Cockfight | ಹುಂಜಗಳ ಕಾದಾಟ: ಮಾಲೀಕನನ್ನೇ ಕೊಂದ ಹುಂಜ ಪೊಲೀಸರ ವಶಕ್ಕೆ
ಕೋಳಿ ಪಂದ್ಯಕ್ಕೆ ತಯಾರಾಗುತ್ತಿದ್ದ ಹುಂಜದಿಂದಲೇ ಮಾಲೀಕನ ಮರಣವಾಗಿದೆ. ಸದ್ಯ 1.5 ಅಡಿ ಎತ್ತರದ 2-3 ವರ್ಷದ ಹುಂಜವೊಂದು ತನ್ನ ಮಾಲೀಕನ ಸಾವಿಗೆ ಕಾರಣವಾಗಿದ್ದು ಈಗ ಜೈಲು ಸೇರಿದೆ. ಜೈಲಿನಲ್ಲಿ ಹುಂಜಕ್ಕೆ ಪೊಲೀಸರು ಊಟದ ವ್ಯವಸ್ಥೆ ಮಾಡಿಸಿದ್ದಾರೆ.
ತೆಲಂಗಾಣ: ಪ್ರಾಣಿ ಹಿಂಸೆ ಮಾಡುವುದು ಒಂದು ಅಪರಾಧ. ಹೀಗಾಗಿ ತೆಲಂಗಾಣದಲ್ಲಿ ಕೋಳಿ ಪಂದ್ಯಗಳನ್ನು ರದ್ದು ಮಾಡಲಾಗಿದೆ. ಆದ್ರೆ ಕಾನೂನಿಗೆ ವಿರುದ್ಧವಾಗಿಯೇ ಹಲವು ಕಡೆ ಕದ್ದು-ಮುಚ್ಚಿ ಈ ಕೋಳಿ ಪಂದ್ಯಗಳನ್ನು ಆಯೋಜಿಸಿ ಬೆಟ್ಟಿಂಗ್ಗಾಗಿ ಹುಂಜಗಳ ನಡುವೆ ಕಾದಾಟ ಮಾಡಿಸಲಾಗುತ್ತೆ. ಇದರಿಂದ ಒಂದಕ್ಕೊಂದು ಹುಂಜಗಳು ಜಗಳವಾಡಿ ತಮ್ಮನ್ನು ಹಿಂಸಿಸಿಕೊಳ್ಳುತ್ತವೆ. ಈ ರೀತಿ ಪದ್ಯದಲ್ಲಿ ಗೆದ್ದ ಹುಂಜದ ಮಾಲೀಕನಿಗೆ ಬೆಟ್ಟಿಂಗ್ ಹಣ ಹೋಗುತ್ತೆ. ಆದ್ರೆ ತೆಲಂಗಾಣದ ಜಗ್ತಿಯಲ್ ಜಿಲ್ಲೆಯ ಗೊಲ್ಲಪಲ್ಲಿಯಲ್ಲಿ ನಡೆದ ಘಟನೆಯೇ ಬೇರೆ. ಕೋಳಿ ಪಂದ್ಯಕ್ಕೆ ತಯಾರಾಗುತ್ತಿದ್ದ ಹುಂಜದಿಂದಲೇ ಮಾಲೀಕನ ಮರಣವಾಗಿದೆ. ಸದ್ಯ 1.5 ಅಡಿ ಎತ್ತರದ 2-3 ವರ್ಷದ ಹುಂಜವೊಂದು ತನ್ನ ಮಾಲೀಕನ ಸಾವಿಗೆ ಕಾರಣವಾಗಿದ್ದು ಈಗ ಜೈಲು ಸೇರಿದೆ. ಜೈಲಿನಲ್ಲಿ ಹುಂಜಕ್ಕೆ ಪೊಲೀಸರು ಊಟದ ವ್ಯವಸ್ಥೆ ಮಾಡಿಸಿದ್ದಾರೆ.
ಹೌದು ಈ ಕಥೆ ಅಪರೂಪದಲ್ಲೇ ಅಪರೂಪವಾಗಿದೆ. ಆದ್ರೆ ಇದು ನಿಜ. ಫೆಬ್ರವರಿ 22ರಂದು ಗೊಲ್ಲಪಲ್ಲಿಯಲ್ಲಿರುವ ದೇವಾಲಯದ ಬಳಿ ಸ್ಥಳೀಯರು ಕೋಳಿ ಪಂದ್ಯವನ್ನು ಆಯೋಜಿಸಿದ್ದರು. ಈ ವೇಳೆ 45 ವರ್ಷದ ಟಿ.ಸಾತಯ್ಯ ಎಂಬ ವ್ಯಕ್ತಿ ತನ್ನ ಹುಂಜದ ಕಾಲಿಗೆ ಚಾಕು ಕಟ್ಟಿ ಕೆಳಕ್ಕೆ ಇಳಿಸುವಾಗ ಹುಂಜ ಆತನ ಕೈಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದೆ. ಈ ವೇಳೆ ಚಾಕು ಸಾತಯ್ಯ ಗುಪ್ತಾಂಗಕ್ಕೆ ಚುಚ್ಚಿದೆ. ಈ ಪರಿಣಾಮ ತೀವ್ರ ರಕ್ತಸ್ರಾವವಾಗಿದ್ದು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಸಾತಯ್ಯ ಮೃತಪಟ್ಟಿದ್ದಾರೆ. ಟಿ.ಸಾತಯ್ಯ ಕೋಳಿ ಸಾಗಾಣಿಕೆ ಮಾಡುತ್ತಿದ್ದರು. ಹಾಗೂ ಗ್ರಾಮದಲ್ಲಿ ನಡೆಯುವ ಕೋಳಿ ಪಂದ್ಯಗಳಿಗೆ ಹುಂಜಗಳನ್ನು ಪೂರೈಸುತ್ತಿದ್ದದ್ದು ಕೂಡಾ ಇವರೇ. ಆದ್ರೆ ಮತ್ತೊಂದು ಹುಂಜದ ಜೊತೆ ಕಾಳಗಕ್ಕೆ ಸಿದ್ಧವಾಗಿದ್ದ ಹುಂಜ ತನ್ನ ಮಾಲೀಕನನ್ನೇ ಹತ್ಯೆ ಮಾಡಿದೆ.
ಚಾಕು ಹಲ್ಲೆಯಿಂದಾಗಿ ಸಾತಯ್ಯಗೆ ತೀವ್ರ ಗಾಯವಾಗಿದ್ದು ರಕ್ತಸ್ರಾವವಾಗುತ್ತಿತ್ತು. ನೋವಿನಿಂದ ಒದ್ದಾಡುತ್ತಿದ್ದ. ತಕ್ಷಣವೇ ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು ಆದ್ರೆ ಆಸ್ಪತ್ರೆಯಲ್ಲಿ ವೈದ್ಯರು ಅವನು ಮೃತಪಟ್ಟಿರುವುದಾಗಿ ಖಚಿತ ಪಡಿಸಿದ್ರು. ಸತೀಶ್ ದಾರಿ ಮಧ್ಯೆ ಮೃತಪಟ್ಟಿದ್ದಾನೆ ಎಂದು ಗೊಲ್ಲಪಲ್ಲಿ ಪೊಲೀಸ್ ಠಾಣೆ ಸಬ್ ಇಸ್ಪೆಕ್ಟರ್ ಕೆ.ಜೀವನ್ ತಿಳಿಸಿದ್ದಾರೆ. ಸದ್ಯ ಹುಂಜ ಮತ್ತು ಚಾಕುವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈಗ ಕೋಳಿಯನ್ನು ಪೊಲೀಸ್ ಠಾಣೆಯಲ್ಲಿಡಲಾಗಿದೆ. ನಾಳೆ ಅದನ್ನು ಹತ್ತಿರದ ಕೋಳಿ ಫಾರ್ಮ್ಗೆ ಕಳಿಸಲಾಗುತ್ತೆ. ಬಳಿಕ ಹಲ್ಲೆ ವೇಳೆ ತೆಗೆಯಲಾದ ಕೋಳಿಯ ಫೋಟೋಗಳನ್ನು ಕೋರ್ಟ್ಗೆ ನೀಡಲಾಗುತ್ತೆ. ನಂತರ ಕೋರ್ಟ್ ಆದೇಶ ನೀಡಿದರೆ ಕೋಳಿಯನ್ನು ಹಾಜರುಪಡಿಸಲಾಗುತ್ತೆ ಎಂದು ಜೀವನ್ ತಿಳಿಸಿದ್ದಾರೆ.
ಇದನ್ನೂ ಓದಿ: Cockfight | ಯಾದಗಿರಿಯಲ್ಲಿ ಕೋಳಿ ಪಂದ್ಯ ನಡೆಸುತ್ತಿದ್ದ 30 ಮಂದಿ ಅರೆಸ್ಟ್, 22 ಹುಂಜ ಜಪ್ತಿ