VIDEO: ಹೀಗೂ ಉಂಟೆ… ಅಳತೆ ಮೀರಿದ ಬ್ಯಾಟ್ ಬಳಸಲು ರವೀಂದ್ರ ಜಡೇಜಾ ಸರ್ಕಸ್
IPL 2025 CSK vs SRH: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್ 2025) 43ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 154 ರನ್ ಕಲೆಹಾಕಿದರೆ, ಈ ಗುರಿಯನ್ನು ಸನ್ರೈಸರ್ಸ್ ಹೈದರಾಬಾದ್ ತಂಡ 18.4 ಓವರ್ಗಳಲ್ಲಿ ಚೇಸ್ ಮಾಡಿದೆ. ಈ ಮೂಲಕ ಎಸ್ಆರ್ಹೆಚ್ ತಂಡ 5 ವಿಕೆಟ್ಗಳ ಗೆಲುವು ದಾಖಲಿಸಿದೆ.
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ 43ನೇ ಪಂದ್ಯದಲ್ಲಿ ಅಳತೆ ಮೀರಿದ ಬ್ಯಾಟ್ ಬಳಸಲು ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಸ್ಟಾರ್ ಆಟಗಾರ ರವೀಂದ್ರ ಜಡೇಜಾ (Ravindra Jadeja) ನಾನಾ ಸರ್ಕಸ್ ನಡೆಸಿದ್ದಾರೆ. ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಈ ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಜಡೇಜಾ ಅವರ ಬ್ಯಾಟ್ನ ಅಳತೆಯನ್ನು ಅಂಪೈರ್ ಪರಿಶೀಲಿಸಿದ್ದರು. ಈ ವೇಳೆ ನಿಗದಿತ ಮಿತಿಗಿಂತ ಬ್ಯಾಟ್ ದಪ್ಪಗಿರುವುದು ಕಂಡು ಬಂದಿದೆ.
ದಪ್ಪವಿರುವುದು ಗೊತ್ತಾಗುತ್ತಿದ್ದಂತೆ ಜಡೇಜಾ ಬ್ಯಾಟ್ ಅನ್ನು ನೆಲಕ್ಕೆ ಬಡಿಯಲಾರಂಭಿಸಿದ್ದಾರೆ. ಆ ಬಳಿಕ ಮತ್ತೆ ಅಂಪೈರ್ಗೆ ಪರಿಶೀಲನೆಗೆ ನೀಡಿದ್ದಾರೆ. ಈ ವೇಳೆಯೂ ಅವರ ಬ್ಯಾಟ್ ನಿಗದಿತ ಮಿತಿಗಿಂತ ದೊಡ್ಡದಿರುವುದು ಕಂಡು ಬಂದಿದೆ. ಹೀಗಾಗಿ ಬ್ಯಾಟ್ ಬದಲಿಸುವಂತೆ ಅಂಪೈರ್ ಸೂಚಿಸಿದ್ದಾರೆ. ಇದೀಗ ರವೀಂದ್ರ ಜಡೇಜಾ ಅವರ ಬ್ಯಾಟ್ ವಿಡಿಯೋ ವೈರಲ್ ಆಗಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಾವಳಿಗಾಗಿ ಬ್ಯಾಟ್ನ ಆಯಾಮಗಳಿಗೆ ಮಿತಿಯನ್ನು ನಿಗದಿಪಡಿಸಲಾಗಿದೆ. ಅದರ ಪ್ರಕಾರ ಬ್ಯಾಟ್ನ ಅಂಚಿನ ಅಗಲ 4 ಸೆಂಟಿಮೀಟರ್, ಮುಖದ ಅಗಲ 10.79 ಸೆಂಟಿಮೀಟರ್ಗಳನ್ನು ಮೀರಿರಬಾರದು. ಇನ್ನು ಬ್ಲೇಡ್ನ ದಪ್ಪ 6.7 ಸೆಂ.ಮೀ ಮೀರಬಾರದು. ಹಾಗೆಯೇ ಬ್ಯಾಟ್ನ ಉದ್ದ 96.4 ಸೆಂಟಿಮೀಟರ್ಗಿಂತ ಹೆಚ್ಚಿರಬಾರದು ಎಂದು ತಿಳಿಸಲಾಗಿದೆ. ಹೀಗಾಗಿ ಅಂಪೈರ್ ಪರಿಶೀಲನೆ ಬಳಿಕವಷ್ಟೇ ಬ್ಯಾಟ್ ಬಳಸಲು ಅವಕಾಶ ನೀಡಲಾಗುತ್ತಿದೆ.
ಅರ್ನಬ್ ಚಂಡಮಾರುತದ ಅಬ್ಬರ; ಭೋರ್ಗರೆಯುತ್ತಿದೆ ಒಡಿಶಾದ ಗಂಡಹಾತಿ ಜಲಪಾತ
ಹಾಲಿನ ಬೆಲೆ ಹೆಚ್ಚಿಸಿದ್ರೆ ವಿರೋಧವೇಕೆ; ಕೃಷ್ಣಬೈರೇಗೌಡ ಪ್ರಶ್ನೆ
ದೀಪಾವಳಿ ಹಬ್ಬಕ್ಕೆ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ ಅಯೋಧ್ಯೆಯ ರಾಮ ಮಂದಿರ
ಜಿಮ್ ಟ್ರೈನರ್ ಜೊತೆ ಪತಿಯ ಕೊಲೆ ಮಾಡಿದ ಪತ್ನಿ; ಸಿಸಿಟಿವಿ ವಿಡಿಯೋ ನೋಡಿ

