ಚಿಕ್ಕಮಗಳೂರು: ದೇವರನಾಡು ಕೇರಳದಲ್ಲಿ ಗುಂಡಿನ ಮೊರೆತ ಕೇಳಿಬಂದಿದೆ. ಖಾಕಿ ಗುಂಡೇಟಿಗೆ ನಾಲ್ವರು ಕೆಂಪು ಉಗ್ರರು ಕಾಡಿನಲ್ಲೇ ರಕ್ತ ಚೆಲ್ಲಿದ್ದಾರೆ. ಅದ್ರಲ್ಲಿ ಇಬ್ಬರು ಕರ್ನಾಟಕದವರು.
ಕೆಂಪು ಉಗ್ರರಿಗೂ ಕಾಫಿ ನಾಡು ಚಿಕ್ಕಮಗಳೂರಿಗೂ ಎಲ್ಲಿಲ್ಲದ ನಂಟು. ನಕ್ಸಲ್ ಚಟುವಟಿಕೆ ಎಲ್ಲಿ ಗರಿಗೆದರಿದ್ರೂ ಅದರ ಒಂದು ಕೊಂಡಿ ಮಲೆನಾಡಿಗೆ ಸುತ್ತಿಕೊಂಡಿರುತ್ತೆ. ದೂರದ ಕೇರಳದಲ್ಲಿ ನಾಲ್ವರು ನಕ್ಸಲರನ್ನ ಎನ್ಕೌಂಟರ್ ಮಾಡಿ ಬಿಸಾಕಲಾಗಿದೆ.
ಕೇರಳದಲ್ಲಿ ನಾಲ್ವರು ‘ಕೆಂಪು ಉಗ್ರರ’ ಎನ್ಕೌಂಟರ್:
ಕೇರಳದ ಪಾಲಕ್ಕಾಡ್ನ ಅಗಲಿ ಠಾಣಾ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ನಿನ್ನೆ ಎನ್ಕೌಂಟರ್ ನಡೆದಿದೆ. ಕಾರ್ಯಾಚರಣೆ ವೇಳೆ ನಕ್ಸಲ್ ನಿಗ್ರಹ ದಳ ಹಾಗೂ ಥಂಡರ್ಬೋಲ್ಟ್ ಟೀಂ ನಾಲ್ವರು ನಕ್ಸಲರನ್ನ ಹೊಡೆದುರುಳಿಸಲಾಗಿದೆ. ಈ ವೇಳೆ ಕರ್ನಾಟಕದ. ಅದ್ರಲ್ಲೂ ಚಿಕ್ಕಮಗಳೂರು ಮೂಲದ ನಕ್ಸಲರಾದ ಸುರೇಶ್ ಹಾಗೂ ಶ್ರೀಮತಿ ಎಂಬುವವರು ಕೂಡ ಫಿನಿಶ್ ಆಗಿದ್ದಾರೆ.
ಎನ್ಕೌಂಟರ್ನಲ್ಲಿ ಸುರೇಶ್ ಹತನಾದ ವಿಚಾರ ಗೊತ್ತಾಗುತ್ತಿದ್ದಂತೇ ಅವನ ಮನೆಯವರಿಗೆ ಶಾಕ್ ಆಗಿದೆ. ಮನೆ ಬಿಟ್ಟು ಹೋದ ಸುರೇಶ್ ಸತ್ತು ಹೋಗಿದ್ದಾನೆ ಅಂತ ಮನೆಯವರು ಅಂದುಕೊಂಡಿದ್ರು. ಆದ್ರೀಗ ಎನ್ಕೌಂಟರ್ ವಿಚಾರ ತಿಳಿದು ನೋವಿನ ಕಡಲಲ್ಲಿ ಮುಳುಗಿದ್ದಾರೆ.
ಕಾಫಿ ನಾಡು ಚಿಕ್ಕಮಗಳೂರಲ್ಲಿ ಚುರುಕುಗೊಂಡ ಕೂಂಬಿಂಗ್:
ಮಲೆನಾಡಿನ ಇಬ್ಬರು ನಕ್ಸಲರು ಕೇರಳದಲ್ಲಿ ಎನ್ಕೌಂಟರ್ ಆಗುತ್ತಿದ್ದಂತೇ ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಕೂಂಬಿಂಗ್ ಕಾರ್ಯಾಚರಣೆ ಚುರುಕುಗೊಂಡಿದೆ. ಕೊಪ್ಪ, ಶೃಂಗೇರಿ ತಾಲೂಕಿನ ಕೆಲ ಪ್ರದೇಶಗಳಲ್ಲಿ ನಕ್ಸಲ್ ನಿಗ್ರಹ ದಳ ಹಾಗೂ ಪೊಲೀಸರು ಕೆಂಪು ಉಗ್ರರಿಗಾಗಿ ಶೋಧ ನಡೆಸ್ತಿದ್ದಾರೆ.
Published On - 9:14 pm, Tue, 29 October 19