IND vs ENG: ಗಂಭೀರವಾಗಿ ಗಾಯಗೊಂಡ ರಿಷಭ್ ಪಂತ್! ಕಾಲಿನಿಂದ ಹರಿಯಿತು ರಕ್ತ; ವಿಡಿಯೋ ನೋಡಿ
Rishabh Pant Injured: ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ಟೆಸ್ಟ್ ಪಂದ್ಯದಲ್ಲಿ ರಿಷಭ್ ಪಂತ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಕ್ರಿಸ್ ವೋಕ್ಸ್ ಎಸೆದ ಚೆಂಡು ಪಂತ್ ಅವರ ಕಾಲಿಗೆ ಬಡಿದು ಗಾಯವಾಗಿದೆ. ರಕ್ತಸ್ರಾವವಾಗುತ್ತಿದ್ದರಿಂದ ಅವರು ಬ್ಯಾಟಿಂಗ್ ನಿಲ್ಲಿಸಿ ಆಸ್ಪತ್ರೆಗೆ ಹೋಗಿದ್ದಾರೆ. ಈ ಘಟನೆಯು ಭಾರತ ತಂಡಕ್ಕೆ ದೊಡ್ಡ ಆಘಾತವಾಗಿದೆ. ಪಂತ್ ಅವರ ಗಾಯದ ತೀವ್ರತೆಯ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.
ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ವೇಳೆ ಭಾರತ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ಭಾರತ ತಂಡದ ಸ್ಟಾರ್ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಗಂಭೀರವಾಗಿ ಗಾಯಗೊಂಡಿದ್ದು ಅರ್ಧಕ್ಕೆ ಬ್ಯಾಟಿಂಗ್ ನಿಲ್ಲಿಸಿ ಕ್ರೀಸ್ ತೊರೆದಿದ್ದಾರೆ. ಈ ಘಟನೆ ಭಾರತೀಯ ಇನ್ನಿಂಗ್ಸ್‌ನ 68 ನೇ ಓವರ್‌ನಲ್ಲಿ ನಡೆದಿದ್ದು, ಕ್ರಿಸ್ ವೋಕ್ಸ್ ಎಸೆತವನ್ನು ರಿವರ್ಸ್-ಸ್ವೀಪ್ ಮಾಡುವ ಯತ್ನದಲ್ಲಿ ಚೆಂಡು ಪಂತ್ ಅವರ ಬಾಲಗಾಲಿಗೆ ಪಡೆದಿದೆ. ಚೆಂಡಿನ ವೇಗ ಎಷ್ಟಿತ್ತೆಂದರೆ ಪಂತ್ ಅವರ ಕಾಲಿಗೆ ಗಾಯವಾಗಿದ್ದು, ಅದರಿಂದ ರಕ್ತ ಸುರಿಯಲಾರಂಭಿಸಿದೆ. ಇದೀಗ ಅದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ರಿಷಭ್ ಪಂತ್ ಗಾಯಗೊಂಡಿದ್ದು ಹೇಗೆ?
ಭಾರತದ ಇನ್ನಿಂಗ್ಸ್‌ನ 68 ನೇ ಓವರ್‌ನಲ್ಲಿ, ಕ್ರಿಸ್ ವೋಕ್ಸ್ ಎಸೆದ ವೇಗದ ಯಾರ್ಕರ್ ಚೆಂಡು ಪಂತ್ ಅವರನ್ನು ಗಾಯಗೊಳ್ಳುವಂತೆ ಮಾಡಿದೆ. ಈ ಚೆಂಡಿನಲ್ಲಿ ಪಂತ್ ರಿವರ್ಸ್-ಸ್ವೀಪ್ ಆಡಲು ಪ್ರಯತ್ನಿಸಿದರು, ಆದರೆ ಚೆಂಡು ನೇರವಾಗಿ ಅವರ ಶೂಗೆ ಬಡಿಯಿತು. ಆ ಬಳಿಕ ಪಂತ್ ನೋವಿನಿಂದ ನರಳುತ್ತಿರುವುದು ಕಂಡುಬಂದಿತು. ಕೂಡಲೇ ತಂಡದ ಫಿಸಿಯೋ ಕ್ರಿಸ್ಗೆ ಬಂದು ಪಂತ್ ಅವರನ್ನು ಪರೀಕ್ಷಿಸಿದಾಗ ಅವರ ಪಾದದಿಂದ ರಕ್ತಸ್ರಾವವಾಗುತ್ತಿರುವುದು ಕಂಡುಬಂದಿತು. ನೋವು ಮತ್ತು ಗಾಯದ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು ಪಂತ್ ಅರ್ಧಕ್ಕೆ ಬ್ಯಾಟಿಂಗ್ ನಿಲ್ಲಿಸಿ ಮೈದಾನದ ಆಂಬ್ಯುಲೆನ್ಸ್‌ನಲ್ಲಿ ಹೊರಗೆ ಕರೆದುಕೊಂಡು ಹೋಗಲಾಯಿತು.

