ಮಹಿಷಾ ದಸರಾ ಆಚರಣೆಗೆ ಅನುಮತಿ ನಿರಾಕರಣೆ; ನಾವು ಮಾಡೇ ಮಾಡ್ತೇವೆ ಎಂದ ಅಧ್ಯಕ್ಷ ಪುರುಷೋತ್ತಮ್
ಪೊಲೀಸರು ನಮ್ಮನ್ನು ಕರೆದು ಮಾತನಾಡಬೇಕಿತ್ತು. ಇದೀಗ ಏಕಾಏಕಿ ಅನುಮತಿ ನಿರಾಕರಿಸಿದ್ದೇವೆ ಎಂದು ಹೇಳಿದ್ದಾರೆ. ನಮಗೆ 10 ಜನರಿಗಾದರು ಮಹಿಷನಿಗೆ ಪುಷ್ಪಾರ್ಚನೆ ಮಾಡಲು ಅವಕಾಶ ಕೊಡಬೇಕು ಎಂದು ಮಹಿಷಾ ದಸರಾ ಆಚರಣ ಸಮಿತಿ ಅಧ್ಯಕ್ಷ ಪುರುಷೋತ್ತಮ್ ಹೇಳಿದರು.
ಮೈಸೂರು, ಅ.11: ಇದೀಗ ರಾಜ್ಯದಲ್ಲಿ ಮಹಿಷಾ ದಸರಾ(Mahisha Dasara) ಸದ್ದು ಮಾಡುತ್ತಿದೆ. ಮಹಿಷ ದಸರಾ ಸಮಿತಿಯವರು ಹಾಗೂ ದಲಿತ ಸಂಘಟನೆಗಳು ನಾವು ಆಚರಣೆ ಮಾಡುತ್ತೇವೆ ಎಂದು ಪಟ್ಟು ಹಿಡಿದರೆ, ಇತ್ತ ಸಂಸದ ಪ್ರತಾಪ್ ಸಿಂಹ ಇದನ್ನು ವಿರೋಧಿಸಿದ್ದಾರೆ. ಜೊತೆಗೆ ಚಾಮುಂಡಿ ಬೆಟ್ಟ ಚಲೋ ಜಾಥಾಗೆ ಕರೆ ಕೊಟ್ಟಿದ್ದಾರೆ. ಆದರೆ, ಮೈಸೂರು ನಗರ ಆಯುಕ್ತ ರಮೇಶ್ ಬಾನೋತ್ (Ramesh Banoth) ಮಾತ್ರ ಎರಡು ಕಡೆಯವರ ಮನವಿಯನ್ನು ತಿರಸ್ಕರಿಸಿದ್ದಾರೆ. ಈ ಕುರಿತು ಮಾತನಾಡಿದ ಮಹಿಷಾ ದಸರಾ ಆಚರಣ ಸಮಿತಿ ಅಧ್ಯಕ್ಷ ಪುರುಷೋತ್ತಮ್ , ನಾವು ಮಹಿಷ ದಸರಾ ಆಚರಣೆ ಮಾಡೇ ಮಾಡುತ್ತೇವೆ ಎಂದಿದ್ದಾರೆ.
‘ಪೊಲೀಸರು ನಮ್ಮನ್ನು ಕರೆದು ಮಾತನಾಡಬೇಕಿತ್ತು. ಇದೀಗ ಏಕಾಏಕಿ ಅನುಮತಿ ನಿರಾಕರಿಸಿದ್ದೇವೆ ಎಂದು ಹೇಳಿದ್ದಾರೆ. ನಮಗೆ 10 ಜನರಿಗಾದರು ಮಹಿಷನಿಗೆ ಪುಷ್ಪಾರ್ಚನೆ ಮಾಡಲು ಅವಕಾಶ ಕೊಡಬೇಕು. ನಾವು ಹಿಂದೆ ಮಹಿಷಾ ದಸರಾ ಮಾಡಿದಾಗ ಎಂದಾದರು ಗಲಾಟೆಯಾಗಿತ್ತಾ?. ಲಕ್ಷಾಂತರ ಜನ ಸೇರಿಸಿ ರಾಜಕೀಯ ಸಮಾವೇಶ ಮಾಡಿದಾಗ ಅದಕ್ಕೆ ಪೊಲೀಸ್ ಬಂದೋ ಬಸ್ತ್ ಕೊಡುತ್ತೀರಿ. ಈಗಲೂ ಅದೇ ರೀತಿ ನಮಗೂ ರಕ್ಷಣೆ ಕೊಡಿ. ಸರ್ಕಾರ ಮಹಿಷಾ ದಸಾರ ಮಾಡಬಾರದು ಎಂದು ಹೇಳಿಲ್ಲ ಎಂದು ಹೇಳಿದರು.
ಇದನ್ನೂ ಓದಿ:ಮಹಿಷ ದಸರಾಗೆ ವಿರೋಧ: ಬರಿಗಾಲಲ್ಲಿ ಬೆಟ್ಟ ಹತ್ತಿ, ದುಷ್ಟರನ್ನು ಶಿಕ್ಷಿಸು ಎಂದು ಚಾಮುಂಡೇಶ್ವರಿಗೆ ಪಾರ್ಥನೆ
ಸಂಸದ ಪ್ರತಾಪ್ ಸಿಂಹರನ್ನು ಬಂಧಿಸಿ
ಸಂಸದ ಪ್ರತಾಪ್ ಸಿಂಹ ಸಂಘರ್ಷ ಮಾಡುತ್ತೇವೆ ಅಂದಿದ್ದಾರೆ, ಅವರನ್ನು ಬಂಧಿಸಬೇಕು. ನಾನು ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿದ್ದೇನೆ. ನಾನು ಇನ್ನೊಬ್ಬರಿಗೆ ಧಕ್ಕೆ ಮಾಡಿ ಆಚರಣೆ ಮಾಡುತ್ತಿಲ್ಲ. ಅವರ ರೀತಿ ಹೇಳಿಕೆ ಕೊಟ್ಟರೆ ಬಂಧಿಸಲಿ. ಮಹಿಷಾ ದಸರಾ ಆಚರಣೆ ಸಮಿತಿ ಈಗಾಗಲೇ ತೀರ್ಮಾನ ಮಾಡಿದೆ. ಅದರಂತೆ ನಾವು ಮಹಿಷಾ ದಸರಾ ಆಚರಣೆ ಮಾಡುತ್ತೇವೆ. ಅದನ್ನು ಎಲ್ಲಿ ಹೇಗೆ ಎಂಬುದನ್ನು ತಿಳಿಸುತ್ತೇವೆ ಎಂದು ಮಹಿಷಾ ದಸರಾ ಆಚರಣ ಸಮಿತಿ ಅಧ್ಯಕ್ಷ ಪುರುಷೋತ್ತಮ್ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ