ಕೊಲ್ಕತ್ತಾ ಸ್ಪೆಷಲ್ ಟೀ.. ಒಂದು ಕಪ್ ಚಹ ಬೆಲೆ 1,000 ರೂಪಾಯಿ
ಕೊಲ್ಕತ್ತಾದ ಒಂದು ಕಪ್ ಚಹದ ಬೆಲೆ 1,000 ರೂಪಾಯಿ. ರಾಜ್ಯದ ನಾನಾ ಕಡೆಗಳಿಂದ ಜನರು ಬಂದು ಚಹಾಗ ರುಚಿ ಸವಿಯುತ್ತಾರೆ. ಹಾಗಿದ್ದಲ್ಲಿ ಕೊಲ್ಕತ್ತಾದ ಯಾವ ನಗರದಲ್ಲಿದೆ ಚಹ ಅಂಗಡಿ?
ಕೊಲ್ಕತ್ತಾ: ಚಹಾಕ್ಕೆ ಸಾಮಾನ್ಯವಾಗಿ ದರ ಎಷ್ಟಿರಬಹುದು ಎಂಬುದನ್ನು ಒಮ್ಮೆ ಯೋಚಿಸಿದರೆ, 10 ರೂಪಾಯಿಯೋ ಅಥವಾ 12 ರೂಪಾಯಿಯೋ.. ಹೆಚ್ಚೆಂದರೂ 20 ರೂಪಾಯಿಯ ಒಳಗೆ ಚಹ ಕೊಳ್ಳಬಹುದು. ಆದರೆ ಕೊಲ್ಕತ್ತಾದ ಹೋಟೆಲ್ ಒಂದರಲ್ಲಿ ಚಹ ಕೊಂಡರೆ ಒಂದು ಕಪ್ ಚಹಾಕ್ಕೆ 1,000 ರೂಪಾಯಿ ಖರ್ಚಾಗುತ್ತದೆ. ನಂಬಿಕೆ ಬರುತ್ತಿಲ್ಲ ಅಲ್ವೇ? ಆದರೂ ಇದು ಸತ್ಯ. ಹಾಗಿದ್ದಲ್ಲಿ ಈ ಚಹದ ಅಂಗಡಿ ಎಲ್ಲಿರಬಹುದು..
ಹೊಸ ಉದ್ಯಮಗಳಲ್ಲಿ ತೊಡಗಿಸಿಕೊಳ್ಳಲು ಬಯಸಿದ ಬಂಗಾಳದ ಪಾರ್ಥಾ ಗಂಗೂಲಿ ಸ್ನೇಹಿತರೊಂದಿಗೆ ಈ ಕುರಿತು ಚರ್ಚಿಸಿದ್ದಾರೆ. ಸ್ನೇಹಿತರ ಸಲಹೆಯ ಮೇರೆಗೆ ವಿವಿಧ ರೀತಿಯ ಚಹಾವನ್ನು ಮಾರಾಟ ಮಾಡಲು ಪ್ರಾರಂಭಿಸಿದ್ದಾರೆ. 2014 ರಲ್ಲಿ ಮುಕುಂದಾಪುರದ ಎರಡು ಖಾಸಗಿ ಆಸ್ಪತ್ರೆಗಳ ಬಳಿ ಚಹಾ ಅಂಗಡಿಯೊಂದನ್ನು ಇವರು ಆರಂಭಿಸಿದ್ದರು.
ಜನರಿಗೆ ಆರೋಗ್ಯಕರವಾದ ಚಹಾ ನೀಡುವುದು ನನ್ನ ಗುರಿ. ಸ್ಥಳೀಯರು ಮಾತ್ರವಲ್ಲದೇ ವಿವಿಧ ರಾಜ್ಯಗಳ ಜನರು ಇಲ್ಲಿ ತಯಾರಿಸಿದ ಚಹಾದ ರುಚಿ ಸವಿಯಲು ಬರುತ್ತಾರೆ ಎಂದು ಗಂಗೂಲಿ ಹೇಳುತ್ತಾರೆ.
ಚಹ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಗಂಗೂಲಿ ನಂಬಿದ್ದಾರೆ. ಮುಂದಿನ ದಿನಗಳಲ್ಲಿ ಹೊಸದಾದ ಪ್ರಯೋಗ ಮಾಡಲಿದ್ದು, ಚಿಕಿತ್ಸೆಯನ್ನು ಪ್ರಾರಂಭಿಸುತ್ತಿದ್ದಾರೆ. ಈ ಕುರಿತಂತೆ ಶ್ರೀಘ್ರದಲ್ಲೇ ಪ್ರಯತ್ನಗಳು ನಡೆಯುತ್ತಿದೆ. ಪಾರ್ಥಾ ಗಂಗೂಲಿಯವರ ಚಹಾದ ಅಂಗಡಿಯಲ್ಲಿ ಹಸಿರು ಚಹ, ಶುಂಠಿ ಚಹಾ, ಏಲಕ್ಕಿ ಚಹ ಮತ್ತು ಲವಂಗದಿಂದ ತಯಾರಿಸಿದ ಚಹಾ ಸಿಗುತ್ತದೆ. ಒಂದು ಕಪ್ ಚಹವನ್ನು 12 ರೂಪಾಯಿಯಿಂದ 1,000 ರೂಪಾಯಿವರೆಗೆ ಮಾರಾಟ ಮಾಡುತ್ತಾರೆ ಎಂಬುದೇ ವಿಶೇಷ. ಇವುಗಳಲ್ಲಿ ಮಸ್ಕಟೆಲ್ ಎಂಬ ಚಹಾದ ವಿಧ ವಿಶ್ವದ ಜನಪ್ರಿಯ ಚಹಾಗಳಲ್ಲಿ ಒಂದಾಗಿದೆ. ಮಸ್ಕಟೆಲ್ ಚಹ ಸವಿಯಲೆಂದೇ ನಾನಾ ಕಡೆಗಳಿಂದ ಜನರು ಬರುತ್ತಾರೆ.
ಏನಿದು ಮಸ್ಕಟೆಲ್ ಟೀ? ಭಾರತದ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯಲ್ಲಿ ಬೆಳೆದ ಚಹಾಗಳನ್ನು ಭಾರತದಲ್ಲಿ ಡಾರ್ಜಿಲಿಂಗ್ ಎಂದು ಕರೆಯಲಾಗುತ್ತದೆ. ಟಿಬೆಟಿಯನ್ ಪದವಾದ ಡೋರ್ಜೆ (ಸಿಡಿಲು ಎಂಬ ಅರ್ಥ) ಮತ್ತು ಲಿಂಗ್ ಅಂದರೆ, ಸಂಸ್ಕೃತ ಪದವಾದ ಭೂಮಿ ಎಂಬುದಾಗಿ ಹುಟ್ಟಿಕೊಂಡಿದೆ. ಚಳಿಗಾಲದ ಸಮಯದಲ್ಲಿ ಈ ಪ್ರದೇಶದಲ್ಲಿ ಕಂಡು ಬರುವ ಹಸಿರು ನೊಣಗಳು ಚಹಾ ಎಲೆಗಳನ್ನು ಹಾಗೂ ಎಲೆಗಳ ಒಳಗಿನ ರಸವನ್ನು ಹೀರುತ್ತವೆ. ಇದರ ಪರಿಣಾಮವಾಗಿ ಹಸಿರು ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಈ ಪ್ರಕ್ರಿಯೆಯಲ್ಲಿ, ಟರ್ಪಿನ್ ಎಂಬ ಪರಿಮಳದ ಪದಾರ್ಥವನ್ನು ಉತ್ಪಾದಿಸುತ್ತದೆ. ಈ ಟರ್ಪಿನ್ ಹುಳಿಬಂದ ನಂತರ ಮಸ್ಕಟೆಲ್ ಅಥವಾ ಜೇನುತುಪ್ಪದ ಪರಿಮಳವನ್ನು ಪಡೆಯುತ್ತದೆ. ಈ ರೀತಿಯಾಗಿ ಮಸ್ಕೆಟೆಲ್ ಚಹಾದ ಸಸ್ಯಗಳು ಪರಿಮಳವನ್ನು ಬೀರುವುದರಿಂದ ಮಸ್ಕಟೆಲ್ ಚಹ ಎಲ್ಲಡೆ ಪ್ರಸಿದ್ಧಿ ಪಡೆದಿದೆ.
ಇದನ್ನೂ ಓದಿ: ಮಂಡ್ಯಕ್ಕೆ ಹೋಗುವಾಗ Tea ಬ್ರೇಕ್.. ಮದ್ದೂರು ವಡೆ ಜೊತೆ ಚಹಾ ಸವಿದ ಸಿದ್ದರಾಮಯ್ಯ!
ಇದನ್ನೂ ಓದಿ: ಚಹಾ ಅಂಗಡಿ ಯುವಕ ಕಲಾವಿದ ಸಹ: ಅವಕಾಶದಿಂದ ವಂಚಿತರಾದರೂ ಚಿತ್ರಕಲೆ ಮಾತ್ರ ಬಿಟ್ಟಿಲ್ಲ!
Published On - 3:00 pm, Sun, 28 February 21