ಉಡುಪಿಯಲ್ಲಿ ಮಹಿಷ ದಸರಾಗೆ ಅನುಮತಿ ನಿರಾಕರಣೆ! ಮಹಿಷೋತ್ಸವಕ್ಕೆ ಚಾಲನೆ ನೀಡಿದ ದಲಿತ ಸಂಘಟನೆಗಳು

| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 15, 2023 | 4:53 PM

ಉಡುಪಿಯಲ್ಲಿ ಮಹಿಷಾ ದಸರಾದ ಬದಲಿಗೆ ಮಹಿಷೋತ್ಸವ ನಡೆಸಲಾಯಿತು. ಹಿಂದೂ ಸಂಘಟನೆಗಳ ವಿರೋಧದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮಹಿಷ ದಸರಾ ಮೆರವಣಿಗೆ ನಡೆಸಲು ಅನುಮತಿ ನಿರಾಕರಿಸಿತ್ತು. ಆದರೆ, ಜಿಲ್ಲಾ ಅಂಬೇಡ್ಕರ್ ಭವನದಲ್ಲಿವಿಚಾರ ಸಂಕಿರಣ ನಡೆಸುವ ಮೂಲಕ ದಲಿತ ಮುಖಂಡರು ರಾಜ್ಯ ಸರಕಾರದ ನಡೆಯನ್ನು ವಿರೋಧಿಸಿದರು.

ಉಡುಪಿಯಲ್ಲಿ ಮಹಿಷ ದಸರಾಗೆ ಅನುಮತಿ ನಿರಾಕರಣೆ! ಮಹಿಷೋತ್ಸವಕ್ಕೆ ಚಾಲನೆ ನೀಡಿದ ದಲಿತ ಸಂಘಟನೆಗಳು
ಉಡುಪಿ ಮಹಿಷ ದಸರಾ
Follow us on

ಉಡುಪಿ, ಅ.15: ವಿವಾದಕ್ಕೆ ಕಾರಣವಾಗಿದ್ದ ಮಹಿಷಾ ದಸರಾ ಉಡುಪಿ(Udupi)ಯಲ್ಲಿ ನಡೆಸಲು, ದಲಿತ ಸಂಘಟನೆಗಳು ಅಂಬೇಡ್ಕರ್ ಯುವ ಸೇನೆ ನೇತೃತ್ವದಲ್ಲಿ ಮೆರವಣಿಗೆ ನಡೆಸಿ ಅದ್ದೂರಿಯಾಗಿ ಮಹಿಷ ದಸರಾ(Mahisha Dasara) ನಡಸಲು ಯೋಜಿಸಿತ್ತು. ಒಂದು ವೇಳೆ ಮಹಿಷಾ ದಸರಾ ನಡೆದರೆ ಪ್ರತಿಭಟನೆ ನಡೆಸುವುದಾಗಿ ವಿಶ್ವ ಹಿಂದು ಪರಿಷತ್ ಎಚ್ಚರಿಸಿತ್ತು. ಇದೇ ಮೊದಲ ಬಾರಿಗೆ ಆಯೋಜನೆ ನಡೆಯುತ್ತಿರುವುದರಿಂದ ಅನುಮತಿ ನೀಡಲು ಜಿಲ್ಲಾಡಳಿತ ನಿರಾಕರಿಸಿ, ನಗರದಲ್ಲಿ ನಿಷೇಧಾಜ್ಞೆ ಜಾರಿ ಮಾಡಿ, ಯಾವುದೇ ಮೆರವಣಿಗೆ ನಡೆಸಬಾರದು ಬ್ಯಾನರ್​ಗಳನ್ನು ಅಳವಡಿಸಬಾರದು ಎಂದು ಸೂಚನೆ ನೀಡಿತ್ತು.

ಮಹಿಷೋತ್ಸವಕ್ಕೆ ಚಾಲನೆ

ಈ ಹಿನ್ನೆಲೆಯಲ್ಲಿ ದಲಿತ ಸಂಘಟನೆಗಳು ಒಳಾಂಗಣ ಆಚರಣೆಗೆ ನಿರ್ಧರಿಸಿ, ಜಿಲ್ಲಾ ಅಂಬೇಡ್ಕರ್ ಭವನದಲ್ಲಿ ವಿಚಾರ ಸಂಕೀರ್ಣ ಏರ್ಪಡಿಸಿತ್ತು. ವಿಚಾರ ಸಂಕಿರಣಕ್ಕೂ ಮುನ್ನ, ಅಂಬೇಡ್ಕರ್ ಭವನದ ಆವರಣದೊಳಗೆ ಪುಟ್ಟ ಮೆರವಣಿಗೆ ನಡೆಸಿ, ಮಹಿಷಾಸುರನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಮಹಿಷೋತ್ಸವಕ್ಕೆ ಚಾಲನೆ ನೀಡಿದರು.

ಇದನ್ನೂ ಓದಿ:ಅ.15ಕ್ಕೆ ಉಡುಪಿಯಲ್ಲಿ ಮಹಿಷಾ ದಸರಾ ಆಚರಣೆ, ದ್ರಾವಿಡ ದೊರೆ ಮಹಿಷ ಬಗ್ಗೆ ಜಾಗೃತಿ ಕಾರ್ಯಕ್ರಮ

ಮಹಿಷ ದಸರಾಗೆ ಅನುಮತಿ ನಿರಾಕರಣೆ ಕುರಿತು ಮಾತನಾಡಿದ ಸಂಘಟನೆ ಮುಖಂಡರು ‘ಕಾಂಗ್ರೆಸ್ ಸರಕಾರ ಇದ್ದ ಹೊರತಾಗಿಯೂ, ಮಹಿಷಾ ದಸರಾಕ್ಕೆ ಅನುಮತಿ ನೀಡದೇ ಇರುವುದು ನಮಗೆ ಬೇಸರ ತಂದಿದೆ ಎಂದು ಜಿಲ್ಲಾ ದಲಿತ ಮುಖಂಡರು ಆಕ್ರೋಶ ಹೊರ ಹಾಕಿದ್ದಾರೆ. ಚುನಾವಣೆಯಲ್ಲಿ ಅನಿವಾರ್ಯವಾಗಿ ನಾವು ಕಾಂಗ್ರೆಸ್ ಪರ ನಿಂತಿದ್ದೆವು . ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತವಿದೆ . ದಲಿತ ಸಮುದಾಯಕ್ಕೆ ಸೇರಿದ ಗೃಹ ಮಂತ್ರಿಗಳು ಇದ್ದರೂ, ಈ ಪರಿಸ್ಥಿತಿ ಬಂದಿರುವುದು ಶೋಚನೀಯ. ದಲಿತ ಸಮುದಾಯದ ಅನೇಕ ಅಧಿಕಾರಿಗಳು ಉನ್ನತ ಹುದ್ದೆಯಲ್ಲಿದ್ದರೂ, ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯಲು ಸಾಧ್ಯವಾಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

ಇನ್ನು ಈ ವೇಳೆ ಮಹಿಷಾಸುರನ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ, ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಿ ವಿಚಾರ ಸಂಕಿರಣ ನಡೆಸಲಾಯಿತು. ಕಾಲ್ಪನಿಕ ಕಥೆಗಳನ್ನು ಒಳಗೊಂಡ ಪುರಾಣಗಳ ಎದುರು, ಇತಿಹಾಸದ ಸತ್ಯಗಳನ್ನು ನಾವು ಸವಾಲಾಗಿ ಜನರಿಗೆ ತಿಳಿಸಬೇಕು. ಮಹಿಷಾಸುರನ ಬಗ್ಗೆ ಜಾಗೃತಿ ಮೂಡಿಸಬೇಕು. ಆತ ನಮ್ಮನ್ನಾಳಿದ ಅರಸನೇ ಹೊರತು ಕ್ರೂರಿ ಅಲ್ಲ ಎಂದು, ಭಾಷಣಕಾರರು ಮಾತನಾಡಿದರು. ಬಹಿರಂಗ ಮೆರವಣಿಗೆಗೆ ಅವಕಾಶ ನೀಡಿದ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆಗಳು ಇಂದಿನ ಹೋರಾಟದಿಂದ ಹಿಂದೆ ಸರಿದಿದ್ದವು. ಇದೇ ಮೊದಲ ಬಾರಿಗೆ ದೇವಾಲಯಗಳ ನಗರಿಯಲ್ಲಿ ಮಹಿಶೋತ್ಸವ ಆಚರಣೆ ನಡೆದಿದ್ದು, ಮುಂದಿನ ವರ್ಷಗಳಲ್ಲಿ ಮತ್ತಷ್ಟು ಅದ್ದೂರಿಯಾಗಿ ಮಹಿಷಾ ದಸರಾ ಮಾಡುತ್ತೇವೆ ಎಂದು ದಲಿತ ಸಂಘಟನೆಗಳು ಘೋಷಿಸಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ