‘ಮದುವೆ, ಜಾತ್ರೆಗೆ ಜನ ಸೇರುತ್ತಾರೆ.. ನಾವು ಮಾತ್ರ 10ನೇ ಕ್ಲಾಸ್​ ಮಕ್ಕಳಿಗೆ ಎಕ್ಸಾಂ ಮಾಡಬಾರದಾ?’

| Updated By: ಸಾಧು ಶ್ರೀನಾಥ್​

Updated on: Dec 04, 2020 | 2:29 PM

ಕೊವಿಡ್ ನಿಯಮ ಉಲ್ಲಂಘಿಸಿ ಖಾಸಗಿ ಶಾಲೆಯಲ್ಲಿ ಪರೀಕ್ಷೆ ನಡೆಸಿರುವ ಘಟನೆ ನಗರದ ಕೊರಂಗ್ರಪಾಡಿಯಲ್ಲಿರುವ MET ಶಾಲೆಯಲ್ಲಿ ಬೆಳಕಿಗೆ ಬಂದಿದೆ. 10ನೇ ತರಗತಿ ವಿದ್ಯಾರ್ಥಿಗಳಿಗೆ ಪೂರ್ವಸಿದ್ಧತಾ ಪರೀಕ್ಷೆ ನಡೆಸಲಾಯಿತು ಎಂದು ತಿಳಿದುಬಂದಿದೆ.

‘ಮದುವೆ, ಜಾತ್ರೆಗೆ ಜನ ಸೇರುತ್ತಾರೆ.. ನಾವು ಮಾತ್ರ 10ನೇ ಕ್ಲಾಸ್​ ಮಕ್ಕಳಿಗೆ ಎಕ್ಸಾಂ ಮಾಡಬಾರದಾ?’
‘ಮದುವೆ, ಜಾತ್ರೆಗಳಿಗೆ ಜನ್ರು ಸೇರುತ್ತಾರೆ.. ನಾವು ಮಕ್ಕಳಿಗೆ ಎಕ್ಸಾಂ ಮಾಡಬಾರದಾ?’
Follow us on

ಉಡುಪಿ: ಕೊವಿಡ್ ನಿಯಮ ಉಲ್ಲಂಘಿಸಿ ಖಾಸಗಿ ಶಾಲೆಯಲ್ಲಿ ಪರೀಕ್ಷೆ ನಡೆಸಿರುವ ಘಟನೆ ನಗರದ ಕೊರಂಗ್ರಪಾಡಿಯಲ್ಲಿರುವ MET ಶಾಲೆಯಲ್ಲಿ ಬೆಳಕಿಗೆ ಬಂದಿದೆ. 10ನೇ ತರಗತಿ ವಿದ್ಯಾರ್ಥಿಗಳಿಗೆ ಪೂರ್ವಸಿದ್ಧತಾ ಪರೀಕ್ಷೆ ನಡೆಸಲಾಯಿತು ಎಂದು ತಿಳಿದುಬಂದಿದೆ.

ಸಾಮಾನ್ಯವಾಗಿ  SSLC ಫಲಿತಾಂಶ ಪ್ರಕಟವಾದಾಗ ತಾನು ಮೊದಲ ಸ್ಥಾನದಲ್ಲಿ ಕಂಗೊಳಿಸುವ ಉಡುಪಿ ಜಿಲ್ಲೆಯಲ್ಲಿ ಇಂಥಾ ಯಡವಟ್ಟು ಪ್ರಸಂಗ ನಡೆದಿದೆ. ಅದೇನು ಕೊರೊನಾ ಬಗ್ಗೆ ನಿರ್ಲಕ್ಷ್ಯವೋ ಅಥವಾ ತಮ್ಮ ಶಾಲಾ ಮಕ್ಕಳ ಬಗೆಗಿನ ವಿಶೇಷ ಕಾಳಜಿಯೋ ಅಂತೂ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಎಲ್ಲ ವಿದ್ಯಾರ್ಥಿಗಳನ್ನು ಕೊಠಡಿಗಳಲ್ಲಿ ಅಕ್ಷರಶಃ ಕೂಡಿ ಹಾಕಿ ಪರೀಕ್ಷೆ ಕಂಡಕ್ಟ್​ ಮಾಡಿದ್ದಾರೆ.

ಏನಾಯಿತೆಂದ್ರೆ.. ಶಾಲಾ ಕೊಠಡಿಯ ಬಾಗಿಲು ಮುಚ್ಚಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗಿದೆ. ಇದನ್ನು ಪ್ರಶ್ನಿಸಿದ್ದಕ್ಕೆ ಪೋಷಕರು ಶುಲ್ಕ ಪಾವತಿಸಿದ್ದಾರೆ, ಹೀಗಾಗಿ ಪರೀಕ್ಷೆ ಏರ್ಪಡಿಸಿದ್ದೇವೆ. ಮದುವೆ, ಜಾತ್ರೆಗಳಿಗೆ ಜನರು ಸೇರುತ್ತಾರೆ. ನಾವು ಮಕ್ಕಳಿಗೆ ಪರೀಕ್ಷೆ ಮಾಡಬಾರದಾ? ಎಂದು ಶಾಲೆಯ ಮುಖ್ಯೋಪಾಧ್ಯಾಯಿನಿ ಜುನೈದ್ ಸುಲ್ತಾನಾ ವಾದ ಮಾಡಿದರು. ಜೊತೆಗೆ, ಮಕ್ಕಳಿಗೆ ರೋಗನಿರೋಧಕ ಶಕ್ತಿಯಿದೆ. ಅದರ ಬಗ್ಗೆ ನಾವು ತಲೆಕೆಡಿಸಿಕೊಳ್ಳಬೇಕಾಗಿಲ್ಲ ಎಂದು ಸಹ ಹೇಳಿದರು.

ಮಕ್ಕಳ ಆರೋಗ್ಯದ ಜೊತೆ ಚೆಲ್ಲಾಟವಾಡಿದ ಖಾಸಗಿ ಶಾಲೆ ರಾಜ್ಯ ಸರ್ಕಾರ ಮತ್ತು ಜಿಲ್ಲಾಧಿಕಾರಿಯ ಆದೇಶವನ್ನು ಉಲ್ಲಂಘಿಸಿ ಪರೀಕ್ಷೆ ನಡೆಸಿದರು. ಎಕ್ಸಾಂ ನಡೆಯುತ್ತಿರುವ ಬಗ್ಗೆ ಯಾರಿಗೂ ಮಾಹಿತಿ ಸಿಗಬಾರದೆಂದು ಹೊರಗಿನಿಂದ ಚಿಲಕ ಹಾಕಿ ಒಳಗಡೆ ಪರೀಕ್ಷೆ ನಡೆಸಲಾಯಿತು.

ಇತ್ತ, ಪರೀಕ್ಷೆ ನಡೆಸುತ್ತಿದ್ದ ಶಾಲೆಗೆ ತಹಶೀಲ್ದಾರ್ ಭೇಟಿ ಕೊಟ್ಟು, ಪರಿಶೀಲನೆ ನಡೆಸಿದರು. ಈ ವೇಳೆ, ಪರೀಕ್ಷೆ ಮಾಡದಂತೆ ಶಾಲೆಯ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಿದರು. ನಂತರ, ವಿದ್ಯಾರ್ಥಿಗಳನ್ನು ಮನೆಗೆ ಕಳಿಸಿದ ತಹಶೀಲ್ದಾರ್ ಅಧಿಕಾರಿಗಳ ಗಮನಕ್ಕೆ ತರದೆ ಪರೀಕ್ಷೆ ಮಾಡಲಾಗಿದೆ. ಶಾಲಾ ಆಡಳಿತ ಮಂಡಳಿ ವಿರುದ್ಧ ಪ್ರಕರಣ ದಾಖಲಿಸುತ್ತೇವೆ. ಕ್ರಿಮಿನಲ್ ಕೇಸ್ ದಾಖಲಿಸುತ್ತೇವೆ ಎಂದು ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಹೇಳಿದರು.