Covid-19 Vaccine Cowin Registration: ಕೊರೊನಾ ಲಸಿಕೆ ಪಡೆಯಲು ರಿಜಿಸ್ಟ್ರೇಷನ್ ಮಾಡಿಕೊಳ್ಳುವುದು ಹೇಗೆ?
Registration for Covid-19 Vaccination: ಈಗಾಗಲೇ ಮೊದಲನೇ ಹಾಗೂ ಎರಡನೇ ಹಂತದಲ್ಲಿ ಕೊರೊನಾ ವಾರಿಯರ್ಸ್ಗೆ ಲಸಿಕೆ ನೀಡಲಾಗಿದ್ದು, ಇದೀಗ ಮೂರನೇ ಹಂತದಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಉಚಿತ ಲಸಿಕೆ ನೀಡಲಾಗುತ್ತಿದೆ. ಹಾಗೂ 45 ವರ್ಷ ಮೇಲ್ಪಟ್ಟವರು ಕಾಯಿಲೆಯಿಂದ ಬಳಲುತ್ತಿದ್ದರೆ ಉಚಿತವಾಗಿ ಮಾರ್ಚ್ 1ರಿಂದ ಲಸಿಕೆ ನೀಡಲಾಗುತ್ತದೆ.
ಕೊರೊನಾ ಲಸಿಕೆ ವಿತರಣೆಯ ಎರಡನೇ ಹಂತಕ್ಕೆ ಭಾರತ ಸಜ್ಜಾಗಿ ನಿಂತಿಗೆ. ಮೊದಲ ಮತ್ತು ಎರಡನೇ ಹಂತದಲ್ಲಿ ಆರೋಗ್ಯ ಮತ್ತು ಮುಂಚೂಣಿಯ ಕೊವಿಡ್ ಕಾರ್ಯಕರ್ತರಿಗೆ ಲಸಿಕೆ ವಿತರಿಸಲಾಗಿತ್ತು. ಈ ಬಾರಿ ಮೂರನೇ ಹಂತದ ಲಸಿಕೆ ವಿತರಣೆಯಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಮತ್ತು 45 ವರ್ಷ ವಯಸ್ಸು ಮೀರಿ ಆರೋಗ್ಯ ಸಮಸ್ಯೆ ಇರುವವರಿಗೆ ಲಸಿಕೆ ನೀಡಲಾಗುತ್ತಿದೆ. ಕೊವಿಡ್ ಲಸಿಕೆ ಪಡೆಯಲು ಹಿರಿಯ ನಾಗರಿಕರು ರಿಜಿಸ್ಟ್ರೇಷನ್ ಮಾಡಿಕೊಳ್ಳಬಹುದಾಗಿದೆ. ಕೊರೊನಾ ಚುಚ್ಚುಮದ್ದು ಪಡೆಯಲು Co-Win ಪೋರ್ಟಲ್ ಮೂಲಕ ರಿಜಿಸ್ಟ್ರೇಷನ್ ಮಾಡಬಹುದು. Co-Win ಪೋರ್ಟಲ್ ಸೌಲಭ್ಯವನ್ನು ಇಂದು (ಮಾರ್ಚ್ 1) 9 ಗಂಟೆಯಿಂದ ಆರಂಭಿಸಲಾಗಿದೆ. ಜತೆಗೆ, ಆರೋಗ್ಯ ಸೇತು ಆ್ಯಪ್ ಮೂಲಕವೂ ನಾಗರಿಕರು ರಿಜಿಸ್ಟರ್ ಆಗಬಹುದು ಎಂದು ಸರ್ಕಾರ ಹೇಳಿಕೆಯಲ್ಲಿ ಮಾಹಿತಿ ನೀಡಿದೆ.
ಈಗಾಗಲೇ ಮೊದಲನೇ ಹಾಗೂ ಎರಡನೇ ಹಂತದಲ್ಲಿ ಕೊರೊನಾ ವಾರಿಯರ್ಸ್ಗೆ ಲಸಿಕೆ ನೀಡಲಾಗಿದ್ದು, ಇದೀಗ ಮೂರನೇ ಹಂತದಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಉಚಿತ ಲಸಿಕೆ ನೀಡಲಾಗುತ್ತಿದೆ. ಹಾಗೂ 45 ವರ್ಷ ಮೇಲ್ಪಟ್ಟವರು ಕಾಯಿಲೆಯಿಂದ ಬಳಲುತ್ತಿದ್ದರೆ ಅವರಿಗೆ ಉಚಿತವಾಗಿ ಮಾರ್ಚ್ 1ರಿಂದ ಲಸಿಕೆ ನೀಡಲಾಗುತ್ತದೆ.
ಕೊರೊನಾ ಲಸಿಕೆ ಪಡೆಯಲು ಏನು ಮಾಡಬೇಕು?
- Co-Win ಪೋರ್ಟಲ್ ಬಳಸಿ. www.cowin.gov.in ಗೆ ಲಾಗ್ಇನ್ ಆಗಿ.
- ಅಲ್ಲಿ ನಿಮ್ಮ ಮೊಬೈಲ್ ನಂಬರ್ ನಮೂದಿಸಿ. ನೀವು ಸಲ್ಲಿಸಿದ ಮೊಬೈಲ್ ನಂಬರ್ಗೆ OTP ಬರುತ್ತದೆ. ಆ OTPಯನ್ನು ನಮೂದಿಸಿ, ‘Verify’ ಬಟನ್ ಕ್ಲಿಕ್ ಮಾಡಿ. ರಿಜಿಸ್ಟ್ರೇಷನ್ ಮಾಡಿಕೊಳ್ಳಿ.
- ಲಸಿಕೆ ಪಡೆಯಲು ರಿಜಿಸ್ಟ್ರೇಷನ್ ಮಾಡಿಕೊಳ್ಳುವ ಪುಟ ತೆರೆದುಕೊಳ್ಳುತ್ತದೆ. ಐಡಿ ನೋಂದಣಿಗಾಗಿ ಫೋಟೋ ಗುರುತು ಇರುವ ಗುರುತಿನ ಚೀಟಿ (ಆಧಾರ್ ಕಾರ್ಡ್) ಅಗತ್ಯ. ಜತೆಗೆ, ನಿಮ್ಮ ಹೆಸರು, ವಯಸ್ಸು, ಲಿಂಗ ವಿವರಗಳನ್ನು ದಾಖಲಿಸಿ.
- ನಿಮಗೆ ಆರೋಗ್ಯ ಸಮಸ್ಯೆಗಳು ಇರುವ ಬಗ್ಗೆ ಪೋರ್ಟಲ್ ವಿವರಗಳನ್ನು ಕೇಳುತ್ತದೆ. ಇದೆ ಎಂದಾದರೆ Yes ಎಂದು. ಇಲ್ಲವಾದರೆ No ಎಂದು ಕ್ಲಿಕ್ ಮಾಡಿ.
- ನೀವು 45+ ವಯಸ್ಸಿನವರು ಮತ್ತು ನಿಗದಿತ ಆರೋಗ್ಯ ಸಮಸ್ಯೆ ಇದೆ ಎಂದಾದರೆ ಪುರಾವೆಗಾಗಿ ವೈದ್ಯರು ನೀಡಿರುವ ಪ್ರಮಾಣ ಪತ್ರ ಅಪ್ಲೋಡ್ ಮಾಡಿ.
- ಈ ಎಲ್ಲಾ ವಿವರಗಳು ಅಪ್ಲೋಡ್ ಮಾಡಿದ ನಂತರ, ‘Register’ ಬಟನ್ ಒತ್ತಿರಿ. ಒಂದು ಬಾರಿ ರಿಜಿಸ್ಟ್ರೇಷನ್ ಆದ ಬಳಿಕ Co-Win ಖಾತೆಯಲ್ಲಿ ನೀವು ದಾಖಲಿಸಿದ ವಿವರಗಳನ್ನು (Account Details) ನೋಡಬಹುದು.
- ಒಬ್ಬ ವ್ಯಕ್ತಿಯ, ಒಂದು ಮೊಬೈಲ್ ಸಂಖ್ಯೆಯ ಮೂಲಕ ಹೆಚ್ಚುವರಿಯಾಗಿ ಇನ್ನೂ ಮೂರು ಜನರ ವಿವರಗಳನ್ನು ಲಸಿಕೆ ಪಡೆಯುವ ಸಲುವಾಗಿ ದಾಖಲಿಸಿಕೊಳ್ಳಬಹುದು. ಹೀಗೆ ಮಾಡಲು ‘Add More’ ಎಂಬ ಬಟನ್ ಕ್ಲಿಕ್ ಮಾಡಿ.
- ಬಳಿಕ ನಿಮಗೆ ವೈದ್ಯರ ಅಪಾಯಿಂಟ್ಮೆಂಟ್ ಪಡೆಯಲು ನಿಗದಿತ ಸಮಯ, ದಿನಾಂಕ ಮತ್ತು ಸ್ಥಳ ಆಯ್ಕೆಯ ಅವಕಾಶ (Schedule Appointment) ಸಿಗುತ್ತದೆ.
- ನಿಮಗೆ ಸೂಕ್ತವಾದ ಲಸಿಕಾ ಕೇಂದ್ರವನ್ನು ಆರಿಸಿಕೊಳ್ಳಿ. ರಾಜ್ಯ, ಜಿಲ್ಲೆ, ಬ್ಲಾಖ್ ಮತ್ತು ಪಿನ್ಕೋಡ್ ನಮೂದಿಸುವ ಮೂಲಕ ಲಸಿಕಾ ಕೇಂದ್ರ ಆರಿಸಿಕೊಳ್ಳಿ. ಲಸಿಕೆ ಪಡೆಯುವ ದಿನಾಂಕ ಮತ್ತು ಸಮಯ ಕೂಡ ಇಲ್ಲಿ ತಿಳಿಯುತ್ತದೆ.
- ಕೊನೆಯದಾಗಿ, ‘Book’ ಬಟನ್ ಕ್ಲಿಕ್ ಮಾಡಿ.
- ನೆನಪಿಡಿ. ಒಂದು ಬಾರಿ ಅಪಾಯಿಂಟ್ಮೆಂಟ್ ಪಡೆದ ಬಳಿಕವೂ ಲಸಿಕೆ ಪಡೆಯುವ ದಿನಾಂಕದಲ್ಲಿ ಬದಲಾವಣೆಗಳಿದ್ದರೆ ತಿಳಿಸಬಹುದು. ಲಸಿಕೆ ಪಡೆಯಲು ಸೂಚಿಸಿದ್ದ ದಿನದ ಹಿಂದಿನ ದಿನದವರೆಗೂ ಅಪಾಯಿಂಟ್ಮೆಂಟ್ Reschedule ಮಾಡಿಕೊಳ್ಳಬಹುದಾಗಿದೆ.
- ಲಸಿಕೆ ಪಡೆದ ನಂತರ ಪ್ರಮಾಣ ಪತ್ರ ನಿಮಗೆ ಲಭಿಸಲಿದೆ. ನೋಂದಣಿ ಮಾಡಿದ ಐಡಿ ಬಳಸಿ ಪ್ರಮಾಣ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
45 ವರ್ಷ ಮೇಲ್ಪಟ್ಟವರು ಅನಾರೋಗ್ಯದ ಕುರಿತಾಗಿ ವೈದ್ಯಕೀಯ ಪ್ರಮಾಣ ಪತ್ರವನ್ನು ಸಲ್ಲಿಸುವುದು ಕಡ್ಡಾಯ ಹೃದಯ ಸಂಬಂಧಿ ಕಾಯಿಲೆಗಳು, ಮಧುಮೇಹ, ಅಧಿಕ ರಕ್ತದೊತ್ತಡ, ಕ್ಯಾನ್ಸರ್ ಮತ್ತು ಏಡ್ಸ್ ರೋಗದಿಂದ ಬಳಲುತ್ತಿರುವ ಹೆಸರು ನೋಂದಾಯಿಸಬಹುದು. ಹೃದಯ ಸಂಬಂಧಿ ಕಾಯಿಲೆಗಳಿಗೆ ಸಂಬಂಧಿಸಿ, ಕಳೆದ ಒಂದು ವರ್ಷದಲ್ಲಿ ಹೃದಯ ವೈಫಲ್ಯದಿಂದ ಬಳಲುತ್ತಿರುವ ಮತ್ತು ಆಸ್ಪತ್ರೆಗೆ ದಾಖಲಾದವರು, ತೀವ್ರವಾದ ಶ್ವಾಸಕೋಶದ ಅಪಧಮನಿ ಅಧಿಕ ರಕ್ತದೊತ್ತಡ (ಪಿಎಹೆಚ್), ಹೃದಯ ಕಾಯಿಲೆಗಳಿಂದ ಬಳಲುತ್ತಿರುವವರು ಲಸಿಕೆ ಪಡೆಯಲು ಅರ್ಹರು. 10 ವರ್ಷಗಳಿಗಿಂತ ಹೆಚ್ಚು ಕಾಲ ಮಧುಮೇಹದಿಂದ ಬಳಲುತ್ತಿರುವ ಅಥವಾ ಮಧುಮೇಹದಿಂದ ಉಂಟಾಗುವ ತೊಂದರೆಗಳನ್ನು ಹೊಂದಿರುವವರು ನೋಂದಣಿ ಮಾಡಿಕೊಳ್ಳಬಹುದು. ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ಹೊಂದಿರುವವರನ್ನು ಸಹ ಲಸಿಕೆ ಪಡೆಯುವ ಪಟ್ಟಿಯಲ್ಲಿ ಪರಿಗಣಿಸಲಾಗುತ್ತದೆ.
ಇದನ್ನೂ ಓದಿ: Covid 19 Vaccination: ದೆಹಲಿಯ ಏಮ್ಸ್‌ನಲ್ಲಿ ಕೊರೊನಾ ಲಸಿಕೆ ಪಡೆದ ಪ್ರಧಾನಿ ನರೇಂದ್ರ ಮೋದಿ
CO-WIN APP: ಕೋ-ವಿನ್ ಆ್ಯಪ್ ಡೌನ್ಲೋಡ್ ಮಾಡುವುದು ಹೇಗೆ?
Published On - 11:04 am, Mon, 1 March 21