ತುಮಕೂರು, ಡಿಸೆಂಬರ್ 03: ಲೋಕಸಭಾ ಚುನಾವಣೆಗೆ ನಾನು ಸ್ಪರ್ಧಿಸುತ್ತೇನೆ ಎಂದು ಸಹಕಾರ ಇಲಾಖೆ ಸಚಿವ ಕೆ.ಎನ್.ರಾಜಣ್ಣ (KN Rajanna) ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ನಿಂದ ಗ್ರೀನ್ ಸಿಗ್ನಲ್ ಬಂದರೆ ನಾನು ಸ್ಪರ್ಧಿಸುತ್ತೇನೆ ಎಂದು ಹೇಳಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ನನಗೆ ಆಸೆ ಇದೆ. ಹಾಗಾಗಿ ತುಮಕೂರು ಲೋಕಸಭೆ ಕ್ಷೇತ್ರದ ಟಿಕೆಟ್ಗೆ ಬೇಡಿಕೆ ಇಟ್ಟಿದ್ದೇನೆ ಎಂದು ಇತ್ತೀಚೆಗೆ ಹೇಳಿದ್ದರು. ಇದೀಗ ಮತ್ತೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಕುರಿತು ಹೇಳಿದ್ದಾರೆ.
ಬೆಂಗಳೂರಿನ ಶಾಲೆಗಳಿಗೆ ಬಾಂಬ್ ಬೆದರಿಕೆ ಮೇಲ್ ವಿಚಾರವಾಗಿ ಮಾತನಾಡಿದ ಅವರು, ಬಾಂಬ್ ಬೆದರಿಕೆ ಇದೇ ಮೊದಲೇನಲ್ಲ. ಹಿಂದೆ ಇನ್ಫೋಸಿಸ್ಗೆಲ್ಲ ಬಂದಿತ್ತು. ಮೆಟಲ್ ಡಿಟೆಕ್ಟರ್ ಕಂಪನಿಗಳು ಈ ರೀತಿ ಮೇಲ್ ಹಾಕಿಸಿ ಮಾರ್ಕೆಟಿಂಗ್ ಮಾಡುತ್ತಾರೆ ಎನ್ನುವ ಮಾಹಿತಿಯಿದೆ. ಈಗ ತನಿಖೆ ನಡೆಯುತ್ತಿದೆ. ತನಿಖೆಯಲ್ಲಿ ಎಲ್ಲ ಹೊರಬರುತ್ತೆ. ಹುಸಿ ಕರೆಗಳಿಗೆ ಶಿಕ್ಷೆ ಆಗಬೇಕು. ಈ ರೀತಿಯ ಕಾನೂನು ತರಬೇಕು ಅಂತ ಗೃಹ ಸಚಿವರು ಯೋಚನೆ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ರಾಜಸ್ಥಾನ, ಛತ್ತೀಸಗಡ್ ಹಾಗೂ ಮಧ್ಯಪ್ರದೇಶದಲ್ಲಿ ಮುನ್ನಡೆ; ಕರ್ನಾಟಕ ಬಿಜೆಪಿ ನಾಯಕರು ಹೇಳಿದ್ದಿಷ್ಟು
ಟೆಕ್ನಾಲಜಿ ಬೆಳೆದಷ್ಟು ಹೊಸ ಸಮಸ್ಯೆ ಅಥವಾ ತೊಂದರೆಗಳು ಕಂಡುಬರುತ್ತಿವೆ. ಕೆಲವರು ಸೈಕ್ ಇರುತ್ತಾರೆ. ಅವರು ಹೀಗೆ ಮಾಡುತ್ತಿರುತ್ತಾರೆ. ಕೆಲವು ಕಡೆ ವಿಮಾನಗಳಿಗೆ ಬಾಂಬ್ ಇಟ್ಟಿದ್ದೇವೆ ಅಂತ ಮೇಲ್ ಬರುತ್ತವೆ. ಅದೆಲ್ಲ ನಡೆದಿದೆಯಾ, ಎಲ್ಲೋ ಒಂದು ಕಡೆ ಕೂತ್ಕೊಂಡು ಒಂದು ಲೈನ್ ಹಾಕುತ್ತಾರೆ. ಬಂದಂತಹ ಎಲ್ಲಾ ತೊಂದರೆ ಯಾವುದು ಮೆಟೀರಿಯಲೈಸ್ ಆಗಿಲ್ಲ ಎಂದರು.
ವಿ. ಸೋಮಣ್ಣ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಅದು ಅವರ ವೈಯಕ್ತಿಕ ವಿಚಾರ. ಅದರ ಬಗ್ಗೆ ನನಗೆ ಗೊತ್ತಿಲ್ಲ. ಡಿ. 6 ರ ಬಳಿಕ ನಿರ್ಧಾರ ಮಾಡುತ್ತೇವೆ ಅಂತ ಹೇಳಿದ್ದಾರೆ. ಅದು ನನಗೆ ಟಿವಿ ಇಂದ ಗೊತ್ತಾಯ್ತು. ಡಿ. 6 ರಂದು ನಡೆಯುವುದು ರಾಜಕೀಯೇತರ ಕಾರ್ಯಕ್ರಮ. ಸಿದ್ದಗಂಗಾ ಮಠದಲ್ಲಿ ನಡೆಯುವುದು ಧಾರ್ಮಿಕ ಕಾರ್ಯಕ್ರಮ ಎಂದಿದ್ದಾರೆ.
ಪಂಚರಾಜ್ಯ ಚುನಾವಣೆ ಕುರಿತಾಗಿ ಮಾತನಾಡಿದ ಅವರು, ಈಗಾಗಲೇ ಐದು ರಾಜ್ಯದ ಚುನಾವಣಾ ಫಲಿತಾಂಶ ಹೊರಬಂದಿದೆ. ರಾಜ್ಯಸ್ಥಾನ, ಮಧ್ಯಪ್ರದೇಶ, ಛತ್ತೀಸ್ ಘಡ ರಾಜ್ಯದಲ್ಲಿ ಬಿಜೆಪಿಗೆ ಬಹುಮತ ಬಂದಿದೆ. ತೆಲಗಾಂಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಬಂದಿದೆ. ಇವೆಲ್ಲಾ ಏನು ಸೂಚಿಸುತ್ತೆ ಅಂದರೆ ಸ್ಥಳೀಯ ಪಕ್ಷಗಳಿಗೆ ಭವಿಷ್ಯವಿಲ್ಲ ಎಂಬುದನ್ನ ಸೂಚಿಸುತ್ತೆ. ಯಾರೆಲ್ಲಾ ಮುಖ್ಯಮಂತ್ರಿಗಳು ಜನಪರ ಕೆಲಸ ಮಾಡಿದ್ದಾರೆ, ಜನರ ವಿಶ್ವಾಸ ಗಳಿಸಿದ್ದಾರೆ, ಎಲ್ಲಿ ಗೊಂದಲ ಇರೋದಿಲ್ಲ. ಅಂತಹ ರಾಜ್ಯದಲ್ಲಿ ಮತ್ತೊಮ್ಮೆ ಸರ್ಕಾರ ರಚನೆ ಆಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Telangana Results: ತೆಲಂಗಾಣ ಕಾಂಗ್ರೆಸ್ ಶಾಸಕರ ರಕ್ಷಣೆಗೆ ಹೈದರಾಬಾದ್ ತಲುಪಿದ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್
ಕಾಂಗ್ರೆಸ್ ಪಕ್ಷದ ಸೋಲಿಗೆ ಕಾರಣ ನಮ್ಮ ಪಕ್ಷದಲ್ಲಿ ಇರುವ ಗುಂಪುಗಾರಿಕೆ. ಚುನಾವಣಾ ಸಮಯದಲ್ಲಿ ಒಗ್ಗಟ್ಟಾದ್ದಾರೂ ಕೂಡಾ ಹೋಗಿದ್ದಂತಹ ಬಿರುಕು ಮುಚ್ಚುವ ಕೆಲಸ ಆಗಿಲ್ಲ. ಆ ದೃಷ್ಟಿಯಿಂದ ಆ ಒಂದು ಗುಂಪುಗಾರಿಕೆಯಿಂದ ಚುನಾವಣೆಯಲ್ಲಿ ಸೋಲಲಿಕ್ಕೆ ಕಾರಣ ಆಗಿದೆ ಎಂಬುವುದು ನನ್ನ ವ್ಯಯಕ್ತಿಕವಾಗಿ ಅಭಿಪ್ರಾಯಪಡುತ್ತೇನೆ. ಕಾಂಗ್ರೆಸ್ಗೆ ತೆಲಂಗಾಣದಲ್ಲಿ ಒಂದು ಕಾಲದಲ್ಲಿ 15 ಸೀಟು 20 ಬರ್ತಿತ್ತು. ಸೀಮಾಂತರದಲ್ಲಿ ಒಂದು ಸೀಟು ಇರ್ತಿರಲಿಲ್ಲ. ಸಿಮಾಂದ್ರಾ, ತೆಲಂಗಾಣ ಎಲ್ಲಾ ಒಟ್ಟಾಗಿದ್ದ ರಾಜ್ಯಗಳು. ಇಲ್ಲಿನ ಜನರ ಮತ್ತು ಅಲ್ಲಿನ ಜನರ ಅಭಿಪ್ರಾಯ ಬೇರೆ ಬೇರೆ ಆಗಲ್ಲ. ಚಂದ್ರಶೇಖರ್ ರಾವ್ ಅವರು ತೆಲಂಗಾಣ ರಾಜ್ಯದ ಸೃಷ್ಟಿಕರ್ತರು. ಅವರಿಗೆ ಎರಡು ಬಾರಿ ಅವಕಾಶ ನೀಡಿದರು. ಅವರು ಕುಟುಂಬಕ್ಕೆ ಸೀಮಿತವಾಗಿ ಕುಟುಂಬ ರಾಜಕಾರಣ ಮಾಡಿದರು. ಆದರೆ ಕುಟುಂಬ ರಾಜಕಾರಣವನ್ನು ಜನರು ಸಹಿಸಹಿಸಲ್ಲ. ಅದಕ್ಕೆ ಈ ತೀರ್ಮಾನವನ್ನು ಮಾಡಿದ್ದಾರೆ. ಜನರ ಆಶೀರ್ವಾದಕ್ಕೆ ತೀರ್ಮಾನಕ್ಕೆ ತಲೆಬಾಗುತ್ತೇವೆ ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.