AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

MS Dhoni: ಸತತ ಸೋಲಿನಿಂದ ಬೇಸರಗೊಂಡ ಧೋನಿ: ಪೋಸ್ಟ್ ಮ್ಯಾಚ್​ನಲ್ಲಿ ಏನು ಹೇಳಿದ್ರು ನೋಡಿ

MS Dhoni Post Match presentation: ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಹೀನಾಯ ಸೋಲಿನಿಂದ ಸಿಎಸ್‌ಕೆ ನಾಯಕ ಎಂಎಸ್ ಧೋನಿ ತುಂಬಾ ನಿರಾಶೆಗೊಂಡಂತೆ ಕಂಡುಬಂದರು. ಯಾಕೆಂದರೆ ಧೋನಿ ಕೂಡ ತಮ್ಮ ತಂಡಕ್ಕೆ ಹೆಚ್ಚಿನ ಕೊಡುಗೆ ಒದಗಿಸಲು ಸಾಧ್ಯವಾಗಿಲ್ಲ. ಇದರಿಂದಾಗಿ ತಂಡವು ಸಾಕಷ್ಟು ನಷ್ಟ ಅನುಭವಿಸಿದೆ. ಸದ್ಯ ಸಿಎಸ್ಕೆ ಬಹುತೇಕ ಐಪಿಎಲ್ 2025 ರಿಂದ ಹೊರಬಿದ್ದಿದೆ.

MS Dhoni: ಸತತ ಸೋಲಿನಿಂದ ಬೇಸರಗೊಂಡ ಧೋನಿ: ಪೋಸ್ಟ್ ಮ್ಯಾಚ್​ನಲ್ಲಿ ಏನು ಹೇಳಿದ್ರು ನೋಡಿ
Ms Dhoni Post Match Presentation (1)
Vinay Bhat
|

Updated on: Apr 26, 2025 | 9:03 AM

Share

ಬೆಂಗಳೂರು (ಏ. 26): ಐಪಿಎಲ್ 2025 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡದ ಕಳಪೆ ಪ್ರದರ್ಶನ ಮುಂದೆವರೆದಿದೆ. ಈ ಋತುವಿನಲ್ಲಿ ಸಿಎಸ್​ಕೆ ತನ್ನ 9 ನೇ ಪಂದ್ಯದಲ್ಲಿ ಹೀನಾಯ ಸೋಲನ್ನು ಎದುರಿಸಬೇಕಾಯಿತು. ನಿನ್ನೆಯ ಪಂದ್ಯದಲ್ಲಿ ಸಿಎಸ್‌ಕೆ ತಂಡವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕೂಡ 5 ವಿಕೆಟ್‌ಗಳಿಂದ ಸೋತಿತು. ಈ ಸೋಲಿನಿಂದಾಗಿ ತಂಡವು ಪ್ಲೇಆಫ್ ರೇಸ್‌ನಿಂದ ಬಹುತೇಕ ಹೊರಬಿದ್ದಿದೆ. ಹೀನಾಯ ಸೋಲಿನಿಂದ ಸಿಎಸ್‌ಕೆ ನಾಯಕ ಎಂಎಸ್ ಧೋನಿ ತುಂಬಾ ನಿರಾಶೆಗೊಂಡಂತೆ ಕಂಡುಬಂದರು. ಯಾಕೆಂದರೆ ಧೋನಿ ಕೂಡ ತಮ್ಮ ತಂಡಕ್ಕೆ ಹೆಚ್ಚಿನ ಕೊಡುಗೆ ಒದಗಿಸಲು ಸಾಧ್ಯವಾಗಿಲ್ಲ. ಇದರಿಂದಾಗಿ ತಂಡವು ಸಾಕಷ್ಟು ನಷ್ಟ ಅನುಭವಿಸಿದೆ. ಸಿಎಸ್‌ಕೆ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಏತನ್ಮಧ್ಯೆ, ಸನ್‌ರೈಸರ್ಸ್ ವಿರುದ್ಧದ ಸೋಲಿನ ನಂತರ ಧೋನಿ ಏನು ಹೇಳಿದ್ದಾರೆ ನೋಡಿ.

ಸೋಲಿನ ನಂತರ ಧೋನಿ ಹೇಳಿದ್ದೇನು?:

ತಂಡದ ಸೋಲಿನ ನಂತರ, ನಾಯಕ ಧೋನಿ ಬೇಸರ ವ್ಯಕ್ತಪಡಿಸಿ, ತಮ್ಮ ತಂಡ ನಿರಂತರವಾಗಿ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಲೇ ಇತ್ತು, ಇದರಿಂದಾಗಿ ಪಂದ್ಯದ ಮೇಲೆ ಹಿಡಿತ ಸಾಧಿಸುವುದು ಕಷ್ಟವಾಯಿತು ಎಂದು ಹೇಳಿದರು. ಮೊದಲ ಇನ್ನಿಂಗ್ಸ್ ಪಿಚ್ ಉತ್ತಮವಾಗಿದೆ ಎಂದು ನಾಯಕ ಬಣ್ಣಿಸಿದರೂ, ಚೆಂಡು ಹೆಚ್ಚು ತಿರುವು ಪಡೆಯುತ್ತಿರಲಿಲ್ಲವಾದ್ದರಿಂದ ಆ ಪಿಚ್‌ನಲ್ಲಿ 155 ರನ್‌ಗಳ ಸ್ಕೋರ್ ಸಮರ್ಥನೀಯವಲ್ಲ ಎಂದು ಒಪ್ಪಿಕೊಂಡರು. ‘ಹೌದು, 8 ರಿಂದ 10 ಓವರ್‌ಗಳ ನಂತರ ಪಿಚ್ ವೇಗದ ಬೌಲರ್‌ಗಳಿಗೆ ಸ್ವಲ್ಪ ಭಿನ್ನವಾಯಿತು, ಆದರೆ ನಾವು ನಮ್ಮ ಖಾತೆಗೆ ಇನ್ನೂ ಕೆಲವು ರನ್‌ಗಳನ್ನು ಸೇರಿಸಬೇಕಾಗಿತ್ತು’ ಎಂದು ಹೇಳಿದ್ದಾರೆ.

ತಂಡಕ್ಕೆ 15-20 ರನ್‌ಗಳ ಕೊರತೆ ಇತ್ತು:

“ಎರಡನೇ ಇನ್ನಿಂಗ್ಸ್‌ನಲ್ಲಿ ಸ್ಪಿನ್ನರ್‌ಗಳಿಗೆ ಸ್ವಲ್ಪ ಸಹಾಯ ಸಿಕ್ಕಿತು ಮತ್ತು ಅವರು ಉತ್ತಮ ಲೈನ್ ಮತ್ತು ಲೆಂತ್‌ನಲ್ಲಿ ಬೌಲಿಂಗ್ ಮಾಡಿದರು, ಆದರೆ ತಂಡವು ಸುಮಾರು 15-20 ರನ್‌ ಕಡಿಮೆ ಗಳಿಸಿತು ” ಎಂದು ಧೋನಿ ಹೇಳಿದರು. ಬ್ರೆವಿಸ್ ಬ್ಯಾಟಿಂಗ್ ಅನ್ನು ಶ್ಲಾಘಿಸಿದ ನಾಯಕ, ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಇದೇ ರೀತಿಯ ಬ್ಯಾಟ್ಸ್‌ಮನ್ ಅಗತ್ಯವಿದೆ, ವಿಶೇಷವಾಗಿ ಸ್ಪಿನ್ನರ್‌ಗಳು ದಾಳಿಗೆ ಇಳಿದಾಗ ಎಂದು ಹೇಳಿದರು. ನಾವು ಬ್ಯಾಟಿಂಗ್ ಮೂಲಕ ಅಥವಾ ದೊಡ್ಡ ಹೊಡೆತಗಳನ್ನು ಹೊಡೆಯುವ ಮೂಲಕ ಆ ಒತ್ತಡವನ್ನು ನಿವಾರಿಸಿಕೊಳ್ಳಬೇಕು. ಇಲ್ಲಿಯೇ ನಾವು ಹಿಂದುಳಿದಿದ್ದೇವೆ ಮತ್ತು ಸ್ಪಿನ್ ವಿರುದ್ಧ ತ್ವರಿತ ರನ್ ಗಳಿಸುವಲ್ಲಿ ವಿಫಲರಾಗಿದ್ದೇವೆ. ಅಂತಹ ಪಂದ್ಯಾವಳಿಗಳಲ್ಲಿ ಕೆಲವು ನ್ಯೂನ್ಯತೆಗಳನ್ನು ಸುಧಾರಿಸುವ ಮೂಲಕ ತಂಡವನ್ನು ಬಲಪಡಿಸಬೇಕು ಎಂದು ಅವರು ಹೇಳಿದರು.

ಇದನ್ನೂ ಓದಿ
Image
154ಕ್ಕೆ ಪತನಗೊಂಡ ಸಿಎಸ್​ಕೆ: ಐಪಿಎಲ್​ನಲ್ಲಿ ಇತಿಹಾಸ ಸೃಷ್ಟಿಸಿದ ಶಮಿ
Image
ಆರ್‌ಸಿಬಿ ವಿರುದ್ಧ ಸೋತ ದುಃಖದಲ್ಲಿ ಎಣ್ಣೆ ಅಂಗಡಿಗೆ ಹೋದ ರಾಜಸ್ಥಾನದ CEO
Image
ಟಾಸ್ ಗೆದ್ದ ಸಿಎಸ್​ಕೆ: ಧೋನಿ ತಂಡದಲ್ಲಿ ಮಹತ್ವದ ಬದಲಾವಣೆ
Image
ಕೆಕೆಆರ್ ತಂಡಕ್ಕೆ ಕಾಶ್ಮೀರಿ ಘಾತುಕ ವೇಗಿಯ ಆಗಮನ

RCB vs RR: ಆರ್‌ಸಿಬಿ ವಿರುದ್ಧ ಸೋತ ದುಃಖದಲ್ಲಿ ಎಣ್ಣೆ ಅಂಗಡಿಗೆ ಹೋದ ರಾಜಸ್ಥಾನದ ಸಿಇಒ: ವೈರಲ್ ವಿಡಿಯೋ

ಕೆಲವು ಆಟಗಾರರಿಗೆ ಹೆಚ್ಚುವರಿ ಅವಕಾಶಗಳನ್ನು ನೀಡಬಹುದು, ಆದರೆ ನಾಲ್ವರು ಆಟಗಾರರು ಒಟ್ಟಿಗೆ ವಿಫಲವಾದಾಗ, ಬದಲಾವಣೆಗಳನ್ನು ಮಾಡುವುದು ಅಗತ್ಯವಾಗುತ್ತದೆ ಎಂದು ಧೋನಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ನಾವು ಸಾಕಷ್ಟು ರನ್ ಗಳಿಸಲು ಸಾಧ್ಯವಾಗುತ್ತಿಲ್ಲ, ಮತ್ತು ಇಂದಿನ ಕಾಲದಲ್ಲಿ ರನ್ ಗಳಿಸುವುದು ಬಹಳ ಮುಖ್ಯ. ಪ್ರತಿ ಪಂದ್ಯದಲ್ಲೂ 180-200 ರನ್ ಗಳಿಸುವುದು ಅನಿವಾರ್ಯವಲ್ಲ, ಆದರೆ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ರನ್ ಗಳಿಸಬೇಕು. ಧೋನಿಯ ಈ ಸುದೀರ್ಘ ಮಾತುಗಳಿಂದ, ಅವರು ತಂಡದ ಪ್ರದರ್ಶನದಿಂದ ತುಂಬಾ ನಿರಾಶೆಗೊಂಡಿದ್ದಾರೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್