ಧಾರವಾಡದ ದುರ್ಘಟನೆ: ಯೂಟ್ಯೂಬ್​ ಟ್ರೆಂಡಿಗ್​ನಲ್ಲಿ 2ನೇ ಸ್ಥಾನಕ್ಕೆ ತಲುಪಿದ ಟಿವಿ9 ಸುದ್ದಿ

|

Updated on: Jan 16, 2021 | 4:20 PM

ಟಿವಿ9 ಪ್ರಸಾರ ಮಾಡಿದ್ದ ವರದಿ ಸದ್ಯ ಯೂಟ್ಯೂಬ್​ನಲ್ಲಿ ಟ್ರೆಂಡ್​ ಆಗಿದೆ. 22 ಗಂಟೆಯೊಳಗೆ 5 ಲಕ್ಷಕ್ಕೂ ಅಧಿಕ ಜನ ಈ ವೀಡಿಯೋ ವೀಕ್ಷಿಸಿದ್ದು, ದುರ್ಘಟನೆಗೆ ಮರುಗಿದ್ದಾರೆ. ಭಾರತದ ಮಟ್ಟದಲ್ಲೇ ಟ್ರೆಂಡಿಂಗ್​ನಲ್ಲಿ 2ನೇ ಸ್ಥಾನಕ್ಕೆ ಈ ವೀಡಿಯೋ ತಲುಪಿದೆ.

ಧಾರವಾಡದ ದುರ್ಘಟನೆ: ಯೂಟ್ಯೂಬ್​ ಟ್ರೆಂಡಿಗ್​ನಲ್ಲಿ 2ನೇ ಸ್ಥಾನಕ್ಕೆ ತಲುಪಿದ ಟಿವಿ9 ಸುದ್ದಿ
22 ಗಂಟೆಯಲ್ಲಿ ​2ನೇ ಸ್ಥಾನದಲ್ಲಿ ಟ್ರೆಂಡ್​ ಆದ ವೀಡಿಯೋ
Follow us on

ನಿನ್ನೆ ಧಾರವಾಡದಲ್ಲಿ ನಡೆದ ಭೀಕರ ಅಪಘಾತ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಸಹ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಶಾಲಾ ದಿನಗಳಿಂದ ಸ್ನೇಹಿತರಾಗಿದ್ದ ಮಹಿಳೆಯರು ಒಂದಾಗಿ ಖುಷಿಯಿಂದ ಕಾಲ ಕಳೆಯಲು ಹೊರಟ ಪ್ರವಾಸವೇ ಅಂತಿಮ ಯಾತ್ರೆಯಾಗಿದ್ದು ಎಲ್ಲರ ಮನ ಕಲಕುವಂತೆ ಮಾಡಿದೆ.

ಈ ಕುರಿತು ಟಿವಿ9 ಪ್ರಸಾರ ಮಾಡಿದ್ದ ವರದಿ ಸದ್ಯ ಯೂಟ್ಯೂಬ್​ನಲ್ಲಿ ಟ್ರೆಂಡ್​ ಆಗಿದೆ. 22 ಗಂಟೆಯೊಳಗೆ 5 ಲಕ್ಷಕ್ಕೂ ಅಧಿಕ ಜನ ಈ ವೀಡಿಯೋ ವೀಕ್ಷಿಸಿದ್ದು, ದುರ್ಘಟನೆಗೆ ಮರುಗಿದ್ದಾರೆ. ಭಾರತ ಮಟ್ಟದಲ್ಲೇ ಟ್ರೆಂಡಿಂಗ್​ನಲ್ಲಿ 2ನೇ ಸ್ಥಾನಕ್ಕೆ ಈ ವೀಡಿಯೋ ತಲುಪಿದ್ದು, ಸ್ನೇಹಿತೆಯರ ಸಾವಿಗೆ ವೀಕ್ಷಕರು ಕಂಬನಿ ಮಿಡಿದಿದ್ದಾರೆ.

Published On - 4:04 pm, Sat, 16 January 21