AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Valentine’s Day: ಪ್ರೇಮಿಗಳ ದಿನ ಎನ್ನುವುದು ವಿಕೃತಿ, ಅದಕ್ಕೆ ಬ್ರೇಕ್​ ಹಾಕಲು ಪ್ರಮೋದ್ ಮುತಾಲಿಕ್ ಆಗ್ರಹ

Valentine‘s Day celebration: ನಮ್ಮ ಸಂಪ್ರದಾಯವನ್ನು ಹಾಳು ಮಾಡಲು ವಿದೇಶಿ ಶಕ್ತಿಯ ಕೈವಾಡವಿದೆ. ನಾನಾ ‘ಡೇ'ಗಳ ಮೂಲಕ ಯುವಶಕ್ತಿ ನಾಶ ಮಾಡುವ ಷಡ್ಯಂತ್ರ ನಡೆಯುತ್ತಿದೆ. ಆದರೆ ದೇಶದಲ್ಲಿ ಶೇ.40 ರಷ್ಟು ಯುವಶಕ್ತಿ ಇದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದರು.

Valentine's Day: ಪ್ರೇಮಿಗಳ ದಿನ ಎನ್ನುವುದು ವಿಕೃತಿ, ಅದಕ್ಕೆ ಬ್ರೇಕ್​ ಹಾಕಲು ಪ್ರಮೋದ್ ಮುತಾಲಿಕ್ ಆಗ್ರಹ
ಪ್ರಮೋದ್ ಮುತಾಲಿಕ್
sandhya thejappa
| Updated By: ಸಾಧು ಶ್ರೀನಾಥ್​|

Updated on:Feb 12, 2021 | 12:22 PM

Share

ಧಾರವಾಡ: ಫೆಬ್ರವರಿ 14ರ ಪ್ರೇಮಿಗಳ ದಿನಾಚರಣೆಯನ್ನು ಸರ್ಕಾರ ನಿರ್ಬಂಧಿಸಬೇಕೆಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ. ಪ್ರೇಮಿಗಳ ದಿನ ಎನ್ನುವುದು ವಿಕೃತಿ, ಇದರ ಹಿಂದೆ ಷಡ್ಯಂತ್ರವಿದೆ. ನಮ್ಮ ದೇಶದಲ್ಲಿರುವ ಯುವ ಶಕ್ತಿಯ ನಿಷ್ಕ್ರಿಯೆಗೆ ಕುತಂತ್ರ ನಡೆಯುತ್ತಿದೆ. ಆ ಮೂಲಕ ದೇಶವನ್ನು ದುರ್ಬಲ ಮಾಡುವ ಯತ್ನವೂ ನಡೆಯುತ್ತಿದೆ. ಹೀಗಾಗಿ 14ರ ಪ್ರೇಮಿಗಳ ದಿನಾಚರಣೆಯನ್ನು ನಿರ್ಬಂಧಿಸಬೇಕೆಂದು ಸರ್ಕಾರಕ್ಕೆ ವಿಡಿಯೋ ಮೂಲಕ ಆಗ್ರಹಿಸಿದ್ದಾರೆ.

ಪ್ರೇಮಿಗಳ ದಿನಾಚರಣೆ ಹಿಂದೆ ಸೆಕ್ಸ್, ಡ್ರಗ್ಸ್ ಮಾಫಿಯಾವೂ ಇದೆ: ಪ್ರೇಮಿಗಳ ದಿನಾಚರಣೆಯನ್ನು ನಿರ್ಬಂಧಿಸಬೇಕೆಂದು ಪ್ರತಿ ವರ್ಷದಂತೆ ಆಗ್ರಹಿಸಿರುವ ಪ್ರಮೋದ್ ಮುತಾಲಿಕ್ ಈ ಬಾರಿಯು ಸರ್ಕಾರ ವ್ಯಾಲೆಂಟೈನಸ್​ ಡೇ ನಿರ್ಬಂಧಿಸಬೇಕೆಂದು ಹೇಳಿದ್ದಾರೆ. ಇದರ ಹಿಂದೆ ಸೆಕ್ಸ್, ಡ್ರಗ್ಸ್ ಮಾಫಿಯಾವೂ ಇದೆ. ನಮ್ಮ ಸಂಪ್ರದಾಯವನ್ನು ಹಾಳು ಮಾಡಲು ವಿದೇಶಿ ಶಕ್ತಿಯ ಕೈವಾಡವಿದೆ. ನಾನಾ ‘ಡೇ’ಗಳ ಮೂಲಕ ಯುವಶಕ್ತಿ ನಾಶ ಮಾಡುವ ಷಡ್ಯಂತ್ರ ನಡೆಯುತ್ತಿದೆ.

ಆದರೆ ದೇಶದಲ್ಲಿ ಶೇ.40 ರಷ್ಟು ಯುವಶಕ್ತಿ ಇದೆ. ಅದು ನಮ್ಮ ದೇಶದ ತಾಕತ್ತು. ಹೀಗಿದ್ದೂ ನಮ್ಮ ಸಂಪ್ರದಾಯವನ್ನು ಹಾಳು ಮಾಡುವ ಸಂಚು ನಡೆಯುತ್ತಿದೆ ಎಂದರು. ಜೊತೆಗೆ ಈ ವೇಳೆ ಮಾತನಾಡಿದ ಪ್ರಮೋದ್ ಮುತಾಲಿಕ್ ಎಲ್ಲರೂ ತಂದೆ ಮತ್ತು ತಾಯಿಯನ್ನು ಪೂಜೆ ಮಾಡೋಣ ಎಂದು ವಿಡಿಯೋದಲ್ಲಿ ಸಲಹೆಯನ್ನು ನೀಡಿದರು.

ಇದನ್ನೂ ಓದಿ: Hug Day: ಪರಿಶುದ್ಧ ಪ್ರೇಮದಲ್ಲಿ ನವಿರಾದ ಅಪ್ಪುಗೆಗೂ ಇದೆ ವಿಶೇಷ ಸ್ಥಾನ!

Published On - 12:20 pm, Fri, 12 February 21