Cockfight: ಯಾದಗಿರಿಯಲ್ಲಿ ಕೋಳಿ ಪಂದ್ಯ ನಡೆಸುತ್ತಿದ್ದ 30 ಮಂದಿ ಅರೆಸ್ಟ್, 22 ಹುಂಜ ಜಪ್ತಿ
ಸುರಪುರ ಡಿವೈಎಸ್ಪಿ ವೆಂಕಟೇಶ್ ಉಗಿಬಂಡಿ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು ಜಿಲ್ಲೆಯ ಹುಣಸಗಿ ತಾಲೂಕಿನ ರಾಯಗೇರಿ ಗ್ರಾಮದಲ್ಲಿ ಕೋಳಿ ಪಂದ್ಯ ಆಡುತ್ತಿದ್ದ 30 ಜನರನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. 22 ಹುಂಜ, 15ಕ್ಕೂ ಹೆಚ್ಚು ಮೊಬೈಲ್, ₹32 ಸಾವಿರ ಜಪ್ತಿ ಮಾಡಲಾಗಿದೆ.
ಯಾದಗಿರಿ: ಕೋಳಿ ಪಂದ್ಯ ನಡೆಯುತ್ತಿದ್ದ ಅಡ್ಡೆ ಮೇಲೆ ಪೊಲೀಸರ ದಾಳಿ ನಡೆದಿದೆ. ಸುರಪುರ ಡಿವೈಎಸ್ಪಿ ವೆಂಕಟೇಶ್ ಉಗಿಬಂಡಿ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು ಜಿಲ್ಲೆಯ ಹುಣಸಗಿ ತಾಲೂಕಿನ ರಾಯಗೇರಿ ಗ್ರಾಮದಲ್ಲಿ ಕೋಳಿ ಪಂದ್ಯ ಆಡುತ್ತಿದ್ದ 30 ಜನರನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. 22 ಹುಂಜ, 15ಕ್ಕೂ ಹೆಚ್ಚು ಮೊಬೈಲ್, ₹32 ಸಾವಿರ ಜಪ್ತಿ ಮಾಡಲಾಗಿದೆ. ಕೊಡೆಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಷೇಧವಿದ್ದರೂ ಹಣಕ್ಕಾಗಿ ಕೋಳಿ ಬೆಟ್ಟಿಂಗ್ ಇನ್ನು ಈ ಹಿಂದೆ ಇದೇ ರೀತಿ ಯಾದಗಿರಿಯ ಕರ್ನಾಳ್ ಗ್ರಾಮದ ಬಳಿ ಕೋಳಿ ಪಂದ್ಯ ನಡೆಸುತ್ತಿದ್ದ ಜೂಜು ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿ ಸುಮಾರು 10 ಮಂದಿಯನ್ನು ಬಂಧಿಸಿದ್ದರು. ಅಲ್ಲದೆ ಅವರ ಜೊತೆ ಕೋಳಿಗಳನ್ನೂ ಸಹ ವಶಕ್ಕೆ ಪಡೆಯಲಾಗಿತ್ತು. ನಿಷೇಧವಿದ್ದರೂ ಹಣಕ್ಕೆ ಬೆಟ್ಟಿಂಗ್ ಕಟ್ಟಿ ಕೋಳಿಗಳನ್ನು ಬಿಟ್ಟು ಕೋಳಿ ಕಾದಾಟ ನಡೆಸುತ್ತಿದ್ದರು. ಇದರಿಂದ ಗೆದ್ದ ಕೋಳಿ ಮಾಲೀಕ ಎಲ್ಲಾ ಹಣವನ್ನು ತನ್ನದಾಗಿಸಿಕೊಳ್ಳುತ್ತಿದ್ದ. ಈ ರೀತಿ ಸಾಕು ಪ್ರಾಣಿಗಳನ್ನು ಬಳಸಿ ಬೆಟ್ಟಿಂಗ್ ಆಡಲಾಗುತ್ತೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ..
ಯಾದಗಿರಿ: ಗ್ರಾಮದಲ್ಲಿ ಕೋಳಿ ಪಂದ್ಯ – 10 ಜನರ ಬಂಧನ, ಕೋಳಿಗಳೂ ಪೊಲೀಸ್ ವಶಕ್ಕೆ
ಇಸ್ಪೀಟ್ ಅಡ್ಡೆಯ ಮೇಲೆ ದಾಳಿ ನಡೆಸಿದ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಯಮನ ಪಾದ ಸೇರಿದ್ರು ಬೆಳಗಾವಿಯಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಇಬ್ಬರು ವಿಧಿಯಾಟಕ್ಕೆ ತುತ್ತಾದ ಘಟನೆ ಸಹ ನಡೆದಿತ್ತು. ಫೆ. 8 ರಂದು ಇಸ್ಪೀಟ್ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳುವ ಧಾವಂತದಲ್ಲಿ 6 ಯುವಕರು ಮಲಪ್ರಭಾ ನದಿಗೆ ಹಾರಿದ್ದರು. ಅದೃಷ್ಟವಶಾತ್ 6 ಜನರ ಪೈಕಿ ನಾಲ್ಕು ಮಂದಿ ಪ್ರಾಣಾಪಾಯದಿಂದ ಪಾರಾದರು. ಆದ್ರೆ ಈ ಪೈಕಿ ಇಬ್ಬರು ನಾಪತ್ತೆಯಾಗಿ ನೀರುಪಾಲು ಆಗಿದ್ದರು. ಕೇವಲ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋದ ಇಬ್ಬರು ಯುವಕರು ತಮ್ಮ ಪ್ರಾಣವನ್ನೇ ಕಳೆದುಕೊಂಡಂತ ಘಟನೆ ನಡೆದಿತ್ತು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ..
Published On - 1:03 pm, Tue, 23 February 21