ಶಿವಮೊಗ್ಗ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಹಿನ್ನೆಲೆಯಲ್ಲಿ ಅನೇಕ ಕಡೆಗಳಲ್ಲಿ ದೇಣಿಗೆ ಸಂಗ್ರಹ ಪ್ರಕ್ರಿಯೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಬಡ ಮಕ್ಕಳು ದೇಣಿಗೆಗೆ ತಾವು ಕೂಡಿಟ್ಟಿದ್ದ ಹಣ ನೀಡಿದ್ದು, ಸಚಿವ ಈಶ್ವರಪ್ಪನವರ ಮನೆಗೆ ಹೋಗಿ ದೇಣಿಗೆ ಸಂಗ್ರಹಿಸಿದ್ದಾರೆ. ಈ ಕುರಿತಂತೆ ಈಶ್ವರಪ್ಪ ಮಕ್ಕಳ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬೊಮ್ಮಕಟ್ಟೆ ಬಡಾವಣೆಯ ಬಡ ಮಕ್ಕಳಾದ ಅನುಶ್ರೀ ಮತ್ತು ಛಾಯಾಶ್ರೀ ದೇಣಿಗೆ ಸಂಗ್ರಹಿಸಿದ್ದಾರೆ. ಇವರಿಬ್ಬರೂ ಸಹೋದರಿಯರು ತಾವು ಹಲವು ವರ್ಷಗಳಿಂದ ಕೂಡಿಡುತ್ತಾ ಬಂದ ಹಣವನ್ನು ಅಯೋಧ್ಯೆ ನಿರ್ಮಾಣಕ್ಕೆಂದು ನೀಡಿದ್ದಲ್ಲದೇ, ದೇಣಿಗೆ ಸಂಗ್ರಹ ಕಾರ್ಯ ಚಟುವಟಿಕೆಯಲ್ಲೂ ತೊಡಗಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಈಶ್ವರಪ್ಪನವರ ಮನೆಗೆ ತೆರಳಿದ ಮಕ್ಕಳು ದೇಣಿಗೆ ಸಂಗ್ರಹಿಸಿದ್ದಾರೆ. ಸಹೋದರಿಯರಿಬ್ಬರೂ ದೇಣಿಗೆ ಸಂಗ್ರಹಿಸುತ್ತಿದ್ದುದನ್ನು ಕಂಡ ಸಚಿವ ಈಶ್ವರಪ್ಪ ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸೈಕಲ್ಗಾಗಿ ಕೂಡಿಟ್ಟ ಹಣವನ್ನು ರಾಮಮಂದಿರಕ್ಕೆ ದೇಣಿಗೆ ನೀಡಿದ ಪುಟ್ಟ ಬಾಲಕಿ !
ಅಯೋಧ್ಯೆ ರಾಮಮಂದಿರ ನಿರ್ಮಾಣ ಹಿನ್ನೆಲೆಯಲ್ಲಿ ಹಲವು ಮುಖಂಡರು, ಆರ್.ಎಸ್.ಎಸ್ ಕಾರ್ಯಕರ್ತರು ಸೇರಿದಂತೆ ಹಲವಾರು ಗಣ್ಯರು ದೇಣಿಗೆ ಸಂಗ್ರಹಿಸುತ್ತಿದ್ದಾರೆ ಮತ್ತು ದೇಣಿಗೆ ನೀಡಿದ್ದಾರೆ. ಜೊತೆಗೆ ಬಡ ಮಕ್ಕಳೂ ಕೂಡಾ ತಾವು ಕೂಡಿಟ್ಟ ಹಣವನ್ನು ಮಂದಿರ ನಿರ್ಮಾಣಕ್ಕೆ ನೀಡಿದ್ದಾರೆ.
ರಾಮ ಮಂದಿರ ನಿರ್ಮಾಣ ಬಡ ಮಕ್ಕಳಿಂದ ದೇಣಿಗೆ ಸಂಗ್ರಹ