TV9 Lifestyle Expo 2021: ಟಿವಿ9 ಆಯೋಜಿಸಿರುವ ಲೈಫ್‌ಸ್ಟೈಲ್‌ ಮೆಗಾ ಎಕ್ಸ್‌ಪೋಗೆ ನಟಿ ಅದಿತಿ ಪ್ರಭುದೇವ ಚಾಲನೆ

| Updated By: guruganesh bhat

Updated on: Aug 20, 2021 | 3:58 PM

ಕೊವಿಡ್‌ ಮಾರ್ಗಸೂಚಿ ಪಾಲಿಸುತ್ತಾ ಟಿವಿ9 ಆಯೋಜಿಸಿರುವ ಈ ಮೆಗಾ ಎಕ್ಸ್‌ಪೋಗೆ ಎಲ್ಲರಿಗೂ ಉಚಿತ ಪ್ರವೇಶ ಕಲ್ಪಿಸಲಾಗಿದೆ.

TV9 Lifestyle Expo 2021: ಟಿವಿ9 ಆಯೋಜಿಸಿರುವ ಲೈಫ್‌ಸ್ಟೈಲ್‌ ಮೆಗಾ ಎಕ್ಸ್‌ಪೋಗೆ ನಟಿ ಅದಿತಿ ಪ್ರಭುದೇವ ಚಾಲನೆ
ಎಕ್ಸ್​ಪೋ ಉದ್ಘಾಟಿಸಿದ ನಟಿ ಅದಿತಿ ಪ್ರಭುದೇವ
Follow us on

ಬೆಂಗಳೂರು: ಟಿವಿ9 ವಾಹಿನಿ 5ನೇ ಬಾರಿಗೆ ಆಯೋಜಿಸಿರುವ ಅತಿ ದೊಡ್ಡ ಲೈಫ್‌ಸ್ಟೈಲ್‌, ಆಟೋಮೊಬೈಲ್ ಹಾಗೂ ಫರ್ನೀಚರ್‌ ಎಕ್ಸ್‌ಪೋ 2021ಕ್ಕೆ (TV9 Automobile Expo 2021) ನಟಿ ಅದಿತಿ ಪ್ರಭುದೇವ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಡಾ. ಶರವಣ ಮತ್ತು ಡಾ ನವೀನ್ ಗಿರಿಯಾಸ್ ಅವರು ಸಹ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಉದ್ಘಾಟಿಸಿ ಮಾತನಾಡಿದ ನಟಿ ಅದಿತಿ ಪ್ರಭುದೇವ, ‘ಟಿವಿ9 ಎಕ್ಸ್​ಪೋ ವೀಕ್ಷಿಸಿದರೆ ಬರಿಗೈಲಿ ಮನೆಗೆ ಹಿಂತಿರುಗಲು ಮನಸೇ ಬರುವುದಿಲ್ಲ. ವರ ಮಹಾಲಕ್ಷ್ಮೀ ಹಬ್ಬದಂದು ಎಲ್ಲರ ಮನೆಯ ಮಹಾಲಕ್ಷ್ಮೀಯರಿಗೂ ಒಳಿತಾಗಲಿ’ ಎಂದು ಹಾರೈಸಿದರು. ಜತೆಗೆ ಎಲ್ಲಾ ರೀತಿಯ ವಸ್ತಗಳೂ ಸಿಗುವ ಟಿವಿ9 ಎಕ್ಸ್​ಪೋಕ್ಕೆ ಬಂದರೆ ಸಾಮಾಗ್ರಿ ಖರೀದಿಸಲು ಬೀದಿ ಬೀದಿ ತಿರುಗುವ ಪ್ರಮೇಯವೇ ಬರುವುದಿಲ್ಲ. ಇಲ್ಲಿ ಎಲ್ಲವೂ ಒಂದೇ ಸೂರಿನಡಿ ದೊರೆಯಲಿದೆ. ಇಂತಹ ಅವಕಾಶವನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿ ಹಾಲ್‌ನಲ್ಲಿ ನಡೆಯುತ್ತಿರುವ ಅತಿದೊಡ್ಡ ಎಕ್ಸ್‌ಪೋದಲ್ಲಿ ಮೊಬೈಲ್, ಟಿವಿ, ಎಸಿ ಸೇರಿ ಎಲೆಕ್ಟ್ರಾನಿಕ್ಸ್‌ ಉಪಕರಣಗಳು, ಗೃಹೋಪಯೋಗಿ ಸಲಕರಣೆಗಳು, ಲೈಫ್‌ಸ್ಟೈಲ್‌ ಸೇರಿದಂತೆ ಇತ್ತೀಚೆಗೆ ಮಾರುಕಟ್ಟೆಗೆ ಬಂದಿರುವ ಟೂ ವೀಲರ್ಸ್, ಫೋರ್‌ ವೀಲರ್ಸ್‌ ಸೇರಿ ನೂರಾರು ಬ್ರ್ಯಾಂಡ್‌ನ ಕಂಪನಿಗಳು ಭಾಗಿಯಾಗಿವೆ. ಸಾಲುಸಾಲು ಹಬ್ಬಗಳು ಬರುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಬಂಪರ್‌ ಆಫರ್‌ ಒದಗಿಸಲಾಗಿದೆ. ಕೊವಿಡ್‌ ಮಾರ್ಗಸೂಚಿ ಪಾಲಿಸಿ ಟಿವಿ9 ಆಯೋಜಿಸಿರುವ ಎಕ್ಸ್‌ಪೋಗೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಒದಗಿಸಲಾಗಿದೆ.

ಬೆಂಗಳೂರಿನ ಪ್ಯಾಲೇಸ್‌ ಗ್ರೌಂಡ್‌ನಲ್ಲಿರುವ ತ್ರಿಪುರವಾಸಿನಿ ಹಾಲ್‌ನಲ್ಲಿ ಇಂದಿನಿಂದ 3 ದಿನಗಳ ಕಾಲ (August 20th, 21st 22nd ) ಎಕ್ಸ್‌ಪೋ ಆಯೋಜಿಸಲಾಗಿದೆ. ಮೊಬೈಲ್ಸ್‌, ಟಿವಿ, ಎಸಿ ಸೇರಿ ಎಲೆಕ್ಟ್ರಾನಿಕ್ಸ್‌ ಉಪಕರಣಗಳು, ಗೃಹೋಪಯೋಗಿ ಸಲಕರಣೆಗಳ ಖರೀದಿ, ಮಾರಾಟಕ್ಕೆ ಭರ್ಜರಿ ಅವಕಾಶ ಕಲ್ಪಿಸಲಾಗಿದೆ.

ಲೈಫ್‌ಸ್ಟೈಲ್‌ ಸೇರಿದಂತೆ ಇತ್ತೀಚೆಗೆ ಮಾರುಕಟ್ಟೆಗೆ ಬಂದಿರುವ ಟೂ ವೀಲರ್ಸ್‌, ಫೋರ್‌ ವೀಲರ್ಸ್‌ ಸೇರಿದಂತೆ ನೂರಾರು ಬ್ರ್ಯಾಂಡ್‌ ಕಂಪನಿಗಳು ಟಿವಿ9 ಎಕ್ಸ್‌ಪೋದಲ್ಲಿ  ಭಾಗವಹಿಸುತ್ತಿವೆ. ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಬಂಪರ್‌ ಆಫರ್‌ಗಳನ್ನೂ ನೀಡಲಾಗ್ತಿದೆ.  ಕೊವಿಡ್‌ ಮಾರ್ಗಸೂಚಿ ಪಾಲಿಸುತ್ತಾ ಟಿವಿ9 ಆಯೋಜಿಸಿರುವ ಈ ಮೆಗಾ ಎಕ್ಸ್‌ಪೋಗೆ ಎಲ್ಲರಿಗೂ ಉಚಿತ ಪ್ರವೇಶ ಕಲ್ಪಿಸಲಾಗಿದೆ.

ಇದನ್ನೂ ಓದಿ: 

TV9 Life Style Expo 2021: ಟಿವಿ9 ಆಯೋಜಿಸಿರುವ ಲೈಫ್‌ಸ್ಟೈಲ್‌ ಮೆಗಾ ಎಕ್ಸ್‌ಪೋಗೆ ಎಲ್ಲರಿಗೂ ಉಚಿತ ಪ್ರವೇಶ! ಬಂಪರ್‌ ಆಫರ್​​ಗಳು

(TV9 Life Style Expo 2021 Actress Aditi Prabhudev Drive to Lifestyle Mega Expo in Bengaluru)

Published On - 3:49 pm, Fri, 20 August 21