ಚಹಾ ಅಂಗಡಿ ಯುವಕ ಕಲಾವಿದ ಸಹ: ಅವಕಾಶದಿಂದ ವಂಚಿತರಾದರೂ ಚಿತ್ರಕಲೆ ಮಾತ್ರ ಬಿಟ್ಟಿಲ್ಲ!

ಪರಿಸರ ಉಳಿಸಿ ಎನ್ನುವ ಸಂದೇಶ ಸಾರುವ ಚಿತ್ರಗಳು, ದೇವಾನುದೇವತೆಗಳ ಚಿತ್ರಗಳು, ಸಮುದ್ರ ಮತ್ಸ್ಯಕನ್ಯೆ ಜೊತೆಗೆ, ಹಲವು ಸಮಾಜಮುಖಿ ಚಿತ್ರಗಳು ಕೋಲಾರದ ಚಹಾ ಅಂಗಡಿಯ ಯುವಕ ಕೇಶವಮೂರ್ತಿ ಕೈಯಿಂದ ಸರಾಗವಾಗಿ ಮೂಡುತ್ತವೆ.

ಚಹಾ ಅಂಗಡಿ ಯುವಕ ಕಲಾವಿದ ಸಹ: ಅವಕಾಶದಿಂದ ವಂಚಿತರಾದರೂ ಚಿತ್ರಕಲೆ ಮಾತ್ರ ಬಿಟ್ಟಿಲ್ಲ!
ಕೇಶಮೂರ್ತಿ
Follow us
preethi shettigar
| Updated By: ಸಾಧು ಶ್ರೀನಾಥ್​

Updated on: Feb 12, 2021 | 12:50 PM

ಕೋಲಾರ: ಜಿಲ್ಲೆಯಲ್ಲಿ ಚಹಾ ಮಾರುವ ವ್ಯಕ್ತಿಯೊಬ್ಬರ ಕೈಯಲ್ಲಿ ಕಲಾ ಶಾರದೆ ನಲಿದಾಡುತ್ತಿದ್ದು, ತನ್ನ ಚಿತ್ರಕಲೆಯ ಮೂಲಕ ಈ ಯುವಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಹೌದು ಕೋಲಾರ ನಗರದ ಕೇಶಮೂರ್ತಿ ಅಲಿಯಾಸ್ ಪುಲಿ ಸುಮಾರು 5 ವರ್ಷಗಳಿಂದ ಕೋಲಾರ ನಗರದ ಕೆಎಸ್ಆರ್​ಟಿಸಿ ಬಸ್ ನಿಲ್ದಾಣದ ಪಕ್ಕದಲ್ಲಿ ಒಂದು ಸಣ್ಣ ಟೀ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ. ಇವರು ಅದ್ಭುತ ಕಲಾವಿದನಾಗಿದ್ದು, ದಿನವಿಡೀ ಟೀ ಅಂಗಡಿಯಲ್ಲಿ ಟೀ ಮಾರಿ ಜೀವನ ಸಾಗಿಸುತ್ತಿದ್ದು, ಸಂಜೆ ಆದ ತಕ್ಷಣ ತನ್ನ ಮನೆಯಲ್ಲಿ ಪೆನ್ಸಿಲ್​, ಬಣ್ಣದ ಪೆನ್ನುಗಳನ್ನು ಹಿಡಿದು ಕುಳಿತುಬಿಡುತ್ತಾರೆ. ಕೇಶವ ಮೂರ್ತಿ ಪೆನ್ಸಿಲ್​ ಹಿಡಿದು ಬಿಡಿಸುವ ಚಿತ್ರಗಳು ಮನಮೋಹಕವಾಗಿ ಇರುತ್ತವೆ.

ಕೇಶವ ಮೂರ್ತಿ ನೂರೆಂಟು ಕಲ್ಪನೆಗಳಿಗೆ ಜೀವ ಕೊಡಬಲ್ಲ ಕಲಾವಿದರಾಗಿದ್ದು, ರಾಜ ಮಹಾರಾಜರ ಕಾಲದ ಶಿಲ್ಪಕಲೆಗಳ ಮಾದರಿ, ಪ್ರಾಣಿ ಪಕ್ಷಿಗಳ ವಿಭಿನ್ನ ಮಾದರಿ, ಅಷ್ಟೇ ಅಲ್ಲದೆ ನೀವೆಲ್ಲೂ ನೋಡಿರದ ಪರಿಸರ ಉಳಿಸಿ ಎನ್ನುವ ಸಂದೇಶ ಸಾರುವ ಚಿತ್ರಗಳು, ದೇವಾನುದೇವತೆಗಳ ಚಿತ್ರಗಳು, ಸಮುದ್ರ ಮತ್ಸ್ಯಕನ್ಯೆ ಜೊತೆಗೆ, ಹಲವು ಸಮಾಜಮುಖಿ ಚಿತ್ರಗಳು ಕೇಶವಮೂರ್ತಿ ಕೈಯಿಂದ ಸರಾಗವಾಗಿ ಮೂಡುತ್ತವೆ.

tea boy drawing

ಚಿತ್ರ ಬಿಡಿಸುತ್ತಿರುವ ಕೇಶವ ಮೂರ್ತಿ

ಕೇವಲ 10ನೇ ತರಗತಿ ಓದಿರುವ ಕೇಶವಮೂರ್ತಿ ನಿಮ್ಮೆಲ್ಲರ ಊಹೆಗೂ ಮೀರಿದ ಚಿತ್ರಗಳನ್ನು ಬಿಡಿಸುತ್ತಾರೆ. ಕೇಶಮೂರ್ತಿಗೆ ಚಿಕ್ಕಂದಿನಿಂದಲೂ ಚಿತ್ರಕಲೆಯಲ್ಲಿ ಆಸಕ್ತಿ ಹೆಚ್ಚಿದ್ದು, ಇನ್ನು ಹುಟ್ಟಿನಿಂದಲೇ ಚಿತ್ರಕಲೆಯಲ್ಲಿ ನಂಟು ಬೆಳೆಸಿಕೊಂಡು ಬಂದ ಈತ ಆರ್ಥಿಕವಾಗಿ ಸ್ಥಿತಿವಂತರಲ್ಲದ ಕಾರಣದಿಂದಾಗಿ ಎಸ್ಎಸ್ಎಲ್​ಸಿ ಯವರೆಗೆ ಮಾತ್ರ ಶಿಕ್ಷಣ ಪಡೆದಿದ್ದಾರೆ. ಕೇಶವ ಮೂರ್ತಿಯವರಿಗೆ ಚಿತ್ರಕಲಾ ಶಿಕ್ಷಕನಾಗಬೇಕೆಂಬ ಆಸೆ ಇತ್ತಾದರೂ, ಇಂಗ್ಲೀಷ್​ ಭಾಷೆಯ ಜ್ಞಾನವಿಲ್ಲ ಅಂತಲೋ ಅಥವಾ ಇನ್ನಾವುದೋ ಕಾರಣ ಹೇಳಿ ಯಾವುದೇ ಶಿಕ್ಷಣ ಸಂಸ್ಥೆಗಳು ಅವಕಾಶ ನೀಡಿಲ್ಲ. ಆದರೂ ಧೃತಿಗೆಡದ ಕೇಶವ ಮೂರ್ತಿ ತನ್ನ ಕಲೆಯಿಂದ ಇಂದಿಗೂ ತನ್ನ ಕೈಲಾದಷ್ಟು ಸಂಪಾದನೆ ಮಾಡಿಕೊಂಡು ತೃಪ್ತಿ ಕಾಣುತ್ತಿದ್ದಾರೆ.

tea boy drawing

ಕೇಶವ ಮೂರ್ತಿ ಬಿಡಿಸಿದ ಚಿತ್ರ

ತನ್ನ ಕಲೆಯನ್ನು ಹತ್ತಾರು ಮಕ್ಕಳಿಗೆ ಹೇಳಿಕೊಡಬೇಕು ಎಂಬ ಆಸೆ ಹಾಗೆ ಉಳಿದುಹೋಗಿದೆ. ಮದುವೆ ಸಮಾರಂಭ, ಟ್ಯಾಟೂಗಳು, ಅಥವಾ ಇನ್ನಿತರೆ ಸಮಾರಂಭಗಳಿಗೆ ಚಿತ್ರ ಬಿಡಿಸಿಕೊಡುವ ಮೂಲಕ ಅಷ್ಟೂ ಇಷ್ಟೋ ಸಂಪಾದನೆ ಮಾಡುತ್ತಾರೆ. ಆದರೆ ಇವರ ಕೈಯಲ್ಲಿ ಒಳ್ಳೆಯ ಕಲೆ ಇದ್ದರೂ ಒಳ್ಳೆಯ ಅವಕಾಶ, ಪ್ರೋತ್ಸಾಹ ಸಿಗಲಿಲ್ಲ ಎನ್ನುವ ಕೊರಗಂತೂ ಕೇಶವ ಮೂರ್ತಿಯವರನ್ನು ಕಾಡುತ್ತಲೇ ಇದೆ.

tea boy drawing

ಟೀ ಮಾಡುವ ಹುಡುಗನ ಕಲೆ

ಸುಂದರ ಚಿತ್ರಗಳನ್ನು ಬಿಡಿಸುವವನ ಬದುಕು ಸುಂದರವಾಗಿಲ್ಲ! ಕೇಶವ ಮೂರ್ತಿ ತನ್ನ ಕೈಯಲ್ಲಿ ಕುಂಚ ಹಿಡಿದರೆ ಮೂಡುವ ಕಲ್ಪನೆಗೆ ಸಾಟಿಯೇ ಇಲ್ಲ. ನಿಮ್ಮ ಮನಸ್ಸು ಊಹಿಸಿಕೊಂಡ ಕಲ್ಪನೆ ಕ್ಷಣಾರ್ಧದಲ್ಲೇ ನಿಮ್ಮ ಕಣ್ಣ ಮುಂದೆ ಮೂಡಿಸಬಲ್ಲ ಶಕ್ತಿ ಇವರ ಕೈಯಲ್ಲಿದೆ, ಆದರೆ ಇಂತಹ ಪ್ರತಿಭಾವಂತ ಕಲಾವಿದರೊಬ್ಬರ ಬದುಕಿನ ಕಲ್ಪನೆಯನ್ನು ಊಹಿಸಿಕೊಂಡರೆ ನಮ್ಮಲ್ಲಿ ಮೂಡುವ ಚಿತ್ರಣವೇ ಬೇರೆ. ಇದನ್ನೇ ಇರಬೇಕು ಸೃಷ್ಟಿಯ ವಿಚಿತ್ರ ಎನ್ನುವುದು. ಸುಂದರವಾಗಿ ಚಿತ್ರಗಳನ್ನು ಬಿಡಿಸಬಲ್ಲ ಕಲಾವಿದರು ತಮ್ಮ ಕೈಯಲ್ಲಿ ಅದ್ಭುತ ಕಲಾಕೃತಿಗಳನ್ನು ಬಿಡಿಸುತ್ತಾರೆ. ಆದರೆ ಇಂತಹ ಅದೆಷ್ಟೋ ಕಲಾವಿದರ ಬದುಕು ಮಾತ್ರ ನಾನಾ ಕಾರಣಗಳಿಂದಾಗಿ ಅಷ್ಟು ಸುಂದರವಾಗಿ ಸೃಷ್ಟಿಯಾಗಲಿಲ್ಲ ಎನ್ನುವುದೇ ದುರಂತ ನೋಡಿ.

tea boy drawing

ದೇವರ ಚಿತ್ರ

ಇದನ್ನೂ ಓದಿ: ಹಾವೇರಿ ಹೋರಿ ಅಭಿಮಾನಿಯ ಚಿತ್ರ ಚಮತ್ಕಾರ: ಗ್ರಾಮದ ಗೋಡೆಗಳ ಮೇಲೆ ಹೋರಿ ಚಿತ್ರಗಳ ಮೆರವಣಿಗೆ!

ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ