ಯಾದಗಿರಿ: ಗ್ರಾಮದಲ್ಲಿ ಕೋಳಿ ಪಂದ್ಯ – 10 ಜನರ ಬಂಧನ, ಕೋಳಿಗಳೂ ಪೊಲೀಸ್​ ವಶಕ್ಕೆ

cockfight: ನಿಷೇಧವಿದ್ದರೂ ಬೆಟ್ಟಿಂಗ್ ಕಟ್ಟುವ ಮೂಲಕ ಕೋಳಿ ಪಂದ್ಯವನ್ನು ನಡೆಸಲಾಗುತ್ತಿತ್ತು. ಸುರಪುರ ಪಿಐ ಎಸ್.ಎಂ.ಪಾಟೀಲ್ ನೇತೃತ್ವದ ತಂಡದಿಂದ ಜೂಜು ಅಡ್ಡೆ ಮೇಲೆ ದಾಳಿ ನಡೆದಿದೆ.

ಯಾದಗಿರಿ: ಗ್ರಾಮದಲ್ಲಿ ಕೋಳಿ ಪಂದ್ಯ - 10 ಜನರ ಬಂಧನ, ಕೋಳಿಗಳೂ ಪೊಲೀಸ್​ ವಶಕ್ಕೆ
ಕೋಳಿಗಳು ಮತ್ತು ಬಂಧಿತರು
Follow us
sandhya thejappa
| Updated By: ಸಾಧು ಶ್ರೀನಾಥ್​

Updated on: Feb 11, 2021 | 3:38 PM

ಯಾದಗಿರಿ: ಜಿಲ್ಲೆಯ ಕರ್ನಾಳ್ ಗ್ರಾಮದ ಬಳಿ ಕೋಳಿ ಪಂದ್ಯ ನಡೆಸುತ್ತಿದ್ದ ಜೂಜು ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿ ಸುಮಾರು 10 ಜನರನ್ನು ಬಂಧಿಸಿದ್ದಾರೆ. ಹಾಗೆಯೇ ಕೋಳಿಗಳನ್ನು ವಶಕ್ಕೆ ಪಡೆದಿದ್ದಾರೆ.

ನಿಶೇಧವಿದ್ದರೂ ಬೆಟ್ಟಿಂಗ್ ಕಟ್ಟುವ ಮೂಲಕ ಕೋಳಿ ಪಂದ್ಯವನ್ನು ನಡೆಸಲಾಗುತ್ತಿತ್ತು. ಸದ್ಯ ಸುರಪುರ ಪಿಐ ಎಸ್.ಎಂ.ಪಾಟೀಲ್ ನೇತೃತ್ವದ ತಂಡದಿಂದ ದಾಳಿ ನಡೆದಿದ್ದು, ಕೋಳಿಗಳ ಸಮೇತ ಕೋಳಿ ಪಂದ್ಯ ನಡೆಸುತ್ತಿದ್ದ ಜನರನ್ನು ಬಂಧಿಸಿದ್ದಾರೆ. ಈ ಪ್ರಕರಣ ಸುರಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಪೊಲೀಸರ ವಶದಲ್ಲಿರುವ ಕೋಳಿಗಳು ಮತ್ತು ಜೂಜು ನಡೆಸಿದವರು.

ಇದನ್ನೂ ಓದಿ: Gamblers jump into Malaprabha river ಜೂಜಾಡುತ್ತಿದ್ದ ವೇಳೆ ಪೊಲೀಸ್ ದಾಳಿಗೆ ಹೆದರಿ ಮಲಪ್ರಭಾ ನದಿಗೆ ಹಾರಿದ ಇಬ್ಬರು