ಮಣ್ಣು ತೆಗೆಯುವಾಗ ಗುಡ್ಡ ಕುಸಿದು ಇಬ್ಬರು ಯುವಕರ ಸಾವು

ಅಕ್ರಮ ಮಣ್ಣು ಗಣಿಗಾರಿಕೆ ಮಾಡುವಾಗ ಅವಘಡ ಸಂಭವಿಸಿದ್ದು, ಯಲ್ಲಪ್ಪ (27 ವರ್ಷ), ಹಾಲಪ್ಪ ಗೂರವ (24 ವರ್ಷ) ಮಣ್ಣಿನಡಿ ಸಿಲುಕಿ ಕೊನೆಯುಸಿರೆಳೆದಿದ್ದಾರೆ. ಸುಮಾರು 6 ಅಡಿ ಮಣ್ಣಿನ ಕೆಳಗೆ ಸುಲುಕಿರುವ ಇವರಿಬ್ಬರ ಶವಕ್ಕಾಗಿ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ.

ಮಣ್ಣು ತೆಗೆಯುವಾಗ ಗುಡ್ಡ ಕುಸಿದು ಇಬ್ಬರು ಯುವಕರ ಸಾವು
ದುರಂತದಲ್ಲಿ ಮೃತಪಟ್ಟ ಯುವಕರು

Updated on: Mar 01, 2021 | 11:52 AM

ಬೆಳಗಾವಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಿರನೊಳ್ಳಿ ಗ್ರಾಮ ಗ್ರಾಮದ ಹೊರವಲಯದಲ್ಲಿ ಮಣ್ಣು ತೆಗೆಯುವಾಗ ಗುಡ್ಡ ಕುಸಿದು ಕಾರ್ಮಿಕರಿಬ್ಬರು ಸಾವಿಗೀಡಾಗಿದ್ದಾರೆ. ಅಕ್ರಮ ಮಣ್ಣು ಗಣಿಗಾರಿಕೆ ಮಾಡುವಾಗ ಅವಘಡ ಸಂಭವಿಸಿದ್ದು, ಯಲ್ಲಪ್ಪ (27 ವರ್ಷ), ಹಾಲಪ್ಪ ಗೂರವ (24 ವರ್ಷ) ಮಣ್ಣಿನಡಿ ಸಿಲುಕಿ ಕೊನೆಯುಸಿರೆಳೆದಿದ್ದಾರೆ. ಸುಮಾರು 6 ಅಡಿ ಮಣ್ಣಿನ ಕೆಳಗೆ ಸಿಲುಕಿದ್ದ ಇವರಿಬ್ಬರ ಶವವನ್ನು ಪೊಲೀಸರು ಶೋಧಕಾರ್ಯ ನಡೆಸಿ ಹೊರತೆಗೆದಿದ್ದಾರೆ.

ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಬಿರನೊಳ್ಳಿ ಗ್ರಾಮದ ಹೊರವಲಯದಲ್ಲಿ ದುರ್ಘಟನೆ ಸಂಭವಿಸಿದ್ದು, ಮಣ್ಣಲ್ಲಿ ಸಿಕ್ಕವರನ್ನು ಹೊರ ತೆಗೆಯಲು ಸ್ಥಳೀಯರು ಸಹ ಪೊಲೀಸರೊಂದಿಗೆ ಕೈ ಜೋಡಿಸಿದ್ದಾರೆ. ಅಕ್ರಮವಾಗಿ ಮಣ್ಣು ಅಗೆಯುವಾಗ ದುರಂತ ಸಂಭವಿಸಿರುವುದರಿಂದ ಯಮಕನಮರಡಿ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನೂ ಕಲೆ ಹಾಕುತ್ತಿದ್ದಾರೆ.

ಇದನ್ನೂ ಓದಿ: Wall Collapse ಸಂಪ್​ ನಿರ್ಮಾಣದ ವೇಳೆ ಗೋಡೆ ಕುಸಿತ: ಮಹಿಳೆ ಸ್ಥಳದಲ್ಲೇ ಸಾವು