CSK vs SRH, IPL 2025: 154ಕ್ಕೆ ಪತನಗೊಂಡ ಸಿಎಸ್ಕೆ: ಐಪಿಎಲ್ನಲ್ಲಿ ಇತಿಹಾಸ ಸೃಷ್ಟಿಸಿದ ಮೊಹಮ್ಮದ್ ಶಮಿ
Mohammed Shami created history: ಹೈದರಾಬಾದ್ ತಂಡದ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ ಐಪಿಎಲ್ನಲ್ಲಿ ಇತಿಹಾಸ ಸೃಷ್ಟಿಸಿದರು. ಸಿಎಸ್ಕೆ ವಿರುದ್ಧಧ ಪಂದ್ಯದ ಮೊದಲ ಎಸೆತದಲ್ಲೇ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯುವ ಆರಂಭಿಕ ಆಟಗಾರ ಶೇಖ್ ರಶೀದ್ ಅವರ ವಿಕೆಟ್ ಪಡೆದರು. ಐಪಿಎಲ್‌ನಲ್ಲಿ ನಾಲ್ಕನೇ ಬಾರಿಗೆ ಶಮಿ ಪಂದ್ಯದ ಮೊದಲ ಎಸೆತದಲ್ಲೇ ವಿಕೆಟ್ ಪಡೆದ ಸಾಧನೆ ಮಾಡಿದರು.

ಬೆಂಗಳೂರು (ಏ. 25): ಇಂಡಿಯನ್ ಪ್ರೀಮಿಯರ್ ಲೀಗ್ 2025 ರಲ್ಲಿ ಇಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ (Chennai Super Kings vs Sunrisers Hyderabad) ತಂಡಗಳು ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಪರಸ್ಪರ ಮುಖಾಮುಖಿಯಾಗಿವೆ. ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಚೆನ್ನೈ ವಿರುದ್ಧ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಅದರಂತೆ ಹೈದರಾಬಾದ್ ಬೌಲಿಂಗ್ ದಾಳಿಗೆ ತತ್ತರಿಸಿದ ಧೋನಿ ಪಡೆ ಮೊದಲು ಬ್ಯಾಟಿಂಗ್ ಮಾಡಿ 20 ಓವರ್‌ಗಳನ್ನು ಸಹ ಆಡಲು ಸಾಧ್ಯವಾಗದೆ 19.5 ಓವರ್‌ಗಳಲ್ಲಿ 154 ರನ್‌ಗಳಿಗೆ ಆಲೌಟ್ ಆಯಿತು.
ಇದರ ಮಧ್ಯೆ ಹೈದರಾಬಾದ್ ತಂಡದ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ ಐಪಿಎಲ್ನಲ್ಲಿ ಇತಿಹಾಸ ಸೃಷ್ಟಿಸಿದರು. ಶಮಿ ಈ ಪಂದ್ಯವನ್ನು ಸ್ಫೋಟಕ ರೀತಿಯಲ್ಲಿ ಪ್ರಾರಂಭಿಸಿದರು. ಪಂದ್ಯದ ಮೊದಲ ಎಸೆತದಲ್ಲೇ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯುವ ಆರಂಭಿಕ ಆಟಗಾರ ಶೇಖ್ ರಶೀದ್ ಅವರ ವಿಕೆಟ್ ಪಡೆದರು. ಐಪಿಎಲ್‌ನಲ್ಲಿ ನಾಲ್ಕನೇ ಬಾರಿಗೆ ಶಮಿ ಪಂದ್ಯದ ಮೊದಲ ಎಸೆತದಲ್ಲೇ ವಿಕೆಟ್ ಪಡೆದ ಸಾಧನೆ ಮಾಡಿದರು.
Aate hi kaam shuru kar diye! 🔥#MohammadShami strikes on the very first ball of the innings to give #SRH the perfect start in their quest for a maiden win at Chepauk! 💥
Can they make history tonight?👇✍🏻
Watch the LIVE action ➡ https://t.co/uCvJbWdEiC#IPLonJioStar 👉… pic.twitter.com/lLI5Ox5zXv
— Star Sports (@StarSportsIndia) April 25, 2025
ಈ ಸಾಧನೆಯನ್ನು ನಾಲ್ಕು ಬಾರಿ ಮಾಡಿದ ಏಕೈಕ ಬೌಲರ್ ಈಗ ಮೊಹಮ್ಮದ್ ಶಮಿ ಆಗಿದ್ದಾರೆ. ಇದಲ್ಲದೆ, ಅವರು ಐಪಿಎಲ್‌ನಲ್ಲಿ ನಾಲ್ಕನೇ ಬಾರಿಗೆ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ವಿಕೆಟ್ ಪಡೆಯುವ ಸಾಧನೆ ಮಾಡಿದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು.
RCB vs RR: ಆರ್‌ಸಿಬಿ ವಿರುದ್ಧ ಸೋತ ದುಃಖದಲ್ಲಿ ಎಣ್ಣೆ ಅಂಗಡಿಗೆ ಹೋದ ರಾಜಸ್ಥಾನದ ಸಿಇಒ: ವೈರಲ್ ವಿಡಿಯೋ
ಐಪಿಎಲ್ ಪಂದ್ಯವೊಂದರಲ್ಲಿ ಮೊದಲ ಎಸೆತದಲ್ಲೇ ಅತಿ ಹೆಚ್ಚು ವಿಕೆಟ್ ಪಡೆದವರು:
- 4 ಬಾರಿ – ಮೊಹಮ್ಮದ್ ಶಮಿ
- 2 ಬಾರಿ – ಡಿರ್ಕ್ ನ್ಯಾನೆಸ್
- 2 ಬಾರಿ – ಲಸಿತ್ ಮಾಲಿಂಗ
- 2 ಬಾರಿ – ಉಮೇಶ್ ಯಾದವ್
- 2 ಬಾರಿ – ಭುವನೇಶ್ವರ್ ಕುಮಾರ್
- 2 ಬಾರಿ – ಟ್ರೆಂಟ್ ಬೌಲ್ಟ್
ಎರಡನೇ ಎಸೆತದಲ್ಲಿ ನೋ ಬಾಲ್:
ಪಂದ್ಯದ ಮೊದಲ ಎಸೆತದಲ್ಲೇ ಮೊಹಮ್ಮದ್ ಶಮಿ ಐತಿಹಾಸಿಕ ಸಾಧನೆ ಮಾಡಿದರು, ಆದರೆ ಎರಡನೇ ಎಸೆತದಲ್ಲೇ ನೋ ಬಾಲ್ ಎಸೆದರು. ವಾಸ್ತವವಾಗಿ, ಅವರು ಬೌಲಿಂಗ್ ಮಾಡುವಾಗ ತಮ್ಮ ಕೈಯಿಂದ ವಿಕೆಟ್‌ಗೆ ಹೊಡೆದರು. ರನ್ ಅಪ್ ಸಮಯದಲ್ಲಿ ಈ ಘಟನೆ ಸಂಭವಿಸಿತು, ಇದರಿಂದಾಗಿ ಅಂಪೈರ್ ಈ ಚೆಂಡನ್ನು ನೋ ಬಾಲ್ ಎಂದು ಘೋಷಿಸಿದರು. ಕ್ರಿಕೆಟ್‌ನಲ್ಲಿ ಬೌಲರ್ ಬೌಲಿಂಗ್ ಮಾಡುವಾಗ ವಿಕೆಟ್‌ಗೆ ತನ್ನ ಕೈಯಿಂದ ಹೊಡೆದ ಇಂತಹ ಘಟನೆಗಳು ನಡೆಯುವುದು ಬಹಳ ಕಡಿಮೆ.
154ಕ್ಕೆ ಸಿಎಸ್ಕೆ ಆಲೌಟ್:
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಸಿಎಸ್ಕೆ ಮೊದಲ ಓವರ್ನಿಂದಲೇ ವಿಕೆಟ್ ಕಳೆದುಕೊಂಡು ಸಾಗಿತು. ಆದರೆ, ಆಯುಷ್ ಮ್ಹಾತ್ರೆ 19 ಎಸೆತಗಳಲ್ಲಿ 30 ರನ್ ಸಿಡಿಸಿ ಪವರ್ ಪ್ಲೇನಲ್ಲಿ ಕೊಂಚ ರನ್ ತಂದುಕೊಟ್ಟರು. ರವೀಂದ್ರ ಜಡೇಜಾ 21 ರನ್ ಗಳಿಸಿದರು. ಡೆವಾಲ್ಡ್ ಬ್ರೆವಿಸ್ 25 ಎಸೆತಗಳಲ್ಲಿ 4 ಸಿಕ್ಸರ್ ಸಿಡಿಸಿ 42 ರನ್ ಚಚ್ಚಿ ನೆರವಾದರು. ದೀಪ್ ಹೂಡ 22 ರನ್ ಗಳಿಸಿದರು. ನಾಯಕ ಎಂಎಸ್ ಧೋನಿ ಆಟ 6 ರನ್ಗೆ ಕೊನೆಗೊಂಡಿತು. ಅಂತಿಮವಾಗಿ ಚೆನ್ನೈ 19.5 ಓವರ್‌ಗಳಲ್ಲಿ 154 ರನ್ಗೆ ಆಲೌಟ್ ಆಯಿತು. ಹೈದರಾಬಾದ್ ಪರ ಹರ್ಷಲ್ ಪಟೇಲ್ 28 ರನ್ಗೆ 4 ವಿಕೆಟ್ ಕಿತ್ತರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




