ಹಾಸನ: ಐಸ್ ಕ್ರೀಂ ಫ್ರಿಡ್ಜ್ ವಿಚಾರಕ್ಕೆ ಗಲಾಟೆ, ಹೋಟೆಲ್‌ನಲ್ಲಿದ್ದ ವಸ್ತುಗಳು ಧ್ವಂಸ!
ಜಿಲ್ಲೆಯಲ್ಲಿ ಪುಂಡರ ಅಟ್ಟಹಾಸ ಹೆಚ್ಚಾಗುತ್ತಿದ್ದು, ಐಸ್ ಕ್ರೀಂ ಫ್ರಿಡ್ಜ್ ವಿಚಾರಕ್ಕೆ ವಿಚಾರವಾಗಿ ಬೃಂದಾವನ ಫಿಶ್ ಲ್ಯಾಂಡ್ ಹೋಟೆಲ್ ಒಡೆದು ಹಾಕಿದ್ದಾರೆ.
ಹಾಸನ: ಜಿಲ್ಲೆಯಲ್ಲಿ ಪುಂಡರ ಅಟ್ಟಹಾಸ ಹೆಚ್ಚಾಗುತ್ತಿದ್ದು, ಐಸ್ ಕ್ರೀಂ ಫ್ರಿಡ್ಜ್ ವಿಚಾರಕ್ಕೆ ವಿಚಾರವಾಗಿ ಬೃಂದಾವನ ಫಿಶ್ ಲ್ಯಾಂಡ್ ಹೋಟೆಲ್ ಒಡೆದು ಹಾಕಿದ್ದಾರೆ. ಈ ಘಟನೆ ಹಾಸನ ಹೊರವಲಯದ ರಾಷ್ಟ್ರೀಯ ಹೆದ್ದಾರಿ 75ರ ಬೂವನಹಳ್ಳಿ ಬಳಿ ನಡೆದಿದೆ.
ಫಾಲಾಕ್ಷ ಎಂಬುವರು ಡಾಬಾಕ್ಕೆ ಡೈರಿ ಡೇ ಕಂಪನಿಯ ಐಸ್ ಕ್ರೀಂ ಫ್ರಿಡ್ಜ್ ನೀಡಿದ್ದರು. ಫ್ರಿಡ್ಜ್ ಸರಿಯಿಲ್ಲ ಅದನ್ನು ವಾಪಸ್ ತೆಗೆದುಕೊಂಡು ಡೆಪಾಸಿಟ್ ವಾಪಸ್ ಕೊಡಿ ಎಂದು ಹೋಟೆಲ್ ಮಾಲೀಕ ರಂಗಸ್ವಾಮಿ ಹೇಳಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿ ಇಬ್ಬರ ನಡುವೆ ಜಗಳ ಉಂಟಾಗಿದೆ. ಕಳೆದ ಹದಿನೈದು ದಿನಗಳ ಹಿಂದೆ ಚೇತನ್ ಹಾಗೂ ಫಾಲಾಕ್ಷ ಇಬ್ಬರೂ ಸೇರಿ ರಂಗಸ್ವಾಮಿಗೆ ಹಲ್ಲೆ ಮಾಡಿದ್ದಾರೆ.
ಈ ಕುರಿತಂತೆ ರಂಗಸ್ವಾಮಿ ದೂರು ದಾಖಲಿಸಿದ್ದರು. ರಾಜಿ ಸಂಧಾನಕ್ಕೆ ಬನ್ನಿ ಎಂದು ಚೇತನ್, ಹೋಟೆಲ್ ಮಾಲೀಕ ರಂಗಸ್ವಾಮಿಯನ್ನು ಕರೆದಿದ್ದರು. ಆದರೆ ರಂಗಸ್ವಾಮಿ ರಾಜಿಗೆ ಒಪ್ಪಲಿಲ್ಲ. ಇದರಿಂದ ಸಿಟ್ಟಿಗೆದ್ದ ಚೇತನ್ ಮತ್ತು ಫಾಲಾಕ್ಷ, ನಿನ್ನೆ ಮತ್ತೆ ಹೋಟೆಲ್ಗೆ ಬಂದು ಕಬ್ಭಿಣದ ರಾಡ್ ಬಳಸಿ ಇಡೀ ಹೋಟೆಲ್ನ್ನು ಧ್ವಂಸ ಮಾಡಿದ್ದಾರೆ. ಹಾಸನ ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಸಮೋಸ ಖರೀದಿಗೆ ಬಂದವರಿಂದ ಹೋಟೆಲ್ ಸಿಬ್ಬಂದಿ ಮೇಲೆ ಗುಂಡಿನ ದಾಳಿ, ಯಾವೂರಲ್ಲಿ?
ಇದನ್ನೂ ಓದಿ: ಹಾಸನ: ಖಾಸಗಿ ಹೋಟೆಲ್ನಲ್ಲಿ ಯುವತಿ ಅನುಮಾನಾಸ್ಪದ ಸಾವು, ಆತ್ಮಹತ್ಯೆಯಾ?