‘ಅನಾರೋಗ್ಯ..ಸರ್ಜರಿ’: ಬಾಲಿವುಡ್​ ಬಿಗ್​ ಬಿ ಅಮಿತಾಭ್​ ಬಚ್ಚನ್​ ಪೋಸ್ಟ್​ ನೋಡಿ ಅಭಿಮಾನಿಗಳಲ್ಲಿ ಆತಂಕ​

‘ಅನಾರೋಗ್ಯ..ಸರ್ಜರಿ’: ಬಾಲಿವುಡ್​ ಬಿಗ್​ ಬಿ ಅಮಿತಾಭ್​ ಬಚ್ಚನ್​ ಪೋಸ್ಟ್​ ನೋಡಿ ಅಭಿಮಾನಿಗಳಲ್ಲಿ ಆತಂಕ​
ಅಮಿತಾಭ್ ಬಚ್ಚನ್​

Amitabh Bachchan ಅವರು ಮೇ ಡೇ (May Day) ಎಂಬ ಆ್ಯಕ್ಷನ್​ ಸಿನಿಮಾದಲ್ಲಿ ಅಜಯ್​ ದೇವಗನ್​ ಜತೆ ನಟಿಸುತ್ತಿದ್ದು, ಅದರ ಶೂಟಿಂಗ್​ನಲ್ಲಿ ತೊಡಗಿಕೊಂಡಿದ್ದಾರೆ. ಸ್ವಲ್ಪ ದಿನಗಳ ಹಿಂದೆ ಸಿನಿಮಾ ಶೂಟಿಂಗ್​ ಸೆಟ್​ನಿಂದ ಕೆಲವು ಫೋಟೋಗಳನ್ನೂ ಹಂಚಿಕೊಂಡಿದ್ದರು.

Lakshmi Hegde

|

Feb 28, 2021 | 12:21 PM

ಮುಂಬೈ: ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್​ ಬಚ್ಚನ್(Amitabh Bachchan)​​ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿದೆ. ಈ ಬಗ್ಗೆ ಅಮಿತಾಭ್​ ಅವರೇ ತಮ್ಮ ಅಧಿಕೃತ ಬ್ಲಾಗ್​ನಲ್ಲಿ ದೃಢಪಡಿಸಿದ್ದಾರೆ. ಆರೋಗ್ಯ ಸ್ಥಿತಿ ಉತ್ತಮವಾಗಿಲ್ಲ..ಸರ್ಜರಿ..ಈಗೇನೂ ಬರೆಯಲು ಸಾಧ್ಯವಾಗುತ್ತಿಲ್ಲ ಎಂದು ಒಂದು ಲೈನ್​ನಲ್ಲಿ, ಚಿಕ್ಕದಾಗಿ ಬರೆದುಕೊಂಡಿದ್ದಾರೆ. ಆದರೆ ಅವರಿಗೆ ಈಗಾಗಲೇ ಸರ್ಜರಿ ಆಗಿದೆಯಾ? ಮುಂದೆ ಆಗಲಿದೆಯಾ ಎಂಬ ಬಗ್ಗೆ ಖಚಿತಪಡಿಸಿಲ್ಲ. ಅಂದರೆ ನನ್ನ ಆರೋಗ್ಯ ಸರಿಯಿಲ್ಲದ ಕಾರಣ ಬ್ಲಾಗ್​ನಲ್ಲಿ ಬರೆಯಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

ತಮ್ಮ ಆರೋಗ್ಯದ ಬಗ್ಗೆ ಬ್ಲಾಗ್​ನಲ್ಲಿಯೇ ವಿಸ್ತಾರ ಮಾಹಿತಿ ನೀಡುವ ಅಮಿತಾಭ್​ ಬಚ್ಚನ್​ ಕಳೆದ ವರ್ಷ ಕೊವಿಡ್​-19 ಸೋಂಕಿಗೆ ಒಳಗಾಗಿ, ಅದರಿಂದ ಗುಣಮುಖರಾದ ಬಳಿಕ ತಮ್ಮ ಕೊರೊನಾ ಜರ್ನಿ ಹೇಗಿತ್ತು ಎಂಬ ಬಗ್ಗೆ ಬರೆದುಕೊಂಡಿದ್ದರು. ಇನ್ನು 2019ರಲ್ಲಿ ಲಿವರ್​ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅಮಿತಾಭ್​ ಬಚ್ಚನ್​ಗೆ 1982ರಿಂದಲೂ ಲಿವರ್​ ಸಮಸ್ಯೆಯಿದ್ದು, ಶೇ.75ರಷ್ಟು ಕಾರ್ಯಕ್ಷಮತೆಯನ್ನು ಕಳೆದುಕೊಂಡುಬಿಟ್ಟಿದೆ. ಇದಾಗಿದ್ದು ಕೂಲಿ ಸಿನಿಮಾ ಶೂಟಿಂಗ್​ ವೇಳೆ. ಆಗ ಒಂದು ಮಾರಣಾಂತಿಕ ಅಪಘಾತಕ್ಕೀಡಾಗಿದ್ದ ಬಿಗ್​ ಬಿಗೆ ರಕ್ತ ಬೇಕಿತ್ತು. ಅಂದು ಅಮಿತಾಭ್​ ಬಚ್ಚನ್​ಗೆ ಯಾರ ರಕ್ತ ಸೇರಿಸಿದ್ದರೋ, ಆತನಿಗೆ ಹೆಪಟೈಟಿಸ್​ ಬಿ ಇದ್ದ ಕಾರಣ, ಸೋಂಕು ಅಮಿತಾಭ್​ಗೂ ತಗುಲಿತ್ತು. ಇದರಿಂದಾಗಿ ಅವರ ಲಿವರ್​ಗೆ ತುಂಬ ಹಾನಿಯಾಗಿತ್ತು.

Amitabh Bachchan Blog Post

ಬ್ಗಾಗ್​ನಲ್ಲಿ ತಮ್ಮ ಹೆಲ್ತ್​ ಅಪ್​ಡೇಟ್ಸ್​ ಕೊಟ್ಟ ಅಮಿತಾಭ್​ ಬಚ್ಚನ್

ಅಮಿತಾಭ್​ ಬಚ್ಚನ್​ ಅವರು ಮೇ ಡೇ (May Day) ಎಂಬ ಆ್ಯಕ್ಷನ್​ ಸಿನಿಮಾದಲ್ಲಿ ಅಜಯ್​ ದೇವಗನ್​ ಜತೆ ನಟಿಸುತ್ತಿದ್ದು, ಅದರ ಶೂಟಿಂಗ್​ನಲ್ಲಿ ತೊಡಗಿಕೊಂಡಿದ್ದಾರೆ. ಸ್ವಲ್ಪ ದಿನಗಳ ಹಿಂದೆ ಸಿನಿಮಾ ಶೂಟಿಂಗ್​ ಸೆಟ್​ನಿಂದ ಕೆಲವು ಫೋಟೋಗಳನ್ನೂ ಹಂಚಿಕೊಂಡಿದ್ದರು. ಆ ಫೋಟೋಗಳಲ್ಲಿ ಬಿಗ್​ ಬಿ ತುಂಬ ಫಿಟ್​ ಆಗಿ, ಆರೋಗ್ಯವಾಗಿಯೇ ಕಾಣಿಸುತ್ತಿದ್ದರು. ಹಾಗೇ ತಮ್ಮ ಮುಂದಿನ ಸಿನಿಮಾಗಳಾದ ಚೆಹ್ರೆ ಮತ್ತು ಝಂಡ್​ ಚಿತ್ರಗಳ ಬಿಡುಗಡೆಯ ದಿನಾಂಕಗಳನ್ನೂ ತಿಳಿಸಿದ್ದರು. ಇದೀಗ ಮತ್ತೆ ಸರ್ಜರಿ, ಅನಾರೋಗ್ಯ ಎಂದು ಬ್ಲಾಗ್​ನಲ್ಲಿ ಬರೆದುಕೊಂಡಿದ್ದನ್ನು ನೋಡಿ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಸರ್ಜರಿ ಆಗಿದೆಯೋ ಇಲ್ಲವೋ ಎಂಬುದು ದೃಢಪಡದಿದ್ದರೂ, ಅಭಿಮಾನಿಗಳು ಬಿಗ್​ ಬಿ ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ದಾರೆ. ಬೇಗನೇ ಗುಣಮುಖರಾಗಿ ಎಂದು ಹಾರೈಸಿದ್ದಾರೆ. ನಾವೆಲ್ಲ ನಿಮ್ಮನ್ನು ಪ್ರೀತಿಸುತ್ತೇವೆ..ನಿಮ್ಮ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತೇವೆ ಎಂದೂ ಅಭಿಮಾನಿಗಳು ಹೇಳಿದ್ದಾರೆ.

ಇದನ್ನೂ ಓದಿ: ಕೊರೊನಾ ಗೆದ್ದ ಅಮಿತಾಭ್‌ ಬಚ್ಚನ್‌, ಆಸ್ಪತ್ರೆಯಿಂದ ಡಿಸ್‌ಚಾರ್ಜ್‌

ಬಚ್ಚನ್​ ಜತೆ ತೆರೆಹಂಚಿಕೊಳ್ಳಲಿದ್ದಾರೆ ರಶ್ಮಿಕಾ!

Follow us on

Related Stories

Most Read Stories

Click on your DTH Provider to Add TV9 Kannada