ತುಮಕೂರು: ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾಗೂ 66 ಕನ್ನಡ ರಾಜ್ಯೋತ್ಸವ ಅಂಗವಾಗಿ ಕನ್ನಡ ಗೀತೆಗಳ ಗಾಯನವನ್ನ ಸರ್ಕಾರದ ನಿರ್ದೇಶನ ಮೇರೆಗೆ ತುಮಕೂರಿನಲ್ಲಿ ಆಯೋಜನೆ ಮಾಡಲಾಗಿತ್ತು. ತುಮಕೂರಿನ ಪ್ರಸಿದ್ಧ ಕ್ಯಾತ್ಸಂದ್ರ ಶ್ರೀ ಸಿದ್ದಗಂಗಾ ಮಠದಲ್ಲಿ ಕಾರ್ಯಕವನ್ನ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕತಿ ಇಲಾಖೆ ವತಿಯಿಂದ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಸುಮಾರು ಹತ್ತು ಸಾವಿರ ಮಕ್ಕಳು ಭಾಗಿಯಾಗಿ ಮೂರು ಕನ್ನಡ ಹಾಡುಗಳ ಗಾಯನ ಮಾಡಿದ್ದಾರೆ.
ಬಾರಿಸು ಕನ್ನಡ ಡಿಂಡಿಮವಾ, ಕವಿ ನಿಸಾರ್ ಅಹಮದ್ ರಚಿಸಿರುವ ನಿತ್ಯೋತ್ಸವದ ಜೋಗದ ಸಿರಿ ಬೆಳಕಿನಲ್ಲಿ ಹಾಡು ಹಾಗೂ ವರನಟ ಡಾ ರಾಜ್ ಕುಮಾರ್ ಹಾಡಿರುವ ಹುಟ್ಟಿದರೇ ಕನ್ನಡ ನಾಡಿನಲ್ಲಿ ಹುಟ್ಟಬೇಕು ಎನ್ನುವ ಹಾಡನ್ನ ಮಠದ ವಿದ್ಯಾರ್ಥಿಗಳು ಹಾಡಿದ್ದಾರೆ. ಏಕಕಾಲದಲ್ಲಿ ಮಠದ ವಿದ್ಯಾರ್ಥಿಗಳು ಗಾಯನ ಮಾಡಿದ ಹಿನ್ನಲೆಯಲ್ಲಿ ಕೇಳಲು ಹಾಗೂ ನೋಡಲು ಇಂಪಾಗಿತ್ತು. ಕನ್ನಡ ರಾಜ್ಯೋತ್ಸವ ಸಲುವಾಗಿ ಮಕ್ಕಳಿಗೆ ಈ ಕಾರ್ಯಕ್ರಮ ಮತ್ತಷ್ಟು ಉರುಪು ತಂದಂತಿತ್ತು. ಇನ್ನೂ ಕಾರ್ಯಕ್ರಮದಲ್ಲಿ ಸಿದ್ದಗಂಗಾ ಮಠದ ಪೀಠಾಧ್ಯಕ್ಷರು ಶ್ರೀ ಸಿದ್ದಲಿಂಗ ಶ್ರೀಗಳು, ಡಿಸಿ ವೈಎಸ್ ಪಾಟೀಲ್ ಎಸ್ ಪಿ ರಾಹುಲ್ ಕುಮಾರ್, ಜಿಪಂ ಸಿಇಒ ವಿದ್ಯಾಕುಮಾರಿ, ಶಾಸಕ ಜಿಬಿ ಜ್ಯೋತಿ ಗಣೇಶ್ ಸೇರಿದಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು, ಶಿಕ್ಷಕರು ಸಿಬ್ಬಂದಿ ವರ್ಗ ಭಾಗವಹಿಸಿದ್ದರು.
ಇದನ್ನೂ ಓದಿ: ಕನ್ನಡ ರಾಜ್ಯೋತ್ಸವ ಆಚರಣೆಗೆ ಕೊವಿಡ್ ತಾಂತ್ರಿಕ ಸಲಹಾ ಸಮಿತಿಯಿಂದ ನಿಯಮ ಶಿಫಾರಸು; ಏನೇನಿದೆ ನಿಯಮಗಳು?