ಉಡುಪಿ: ದೇಶಾದ್ಯಂತ ಆವರಿಸಿದ ಮಹಾಮಾರಿ ಕೊರೊನಾ ಲೌಕ್ಡೌನ್ನಿಂದಾಗಿ ಜನರು ಮನೆಯೊಳಗೆ ಸೇರಿದರು. ಆದ್ರೆ ಉಡುಪಿ ಜಿಲ್ಲೆಯ ಬ್ರಹ್ಮಾವರದ ಬಿ.ಕೆ.ಗಣೇಶ್ ರೈ ಎಂಬವರು ತಮ್ಮ ಕೈಚಳಕದಿಂದ ಭಾರತ ಮಾತೆಯ ಮೂರ್ತಿ ರಚಿಸಿದ್ದಾರೆ.
ಕೊಲ್ಲಿ ರಾಷ್ಟ್ರದಲ್ಲಿ ಕ್ರಿಯಾತ್ಮಕ ಕಲಾ ನಿರ್ದೇಶಕನಾಗಿ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಬಂದು ನೆಲೆಸಿದ್ದಾರೆ. ಒಬ್ಬ ಕಲಾವಿದನಾಗಿ ತನ್ನ ತಾಯ್ನಾಡಿನಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಹಂಬಲದಿಂದ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ನೆಲೆಸಿದ್ದಾರೆ. ಉಡುಪಿ ಜಿಲ್ಲೆ ಹಲವಾರು ಪ್ರತಿಭೆಗಳನ್ನು ಪರಿಚಯಿಸಿದ ಕ್ಷೇತ್ರವಾಗಿದೆ. ಮಹಾಮಾರಿ ಕೊರೊನಾದಿಂದಾಗಿ ಜನರು ಮನೆ ಒಳಗೆ ಸೇರುವಂತಾಗಿದೆ.
ಈ ಸಂದರ್ಭದಲ್ಲಿ ಬಿ.ಕೆ.ಗಣೇಶ್ ರೈ ಭಾರತಮಾತೆಯ ಕಲಾತ್ಮಕ ಮೂರ್ತಿ ರಚಿಸಿದ್ದಾರೆ. ಸುಮಾರು 9ಅಡಿ ಎತ್ತರದ ಪೇಪರ್ ಪಲ್ಪ್ ಮೋಲ್ಡಿಂಗ್ನಲ್ಲಿ ಭಾರತ ಮಾತೆಯ ವಿಗ್ರಹವನ್ನು ಸ್ಥಳೀಯ ಶುಭ ಸಮಾರಂಭಗಳಿಗೆ, ಸರ್ಕಾರಿ ಕಾರ್ಯಕ್ರಮಗಳಲ್ಲಿ ಉಪಯೋಗಿಸಿಕೊಳ್ಳಬಹುದು.
ಲಾಕ್ಡೌನ್ ಸಮಯದಲ್ಲಿ ಭಾರತ ಮಾತೆಯ ವಿಗ್ರಹ ತಯಾರಿಸಿ ದೇಶಪ್ರೇಮವನ್ನು ಮೆರೆದಿದ್ದಾರೆ. ಬಿ.ಕೆ.ಗಣೇಶ್ ರೈ ಬಾಲ್ಯದಿಂದಲೂ ದೇಶಪ್ರೇಮಿ. ಕೊರೊನಾ ಸಂದರ್ಭದಲ್ಲಿ ಭಾರತಮಾತೆಯ ಮೂರ್ತಿ ರಚಿಸಿ ತಮ್ಮ ಸಮಯವನ್ನು ಕಳೆದಿದ್ದಾರೆ. ಕಲಾವಿದನಾಗಿ ತನ್ನಲ್ಲಿರುವ ಕಲೆಯನ್ನು ಈ ರೀತಿ ಹೊರ ಹಾಕಿದ್ದಾರೆ. ಈ ಮೂರ್ತಿ ಸ್ಥಳೀಯರಿಗೆ ಆಕರ್ಷಣೆ ಆಗಿದೆ.
Published On - 2:05 pm, Fri, 29 May 20