Assam Assembly Elections 2021: ಅಸ್ಸಾಂ ಉಳಿಸಿ ಅಭಿಯಾನದ ವಿಜೇತರಿಗೆ ಕಾಂಗ್ರೆಸ್​ನಿಂದ ಐಫೋನ್, ನಗದು ಬಹುಮಾನ

Priyanka Gandhi Vadra Campaign: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮಾರ್ಚ್ 1ರಂದು ಅಸ್ಸಾಂನಲ್ಲಿ ಚುನಾವಣಾ ಪ್ರಚಾರ ಆರಂಭಿಸಲಿದ್ದಾರೆ.

Assam Assembly Elections 2021: ಅಸ್ಸಾಂ ಉಳಿಸಿ ಅಭಿಯಾನದ ವಿಜೇತರಿಗೆ ಕಾಂಗ್ರೆಸ್​ನಿಂದ  ಐಫೋನ್, ನಗದು ಬಹುಮಾನ
ಪ್ರಿಯಾಂಕಾ ಗಾಂಧಿ
Follow us
|

Updated on: Feb 28, 2021 | 3:44 PM

ಗುವಾಹಟಿ: ಅಸ್ಸಾಂನಲ್ಲಿ ಬಿಜೆಪಿ ಸರ್ಕಾರವನ್ನು ಇಳಿಸಿ ಅಧಿಕಾರಕ್ಕೇರಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್ ಪಕ್ಷ ಅಸ್ಸಾಂ ಬಚಾವೋ (ಅಸ್ಸಾಂ ಉಳಿಸಿ) ಎಂಬ ಅಭಿಯಾನ ನಡೆಸಿತ್ತು. ರಾಜ್ಯದಲ್ಲಿನ ಸಮಸ್ಯೆಗಳು, ಅಲ್ಲಿನ ಜನರ ಅನುಭವಿಸುತ್ತಿರುವ ಕಷ್ಟಗಳ ಬಗ್ಗೆ ಎರಡು ನಿಮಿಷದ ವಿಡಿಯೊ ಮಾಡಿ #AssamBachao ಎಂಬ ಹ್ಯಾಷ್ ಟ್ಯಾಗ್ ಬಳಸವಂತೆ ಕಾಂಗ್ರೆಸ್, ಅಲ್ಲಿನ ಜನರಿಗೆ ಆಹ್ವಾನ ನೀಡಿತ್ತು. ಈ ಸ್ಪರ್ಧೆಯ ವಿಜೇತರಿಗೆ ಕಾಂಗ್ರೆಸ್ ಐಫೋನ್ ಮತ್ತು ನಗದು ಬಹುಮಾನ ನೀಡಿದೆ. ಶನಿವಾರ ಗುವಾಹಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಸ್ಸಾಂ ಪ್ರದೇಶ ಕಾಂಗ್ರೆಸ್ ಸಮಿತಿ (ಎಪಿಸಿಸಿ) ವಿಜೇತರಿಗೆ ಬಹುಮಾನ ವಿತರಿಸಿದೆ. ಸಾಮಾನ್ಯ ಜನರಿಗೆ ಏನು ಸಮಸ್ಯೆ ಇದೆ ಎಂಬುದನ್ನು ಆಲಿಸಿ ಆನಂತರ ಅದಕ್ಕೆ ಪರಿಹಾರ ಕೈ ಗೊಳ್ಳುತ್ತೇವೆ ಎಂದು ಕಾಂಗ್ರೆಸ್ ಹೇಳಿದೆ.

ಏನಿದು ಅಭಿಯಾನ? ಚುನಾವಣೆಗೆ ಸಿದ್ಧವಾಗಿರುವ ಅಸ್ಸಾಂನಲ್ಲಿ ವಿನೂತನ ಅಭಿಯಾನ ಆರಂಭಿಸಿರುವ ಕಾಂಗ್ರೆಸ್, ಅಲ್ಲಿನ ಜನರ ಕಷ್ಟಗಳನ್ನು ಆಲಿಸಲು ಮುಂದಾಗಿದೆ. ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಎನ್​ಜಿಒ ಮತ್ತಿತರ ಸಂಘ ಸಂಸ್ಥೆಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಆಲಿಸಿದ ನಂತರ ಚುನಾವಣಾ ಪ್ರಣಾಳಿಕೆ ಸಿದ್ಧಪಡಿಸಿದ್ದಾರೆ. ಅಸ್ಸಾಂನಲ್ಲಿ 3 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್ 27ಕ್ಕೆ ಮೊದಲ ಹಂತದ ಮತದಾನ ನಡೆಯಲಿದೆ.

ಮಾರ್ಚ್ 1ಕ್ಕೆ ಪ್ರಚಾರ ಆರಂಭಿಸಲಿದ್ದಾರೆ ಪ್ರಿಯಾಂಕಾ ಗಾಂಧಿ ವಾದ್ರಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮಾರ್ಚ್ 1ರಂದು ಅಸ್ಸಾಂನಲ್ಲಿ ಚುನಾವಣಾ ಪ್ರಚಾರ ಆರಂಭಿಸಲಿದ್ದಾರೆ. ಚುನಾವಣಾ ಪ್ರಚಾರ ಆರಂಭಿಸುವ ಮುನ್ನ ಗುವಾಹಟಿಯಲ್ಲಿರುವ ಪ್ರಸಿದ್ಧ ತೀರ್ಥಸ್ಥಳವಾದ ಕಾಮಾಖ್ಯಾ ದೇಗುಲಕ್ಕೆ ಭೇಟಿ ನೀಡಲಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ತೇಜ್​ಪುರ್‌ ಸೇರಿದಂತೆ ಉತ್ತರ ಅಸ್ಸಾಂನಲ್ಲಿ ಮಾರ್ಚ್ 2ರಂದು ಪ್ರಿಯಾಂಕಾ ಪ್ರಚಾರ ನಡೆಸಲಿದ್ದು, ಎರಡು ದಿನ ಅಸ್ಸಾಂನಲ್ಲಿರಲಿದ್ದಾರೆ.

ಪ್ರಿಯಾಂಕಾ ಸಹೋದರ ರಾಹುಲ್ ಗಾಂಧಿ ತಮಿಳುನಾಡು, ಕೇರಳ, ಪುದುಚೇರಿಯಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಫೆಬ್ರವರಿ ತಿಂಗಳ ಆರಂಭದಲ್ಲಿ ಅಸ್ಸಾಂಗೆ ಭೇಟಿ ನೀಡಿದ್ದ ರಾಹುಲ್, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಈ ಬಾರಿ ಚುನಾವಣೆಯ ಅಜೆಂಡಾ ಆಗಲಿದೆ ಎಂದಿದ್ದರು. ಸಿಎಎ ವಿರೋಧ ಘೋಷಣೆ ಇರುವ ಸ್ಕಾರ್ಫ್ ಧರಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಾಹುಲ್, ನಾನು ಧರಿಸಿರುವ ಸ್ಕಾರ್ಫ್ ನಲ್ಲಿ ಸಿಎಎ ಎಂಬ ಬರಹದ ಮೇಲೆ ಕ್ರಾಸ್ ಹಾಕಲಾಗಿದೆ. ಇದರರ್ಥ ಏನೇ ಆದರೂ ಸಿಎಎ ಜಾರಿಗೆ ತರಲು ಬಿಡುವುದಿಲ್ಲ ಎಂದು ಹೇಳಿದ್ದರು.

ಅಸ್ಸಾಂ ಅರಣ್ಯಗಳನ್ನು ಉಳಿಸಲು ಮೋದಿ ಕರೆ ಭಾನುವಾರ ಮನ್ ಕೀ ಬಾತ್ ನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅಸ್ಸಾಂನಲ್ಲಿನ ಅರಣ್ಯ ರಕ್ಷಣೆಗೆ ಕರೆ ನೀಡಿದ್ದಾರೆ. ಇಲ್ಲಿನ ಕಾಝಿರಂಗಾ ರಾಷ್ಟ್ರೀಯ ಉದ್ಯಾನ ಮತ್ತು ಹುಲಿ ಸಂರಕ್ಷಣೆ ಪ್ರಾಧಿಕಾರವು ವಾರ್ಷಿಕ ಗಣತಿ ಮಾಡುತ್ತದೆ. ಕಳೆದ ಮೂರು ವಾರಗಳ ಹಿಂದೆ ಇದೇ ರೀತಿಯ ಸಮೀಕ್ಷೆ ನಡೆಸಿತ್ತು. ಸಮೀಕ್ಷೆಯ ಪ್ರಕಾರ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ನೀರು ಹಕ್ಕಿಗಳ (ಜಲಪಕ್ಷಿ) ಸಂಖ್ಯೆ ಶೇಕಡಾ 175ರಷ್ಚು ಏರಿಕೆಯಾಗಿದೆ. ಒಟ್ಟು 112 ಹಕ್ಕಿಯ ಪ್ರಬೇಧಗಳು ಇಲ್ಲಿ ಕಂಡು ಬಂದಿದೆ ಎಂದಿದ್ದಾರೆ.ಈ ಪೈಕಿ 58 ಪ್ರಬೇಧದ ಪಕ್ಷಿಗಳು ಚಳಿಗಾಲದಲ್ಲಿ ಯುರೋಪ್, ಮಧ್ಯ ಏಷ್ಯಾ ಮತ್ತು ಪೂರ್ವ ಏಷ್ಯಾದಿಂದ ವಲಸೆ ಬಂದವುಗಳಾಗಿವೆ. ಇಲ್ಲಿ ಜಲ ಸಂರಕ್ಷಣೆ ನಡೆಯುತ್ತಿದ್ದು ಮಾನವ ಹಸ್ತಕ್ಷೇಪ ಕಡಿಮೆ ಇದೆ. ಕೆಲವೊಮ್ಮೆ ಮಾನವನ ಹಸ್ತಕ್ಷೇಪ ಕೂಡಾ ಮುಖ್ಯವಾಗುತ್ತದೆ ಎಂದು ಹೇಳಿದ ಮೋದಿ ಪದ್ಮಶ್ರೀ ಪುರಸ್ಕೃತ ಜಯದೇವ್ ಪಯೇಂಗಾ ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ .

 ಇದನ್ನೂ ಓದಿ: ಅಸ್ಸಾಂ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿ ಮೈತ್ರಿ ತೊರೆದು ಕಾಂಗ್ರೆಸ್​ ಜತೆ ಕೈಜೋಡಿಸಿದ ಬಿಪಿಎಫ್

ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ