವಿ.ಜಾಯತ್ರಿ ರಾಜು ವಾದ ಮಂಡಿಸಿದ್ದರು.
ಅಪರಾಧಿ ರಂಗಸ್ವಾಮಿ ಬಾಲಕಿಯ ಪಕ್ಕದ ಮನೆಯವನಾಗಿದ್ದು ಬಾಲಕಿಯ ಮನೆಯವರ ಹೊಲದ ಕೆಲಸಕ್ಕೆ ಬರುತ್ತಿದ್ದ. ಘಟನೆ ನಡೆದ ದಿನದಂದು ಕೂಡ ಕೆಲಸ ಮುಗಿಸಿ ಬಾಲಕಿಯ ಮನೆಯಲ್ಲೇ ಊಟ ಮಾಡಿ ಮನೆಗೆ ಹೋಗುವುದಾಗಿ ಹೇಳಿ ಹೊರಟಿದ್ದ. ಇದೇ ವೇಳೆ ಬಾಲಕಿಯ ಅಜ್ಜಿಗೆ ಆರೋಗ್ಯ ಸರಿ ಇಲ್ಲದ ಕಾರಣ ಬಾಲಕಿ ತಂದೆ ತನ್ನ ತಾಯಿಯನ್ನು ಕರೆದುಕೊಂಡು ಆಸ್ಪತ್ರೆಗೆ ಹೊರಟಿದ್ದರು. ಇದೇ ಸಮಯ ಬಳಸಿಕೊಂಡ ಅಪರಾಧಿ ರಂಗಸ್ವಾಮಿ ತನ್ನ ಮನೆಗೆ ಹೋಗುವಂತೆ ನಟಿಸಿ ಯಾರು ಇಲ್ಲದ ಸಮಯದಲ್ಲಿ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದ. ಬಾಲಕಿ ತಂದೆ ಮನೆಗೆ ಬಂದಾಗ ಮಗಳು ಅಳುವುದನ್ನು ನೋಡಿ ಪ್ರಶ್ನಿಸಿದಾಗ ಘಟನೆ ಬೆಳಕಿಗೆ ಬಂದಿತ್ತು. ಬಳಿಕ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿ ರಂಗಸ್ವಾಮಿಯನ್ನು ಬಂಧಿಸಲಾಗಿತ್ತು.ಸದ್ಯ ಈಗ ಈ ಕಾಮುಕ ಅಪರಾಧಿಗೆ ಶಿಕ್ಷೆ ಆಗಿದೆ.
Published On - 9:40 am, Fri, 3 September 21