ಎಕ್ಸಾಂ ಗೊಂದಲ? ವಿ.ವಿ.ಪುರಂ ಬಿಐಟಿ ಕಾಲೇಜು ಕಟ್ಟಡದಿಂದ ಜಿಗಿದು ರ‍್ಯಾಂಕ್ ವಿದ್ಯಾರ್ಥಿ ಸಾವು

ಕಾಲೇಜಿನ ಕಟ್ಟಡದ ಮೇಲಿಂದ ಜಿಗಿದು ವಿದ್ಯಾರ್ಥಿ ಜಯಂತ್​ ರೆಡ್ಡಿ ತೀವ್ರವಾಗಿ ಗಾಯಗೊಂಡಿದ್ದ. ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಸ್ಥಳಕ್ಕೆ ವಿ.ವಿ.ಪುರಂ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಎಕ್ಸಾಂ ಗೊಂದಲ? ವಿ.ವಿ.ಪುರಂ ಬಿಐಟಿ ಕಾಲೇಜು ಕಟ್ಟಡದಿಂದ ಜಿಗಿದು ರ‍್ಯಾಂಕ್ ವಿದ್ಯಾರ್ಥಿ ಸಾವು
ಬಿಐಟಿ ಕಾಲೇಜಿನ ಕಟ್ಟಡದ ಮೇಲಿಂದ ಜಿಗಿದು ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on:Mar 01, 2021 | 6:39 PM

ಬೆಂಗಳೂರು: ಪ್ರತಿಷ್ಠಿತ ಕಾಲೇಜಿನ ಕಟ್ಟಡದಿಂದ ಹಾರಿ ಪ್ರತಿಭಾವಂತ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ವಿ.ವಿ.ಪುರಂನ ಕೆ ಆರ್​ ರಸ್ತೆಯಲ್ಲಿರುವ ಪ್ರತಿಷ್ಠಿತ ಬೆಂಗಳೂರು ಇನ್​​ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ (ಬಿಐಟಿ) ಕಾಲೇಜಿನಲ್ಲಿ ಇಂತಹದೊಂದು ಘಟನೆ ನಡೆದಿದೆ. ಡೆತ್​ನೋಟ್ ಬರೆದಿಟ್ಟು ವಿದ್ಯಾರ್ಥಿ ಜಯಂತ್​ ರೆಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕಾಲೇಜಿನ ಕಟ್ಟಡದ ಮೇಲಿಂದ ಜಿಗಿದು ವಿದ್ಯಾರ್ಥಿ ಜಯಂತ್​ ರೆಡ್ಡಿ ತೀವ್ರವಾಗಿ ಗಾಯಗೊಂಡಿದ್ದ. ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಸ್ಥಳಕ್ಕೆ ವಿ.ವಿ.ಪುರಂ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿದ್ಯಾರ್ಥಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿದ್ಯಾರ್ಥಿ ಮೃತ ದೇಹವನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ವಿದ್ಯಾರ್ಥಿ ಜಯಂತ್​ ರೆಡ್ಡಿ ಇಂಜಿನಿಯರಿಂಗ್ ಕಂಪ್ಯೂಟರ್ ಸೈನ್ಸ್ 3ನೇ ಸೆಮ್ ಓದುತ್ತಿದ್ದ. ಎಕ್ಸಾಂಗೆ ಇನ್ನು ಒಂದು ತಿಂಗಳು ಮಾತ್ರ ಬಾಕಿ ಇತ್ತು. ಆದ್ರೆ ಆರನೇ ಅಂತಸ್ತಿನಿಂದ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿದ್ಯಾರ್ಥಿ ಆತ್ಮಹತ್ಯೆ ಬಳಿಕ ಕಾಲೇಜಿನಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ. ಅಗತ್ಯ ಇಲ್ಲದೆ ಕಾಲೇಜು ಒಳಗೆ ಬರೋ ವಿದ್ಯಾರ್ಥಿಗಳಿಗೂ ಪ್ರವೇಶ ನಿಷೇಧಿಸಲಾಗಿದೆ.

ಎಕ್ಸಾಂ ಗೊಂದಲದಲ್ಲಿ ವಿದ್ಯಾರ್ಥಿ ಆತ್ಮಹತ್ಯೆ? ಒತ್ತಡಕ್ಕೆ ಸಿಲುಕಿ ಯುವಕ ಆತಹತ್ಯೆ ಮಾಡಿಕೊಂಡಿದ್ದಾನೆಂದು ಆತನ ಗೆಳೆಯರು ಹೇಳುತಿದ್ದಾರೆ. ಎಕ್ಸಾಂಗೆ ಕೆಲವೇ ದಿನಗಳ ಬಾಕಿ ಇವೇ. ಈ ಸಂದರ್ಭದಲ್ಲಿ ಫೀಸ್ ಕಟ್ಟಿ ಅಂತಾರೆ. ಆದ್ರೆ ಇನ್ನೂ ಸಿಲಬಸ್ ಕಂಪ್ಲೀಟ್ ಆಗಿಲ್ವಂತೆ. ಬೆಳಗಾವಿಯಲ್ಲೂ ಇದೇ ರೀತಿಯ ಸಮಸ್ಯೆಗೆ ಓರ್ವ ಮೃತಪಟ್ಟಿದ್ದ. ಈಗ ಇಲ್ಲಿ ಆಗಿದೆ, ಆತನಿಗೆ ಹೆಚ್ಚು ಒತ್ತಡ ಆಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆನ್ನಲಾಗಿದೆ ಎಂದು ಎನ್​ಎಸ್​ಸಿಯುಐ ಕೋರ್ಡಿನೇಟರ್ ಮನ್ವಿತ್ ಕಟೀಲ್ ಹೇಳಿದ್ದಾರೆ.

ಆತ್ಮಹತ್ಯೆ ಬಗ್ಗೆ ಸಹಪಾಠಿಗಳು ಹೇಳೋದೇನು? ಸಿಲೆಬಸ್ ಕಂಪ್ಲೀಟ್ ಆಗಿಲ್ಲ, ಪರೀಕ್ಷೆಗಳು ಹತ್ತಿರ ಬಂತು. ಇದೇ ಒತ್ತಡದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಟಿವಿ9ಗೆ ಮೃತ ವಿದ್ಯಾರ್ಥಿ ಸ್ನೇಹಿತರು ಮಾಹಿತಿ ನೀಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಜಯಂತ್ ರೆಡ್ಡಿ ರ‍್ಯಾಂಕ್ ಸ್ಟೂಡೆಂಟ್. ಶೇ.94ರಷ್ಟು ಅಂಕ ಪಡೆಯುತ್ತಿದ್ದ. ಆದ್ರೆ ಇತ್ತೀಚೆಗೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದೆ. ಹಾಗೂ ಎರಡು ಬಾರಿ ಕೌನ್ಸಲಿಂಗ್ ಸಹ ನಡೆದಿತ್ತು ಎಂಬ ಮಾಹಿತಿ ಸಿಕ್ಕಿದೆ. ದಿನ ದಿನ ಸಾಯೋಕೆ ನನಗೆ ಆಗ್ತಿಲ್ಲ. ಅದಕ್ಕೆ ಒಂದೇ ಸಲ ಸಾವಿನ ನಿರ್ಧಾರ ಮಾಡಿದ್ದಾಗಿ ಡೆತ್ ನೋಟ್​ನಲ್ಲಿ ಉಲ್ಲೇಖಿಸಿದ್ದಾನೆ. ಮೊದಲೇ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿ ಕಾಲೇಜಿಗೆ ಬಂದಿರುವ ಬಗ್ಗೆ ಒಂದು ಪುಟದ ಡೆತ್ ನೋಟ್​ನಲ್ಲಿ ವಿದ್ಯಾರ್ಥಿ ಜಯಂತ್ ರೆಡ್ಡಿ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ: PUBG ಆಡುವಾಗ ಗೆಳೆಯರಿಂದ ಅವಮಾನ, ನೇಣು ಬಿಗಿದುಕೊಂಡು ITI ವಿದ್ಯಾರ್ಥಿ ಆತ್ಮಹತ್ಯೆ

Published On - 11:42 am, Mon, 1 March 21