AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

CO-WIN APP: ಕೋ-ವಿನ್ ಆ್ಯಪ್​ ಡೌನ್​ಲೋಡ್​ ಮಾಡುವುದು ಹೇಗೆ?

Co-Win App: ಕೊರೊನಾ ಸಾಂಕ್ರಾಮಿಕ ರೋಗಕ್ಕೆ ಲಸಿಕೆ ಪಡೆಯಲು ಕೋ-ವಿನ್ ಅಪ್ಲಿಕೇಶನ್​ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಹಾಗಿದ್ದಲ್ಲಿ ನೋಂದಣಿ ಮಾಡುವ ಕ್ರಮ ಹೇಗಿದೆ ಎಂಬುದರ ಮಾಹಿತಿ ಇಲ್ಲಿದೆ.

CO-WIN APP: ಕೋ-ವಿನ್ ಆ್ಯಪ್​ ಡೌನ್​ಲೋಡ್​ ಮಾಡುವುದು ಹೇಗೆ?
ಕೋ-ವಿನ್ ( ಕೃಪೆ ಪಿಟಿಐ)
shruti hegde
|

Updated on:Feb 28, 2021 | 11:39 AM

Share

ಬೆಂಗಳೂರು: ದೇಶದೆಲ್ಲಡೆ ಕೊರೊನಾ ಸಾಂಕ್ರಾಮಿಕ ಮಾಹಾಮಾರಿಗೆ ಲಸಿಕೆ ನೀಡಲು ಇದೇ ಮಾರ್ಚ್​ 1ರಿಂದ 60 ವರ್ಷ ಮೇಲ್ಪಟ್ಟವಿರಿಗೆ ಕೊರೊನಾ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು. ಈ ಕುರಿತಂತೆ ಕೇಂದ್ರ ಸರ್ಕಾರ ಸ್ಪಷ್ಟಗೊಳಿಸಿದೆ. 45 ವರ್ಷ ಮೇಲ್ಪಟ್ಟ ಕಾಯಿಲೆಯಿಂದ ಬಳಲುತ್ತಿರುವರು ಮತ್ತು 60 ವರ್ಷ ಮೇಲ್ಪಟ್ಟವರು ಕೋ-ವಿನ್(CO-WIN) ಅಪ್ಲಿಕೇಶನ್​ ಒಂದರಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಹೇಗೆ ಅಪ್ಲಿಕೇಶನ್​ ಮೂಲಕ ಹೆಸರು ನೋಂದಾಯಿಸುವುದು? ಎಂಬುದರ ವಿವರ ಈ ಕೆಳಗಿಂತಿದೆ.

ಈಗಾಗಲೇ ಮೊದಲನೇ ಹಾಗೂ ಎರಡನೇ ಹಂತದಲ್ಲಿ ಕೊರೊನಾ ವಾರಿಯರ್ಸ್​ಗೆ ಲಸಿಕೆ ನೀಡಲಾಗಿದ್ದು, ಇದೀಗ ಮೂರನೇ ಹಂತದಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಉಚಿತ ಲಸಿಕೆ ನೀಡಲಾಗುತ್ತಿದೆ. ಹಾಗೂ 45 ವರ್ಷ ಮೇಲ್ಪಟ್ಟವರು ಕಾಯಿಲೆಯಿಂದ ಬಳಲುತ್ತಿದ್ದರೆ ಅವರಿಗೆ ಉಚಿತವಾಗಿ ಮಾರ್ಚ್​ 1ರಿಂದ ಲಸಿಕೆ ನೀಡಲಾಗುತ್ತದೆ.

ಕೋ-ವಿನ್ ಅಪ್ಲಿಕೇಶನ್ ಮೂಲಕ ಹೆಸರು ನೋದಾಯಿಸುವ ಸಂಪೂರ್ಣ ಮಾಹಿತಿ:

* ಮೊದಲು ನಿಮ್ಮ ಮೊಬೈಲ್​ನ ಮೂಲಕ ನೇರವಾಗಿ  cowin.gov.in ನಲ್ಲಿ ಕೋ-ವಿನ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವುದು.

* ನಿಮ್ಮ ಹೆಸರನ್ನು ನೋಂದಾಯಿಸಲು ಮೊಬೈಲ್​ನ 10 ಅಂಕಿಯ ಸಂಖ್ಯೆ ಅಥವಾ ಆಧಾರ್ ಸಂಖ್ಯೆಯನ್ನು ನಮೂದಿಸಿ

* ಐಡಿ ನೋಂದಣಿಗಾಗಿ ಫೋಟೋ ಗುರುತು ಇರುವ  ಗುರುತಿನ ಚೀಟಿ (ಆಧಾರ್ ಕಾರ್ಡ್) ಅಗತ್ಯ

* ನಮೂದಿಸಿದ  ಮೊಬೈಲ್  ಸಂಖ್ಯೆಗೆ  ಒಟಿಪಿ ಬರುತ್ತದೆ.  ಆ ಒಟಿಪಿಯನ್ನು ಅಪ್ಲಿಕೇಶನ್​ನಲ್ಲಿ ನಮೂದಿಸಿರಿ. ನಿಮ್ಮ ಖಾತೆ ಇದೀಗ ರಚನೆಯಾಗುತ್ತದೆ.

* ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ ನಿಗದಿತ ದಿನಾಂಕ ಮತ್ತು ಸಮಯದ ಮೇಲೆ ವ್ಯಾಕ್ಸಿನೇಷನ್ ಕೇಂದ್ರಕ್ಕೆ ಭೇಟಿ ನೀಡುವ ಮಾಹಿತಿ ಸಿಗುತ್ತದೆ.

* ಲಸಿಕೆ ಪಡೆದ ನಂತರ ಪ್ರಮಾಣ ಪತ್ರ ನಿಮಗೆ ಲಭಿಸಲಿದೆ.  ನೋಂದಣಿ ಮಾಡಿದ ಐಡಿ ಬಳಸಿ ಪ್ರಮಾಣ ಪತ್ರವನ್ನು ಡೌನ್​ ಲೋಡ್ ಮಾಡಿಕೊಳ್ಳಬಹುದು.

45 ವರ್ಷ ಮೇಲ್ಪಟ್ಟವರು ಅನಾರೋಗ್ಯದ ಕುರಿತಾಗಿ ವೈದ್ಯಕೀಯ ಪ್ರಮಾಣ ಪತ್ರವನ್ನು ಸಲ್ಲಿಸುವುದು ಕಡ್ಡಾಯ

ಹೃದಯ ಸಂಬಂಧಿ ಕಾಯಿಲೆಗಳು, ಮಧುಮೇಹ, ಅಧಿಕ ರಕ್ತದೊತ್ತಡ, ಕ್ಯಾನ್ಸರ್ ಮತ್ತು ಏಡ್ಸ್ ರೋಗದಿಂದ ಬಳಲುತ್ತಿರುವ ಹೆಸರು ನೋಂದಾಯಿಸಬಹುದು. ಹೃದಯ ಸಂಬಂಧಿ ಕಾಯಿಲೆಗಳಿಗೆ ಸಂಬಂಧಿಸಿ, ಕಳೆದ ಒಂದು ವರ್ಷದಲ್ಲಿ ಹೃದಯ ವೈಫಲ್ಯದಿಂದ ಬಳಲುತ್ತಿರುವ ಮತ್ತು ಆಸ್ಪತ್ರೆಗೆ ದಾಖಲಾದವರು, ತೀವ್ರವಾದ ಶ್ವಾಸಕೋಶದ ಅಪಧಮನಿ ಅಧಿಕ ರಕ್ತದೊತ್ತಡ (ಪಿಎಹೆಚ್), ಹೃದಯ ಕಾಯಿಲೆಗಳಿಂದ ಬಳಲುತ್ತಿರುವವರು ಲಸಿಕೆ ಪಡೆಯಲು ಅರ್ಹರು.

10 ವರ್ಷಗಳಿಗಿಂತ ಹೆಚ್ಚು ಕಾಲ ಮಧುಮೇಹದಿಂದ ಬಳಲುತ್ತಿರುವ ಅಥವಾ ಮಧುಮೇಹದಿಂದ ಉಂಟಾಗುವ ತೊಂದರೆಗಳನ್ನು ಹೊಂದಿರುವವರು ನೋಂದಣಿ ಮಾಡಿಕೊಳ್ಳಬಹುದು. ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ಹೊಂದಿರುವವರನ್ನು ಸಹ ಲಸಿಕೆ ಪಡೆಯುವ ಪಟ್ಟಿಯಲ್ಲಿ ಪರಿಗಣಿಸಲಾಗುತ್ತದೆ.

Published On - 11:35 am, Sun, 28 February 21

ಗಂಭೀರವಾಗಿ ಗಾಯಗೊಂಡು ಅರ್ಧಕ್ಕೆ ಬ್ಯಾಟಿಂಗ್‌ ನಿಲ್ಲಿಸಿದ ರಿಷಭ್ ಪಂತ್
ಗಂಭೀರವಾಗಿ ಗಾಯಗೊಂಡು ಅರ್ಧಕ್ಕೆ ಬ್ಯಾಟಿಂಗ್‌ ನಿಲ್ಲಿಸಿದ ರಿಷಭ್ ಪಂತ್
8 ವರ್ಷಗಳ ನಂತರ ವಿಕೆಟ್ ಪಡೆದ ಇಂಗ್ಲೆಂಡ್ ಬೌಲರ್
8 ವರ್ಷಗಳ ನಂತರ ವಿಕೆಟ್ ಪಡೆದ ಇಂಗ್ಲೆಂಡ್ ಬೌಲರ್
ಮೊದಲು ನನಗೆ ಬಾಸ್ ಅಂತಿದ್ರು, ಈಗ ಯಶ್​ಗೆ ಬಾಸ್ ಅಂತಾರೆ: ಪುಷ್ಪ
ಮೊದಲು ನನಗೆ ಬಾಸ್ ಅಂತಿದ್ರು, ಈಗ ಯಶ್​ಗೆ ಬಾಸ್ ಅಂತಾರೆ: ಪುಷ್ಪ
ಇಂದು ಅರಂಭಿಸಿದ್ದ ಪ್ರತಿಭಟನೆಯನ್ನು ವಾಪಸ್ಸು ಪಡೆದ ಸಣ್ಣ ವ್ಯಾಪಾರಿಗಳು
ಇಂದು ಅರಂಭಿಸಿದ್ದ ಪ್ರತಿಭಟನೆಯನ್ನು ವಾಪಸ್ಸು ಪಡೆದ ಸಣ್ಣ ವ್ಯಾಪಾರಿಗಳು
ಶೌಚಾಲಯದ ಸಿಬ್ಬಂದಿ ನೀಡುವ ಮಾಹಿತಿ ನಿಖರವಾಗಿಲ್ಲ, ಅಸ್ಪಷ್ಟ
ಶೌಚಾಲಯದ ಸಿಬ್ಬಂದಿ ನೀಡುವ ಮಾಹಿತಿ ನಿಖರವಾಗಿಲ್ಲ, ಅಸ್ಪಷ್ಟ
ಆಂಧ್ರದ ಅಮಲಾಪುರಂನಲ್ಲಿ 4 ಕೋಳಿಗಳನ್ನು ನುಂಗಿದ 6 ಅಡಿ ಉದ್ದದ ನಾಗರಹಾವು
ಆಂಧ್ರದ ಅಮಲಾಪುರಂನಲ್ಲಿ 4 ಕೋಳಿಗಳನ್ನು ನುಂಗಿದ 6 ಅಡಿ ಉದ್ದದ ನಾಗರಹಾವು
ಯಡಿಯೂರಪ್ಪ, ವಿಜಯೇಂದ್ರ ರೈತನ ಮಕ್ಕಳಾದ್ರೆ ನಾವು ಎಮ್ಮೆಯ ಮಕ್ಕಳೇ? ಯತ್ನಾಳ್
ಯಡಿಯೂರಪ್ಪ, ವಿಜಯೇಂದ್ರ ರೈತನ ಮಕ್ಕಳಾದ್ರೆ ನಾವು ಎಮ್ಮೆಯ ಮಕ್ಕಳೇ? ಯತ್ನಾಳ್
ಸಣ್ಣ ವ್ಯಾಪಾರಿಗಳಿಂದ ತೆರಿಗೆ ವಸೂಲಿ ಮಾಡಲ್ಲ: ಸಿಎಂ ಸ್ಪಷ್ಟನೆ
ಸಣ್ಣ ವ್ಯಾಪಾರಿಗಳಿಂದ ತೆರಿಗೆ ವಸೂಲಿ ಮಾಡಲ್ಲ: ಸಿಎಂ ಸ್ಪಷ್ಟನೆ
ಫೋಟೋ ತೆಗೆಸಿಕೊಂಡವರ ಹಿನ್ನೆಲೆ ನನಗೆ ಹೇಗೆ ಗೊತ್ತಾಗುತ್ತದೆ: ಬಸವರಾಜ
ಫೋಟೋ ತೆಗೆಸಿಕೊಂಡವರ ಹಿನ್ನೆಲೆ ನನಗೆ ಹೇಗೆ ಗೊತ್ತಾಗುತ್ತದೆ: ಬಸವರಾಜ
‘ಕೊತ್ತಲವಾಡಿ’ ಬಜೆಟ್ ಎಷ್ಟು? ಕಾಟನ್ ಸೀರೆ ಉದಾಹರಣೆ ಕೊಟ್ಟ ಯಶ್ ತಾಯಿ
‘ಕೊತ್ತಲವಾಡಿ’ ಬಜೆಟ್ ಎಷ್ಟು? ಕಾಟನ್ ಸೀರೆ ಉದಾಹರಣೆ ಕೊಟ್ಟ ಯಶ್ ತಾಯಿ