ಗೃಹಲಕ್ಷ್ಮೀ ಯೋಜನೆ ಡಿಕೆ ಶಿವಕುಮಾರ್​ ಕನಸಿನ ಯೋಜನೆ: ಲಕ್ಷ್ಮೀ ಹೆಬ್ಬಾಳ್ಕರ್

| Updated By: ರಮೇಶ್ ಬಿ. ಜವಳಗೇರಾ

Updated on: Aug 15, 2023 | 3:31 PM

ವಿಧಾನಸಭಾ ಚುಣಾವಣೆ ಸಂದರ್ಭದಲ್ಲಿ ಭರವಸೆ ನೀಡಿದ್ದ ಗೃಹಲಕ್ಷ್ಮೀ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದು, ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದೆ. ಇನ್ನು ಈ ಯೋಜನೆ ಡಿಸಿಎಂ ಡಿಕೆ ಶಿವಕುಮಾರ್ ಅವರ ಕನಸಿನ ಯೋಜನೆಯಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಹೇಳಿದರು.

ಗೃಹಲಕ್ಷ್ಮೀ ಯೋಜನೆ ಡಿಕೆ ಶಿವಕುಮಾರ್​ ಕನಸಿನ ಯೋಜನೆ: ಲಕ್ಷ್ಮೀ ಹೆಬ್ಬಾಳ್ಕರ್
ಲಕ್ಷ್ಮೀ ಹೆಬ್ಬಾಳ್ಕರ್
Follow us on

ಉಡುಪಿ (ಆಗಸ್ಟ್15): ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಆರಂಭವಾದ ಗೃಹಲಕ್ಷ್ಮೀ ಯೋಜನೆ(Gruhalakshmi Scheme) ಡಿಸಿಎಂ ಡಿಕೆ ಶಿವಕುಮಾರ್ ಅವರ ಕನಸಿನ ಕೂಸು. ವಾರ್ಷಿಕವಾಗಿ 36000 ಕೋಟಿ ರೂ. ವ್ಯಚ್ಚವನ್ನು ಹೊಂದಿರುವ ಈ ಯೋಜನೆ, 1.9 ಕೋಟಿ ಫಲಾನುಭವಿಗಳಿಂದ ನೋಂದಣಿ ಪಡೆದ ಜನಪ್ರಿಯ ಯೋಜನೆಯಾಗಿದೆ ಎಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Laxmi Hebbalkar) ಅಭಿಪ್ರಾಯಪಟ್ಟರು.

ಉಡುಪಿ(Udupi) ಜಿಲ್ಲೆಯ ಉಸ್ತುವಾರಿ ಸಚಿವೆಯಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಭಾಷೆ, ಧರ್ಮ,ವ್ಯಾಪ್ತಿಯನ್ನು ಮೀರಿ ಈ ಯೋಜನೆಗೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪಡಿತರ ಕಾರ್ಡ್ ತಿದ್ದುಪಡಿಗೆ ಸರ್ಕಾರ ಒಂದು ತಿಂಗಳ ಅವಕಾಶಗಳನ್ನು ನೀಡಿದ್ದು, ಕರಾವಳಿ ಮಹಿಳೆಯರ ಅಭಿವೃದ್ಧಿಗಾಗಿ ಈ ಯೋಜನೆಯು ಸಹಕಾರಿಯಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ಡಿ.ಕೆ.ಶಿವಕುಮಾರ ಅವರು ಕನಸಿನ ‘ಗೃಹಲಕ್ಷ್ಮಿ’ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ಧರಾಮಯ್ಯ ಘೋಷಣೆ ಮಾಡಿದ್ದರು. ಈ ಯೋಜನೆಗೆಂದೆ ಬಜೆಟ್‍ನಲ್ಲಿ 18,500 ಕೋಟಿಯನ್ನು ಇರಿಸಲಾಗಿದ್ದು, 9 ಲಕ್ಷ ಕುಟುಂಬಗಳು ನೋಂದಣಿ ಮಾಡಿಕೊಂಡಿವೆ. ಇದರೊಂದಿಗೆ ನಕಲಿ ಖಾತೆಗಳ ಸೃಷ್ಟಿಯನ್ನು ತಡೆಯಲು ಸಾಧ್ಯವಾಗುವಂತಹ ಸಾಫ್ಟ್​ವೇರ್​ಗಳನ್ನ ತಂದಿದ್ದೇವೆ. ರಾಜ್ಯದ ಫಲಾನುಭವಿಗಳೆಲ್ಲರೂ ಈ ಯೋಜನೆಯನ್ನು ಪಡೆದುಕೊಳ್ಳಬೇಕು. ಕರಾವಳಿಯಲ್ಲಿ ಮತ್ತೆ ಪಕ್ಷವನ್ನು ಕಟ್ಟಿ, ಸರ್ಕಾರ 5 ಯೋಜನೆಗಳನ್ನು ಜನರ ಮನೆಬಾಗಿಲಿಗೆ ತಲುಪಿಸುತ್ತೇವೆ ಎಂದರು.

ಅತ್ಯಂತ ಸಂತೋಷದಿಂದ ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವೆಯಾಗಿ ಧ್ವಜಾರೋಹಣ ಮಾಡಿದ್ದೇನೆ. ನಮ್ಮ ದೇಶದ ಧ್ವಜವನ್ನು ಅತ್ಯಂತ ಎತ್ತರದಲ್ಲಿ ಹಾರಿಸುವ ಕನಸು ಎಲ್ಲರಿಗೂ ಇರುತ್ತದೆ. ಭಗವಂತನ ಆಶೀರ್ವಾದದಿಂದ ಇಲ್ಲಿ ಧ್ವಜಾರೋಹಣ ಮಾಡಿದ್ದೇನೆ .ಈ ಕುರಿತು ಬಹಳಷ್ಟು ಖುಷಿ, ಸಾರ್ಥಕತೆ ನನ್ನ ಮನಸ್ಸಿನಲ್ಲಿ ಮೂಡಿದೆ ಎಂದು ತಿಳಿಸಿದರು.

ಇನ್ನು ಇದೇ ವೇಳೆ ಕೊಳೆತ ಮೊಟ್ಟೆ ಸೇವನೆಯಿಂದ ಗರ್ಭಿಣಿ ಅನಾರೋಗ್ಯಗೊಂಡ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ, ಗರ್ಭಿಣಿ ಮಹಿಳೆ ಆರೋಗ್ಯದ ಕುರಿತು ಆರೋಗ್ಯ ಇಲಾಖೆಯ ಜೊತೆ ಚರ್ಚಿಸಿದ್ಧೇನೆ, ಆ ಮಹಿಳೆ ಕುಟುಂಬಕ್ಕೆ ಅಗತ್ಯವಿರುವ ಸಹಾಯವನ್ನು ಒದಗಿಸಲಾಗುತ್ತದೆ ಎಂದ ಮಾಹಿತಿ ನೀಡಿದರು.

ರಾಜ್ಯದ ಕೆಲ ಅಂಗನವಾಡಿಗಳಲ್ಲಿ ಕೊಳೆತ ಮೊಟ್ಟೆಯನ್ನು ವಿತರಿಸಲಾಗಿದೆ. ಮೊಟ್ಟೆ ಹಂಚಿಕೆ ವಿಚಾರದಲ್ಲಿ ನಾಲ್ಕು ವಿಭಾಗಗಳನ್ನಾಗಿ ವಿಂಗಡಿಸಿ, ಶೀಘ್ರದಲ್ಲೇ ಟೆಂಡರ್ ಕರೆದು ಜಿಲ್ಲಾ ಮಟ್ಟದಲ್ಲಿ ಸ್ಟೋರೆಜ್‍ಗಳನ್ನು ರೂಪಿಸುವ ಆಲೋಚನೆಯಿದೆ. ಈ ಕುರಿತು ಈಗಾಗಲೇ ಸಿಎಂ ಜೊತೆ ಮಾತನಾಡಿದ್ದೇನೆ ಎಂದು ಸ್ಪಷ್ಟಪಡಿಸಿದರು.

Published On - 3:30 pm, Tue, 15 August 23