IT ED Raids In Karnataka: ಮಲ್ಪೆ ಬೀಚ್ ನಿರ್ವಹಣಾ ಗುತ್ತಿಗೆದಾರನ ಮನೆ ಮೇಲೆ ಇಡಿ ದಾಳಿ

|

Updated on: Apr 20, 2023 | 6:01 PM

ಡಯಲ್ ಮಂತ್ರ ಸಂಸ್ಥೆಯ ಮಾಲಕರು ಆಗಿರುವ ಮಲ್ಪೆ ಬೀಚ್ ನಿರ್ವಹಣಾ ಗುತ್ತಿಗೆದಾರ ಸುದೇಶ್ ಶೆಟ್ಟಿ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ದಾಳಿ ವೇಳೆ ಸಿಕ್ಕ ದಾಖಲೆಗಳನ್ನು ಕೊಂಡೊಯ್ದಿದ್ದಾರೆ.

IT ED Raids In Karnataka: ಮಲ್ಪೆ ಬೀಚ್ ನಿರ್ವಹಣಾ ಗುತ್ತಿಗೆದಾರನ ಮನೆ ಮೇಲೆ ಇಡಿ ದಾಳಿ
ಮಲ್ಪೆ ಬೀಚ್ ನಿರ್ಹವಣಾ ಗುತ್ತಿಗೆದಾರ ಸುದೇಶ್ ಶೆಟ್ಟಿ ಮನೆ ಮೇಲೆ ಇಡಿ ದಾಳಿ
Follow us on

ಉಡುಪಿ: ಮೊಗವೀರ ಸಮುದಾಯದ ಮುಖಂಡರೂ ಆಗಿರುವ ಗುತ್ತಿಗೆದಾರ, ಉದ್ಯಮಿ ಜಿ.ಶಂಕರ್ (G Shankar) ಮನೆ ಮತ್ತು ಅವರ ಸಂಸ್ಥೆಗಳ ಮೇಲೆ ಐಟಿ ದಾಳಿಯ (IT Raid) ನಡುವೆ ಮಲ್ಪೆ ಬೀಚ್ (Malpe Beach) ನಿರ್ವಹಣಾ ಗುತ್ತಿಗೆದಾರನ ಮನೆ ಮೇಲೆ ಜಾರಿ ನಿರ್ದೇಶನಾಲಯದ (Enforcement Directorate -ED) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಡಯಲ್ ಮಂತ್ರ ಸಂಸ್ಥೆಯ ಮಾಲೀಕರೂ ಆಗಿರುವ ಬೀಚ್ ನಿರ್ವಹಣಾ ಗುತ್ತಿಗೆದಾರ ಸುದೇಶ್ ಶೆಟ್ಟಿ ಅವರಿಗೆ ಸೇರಿದ ಗೆಸ್ಟ್​ಹೌಸ್, ಕಚೇರಿ, ರೆಸ್ಟೋರೆಂಟ್, ಅಂಗಡಿ, ಮನೆ ಮೇಲೆ 10-12 ಇಡಿ ಅಧಿಕಾರಿಗಳ ತಂಡಗಳು ಏಕಕಾಲದಲ್ಲಿ ದಾಳಿ ನಡೆಸಿವೆ. ಸುದೇಶ್ ಶೆಟ್ಟಿ ಪ್ರಾಪರ್ಟಿ ಮೇಲೆ ನಡೆದ ದಾಳಿ ವೇಳೆ ಸಿಕ್ಕ ದಾಖಲೆ ಪತ್ರಗಳನ್ನು ಇಡಿ ಅಧಿಕಾರಿಗಳು ಕೊಂಡೊಯ್ದಿದ್ದು, ಇನ್ನಷ್ಟು ಮಾಹಿತಿ, ದಾಖಲೆ ಪತ್ರಗಳನ್ನು ಒದಗಿಸುವಂತೆ ಸೂಚನೆಯೂ ನೀಡಿದ್ದಾರೆ.

ಉದ್ಯಮಿ ಶಂಕರ್ ನಿವಾಸದ ಮೇಲೆ ಐಟಿ ದಾಳಿ

ಗುತ್ತಿಗೆದಾರ, ಉದ್ಯಮಿ ಜಿ.ಶಂಕರ್ ಮನೆ ಮತ್ತು ಅವರಿಗೆ ಸೇರಿರುವ ಸಂಸ್ಥೆಗಳ ಮೇಲೆ ಇಂದು ಮುಂಜಾನೆ ಐಟಿ ದಾಳಿ ನಡೆದಿದೆ. ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಅಕ್ರಮ ಹಣದ ವಹಿವಾಟು ನಡೆಸುತ್ತಿರುವ ಆರೋಪ ಸಂಬಂಧ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಸಂಸ್ಥೆಯ ಲೆಕ್ಕಪತ್ರ, ಹಣಕಾಸಿನ ವ್ಯವಹಾರದ ವಿವರಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಚುನಾವಣಾ ಸಮಯದಲ್ಲಿ ಐಟಿ ಅಧಿಕಾರಿಗಳು ಫುಲ್​ ಆ್ಯಕ್ಟಿವ್​ ಆಗಿದ್ದು, ರಾಜ್ಯದ ಹಲವು ಕಡೆಗಳಲ್ಲಿ ದಾಳಿ ನಡೆಸಿದ್ದಾರೆ. ಕೆಲ ದಿನಗಳ ಹಿಂದೆ ಮಂಗಳೂರು, ಮೈಸೂರು ಸೇರಿದಂತೆ ಕೆಲ ಕಡೆ ಕಾಂಗ್ರೆಸ್ ಮುಖಂಡರುಗಳ ಮನೆ, ಕಚೇರಿಗಳ ಮೇಲೆ ದಾಳಿ ನಡೆದಿತ್ತು. ನಿನ್ನೆಯಷ್ಟೇ ಐಟಿ ಅಧಿಕಾರಿಗಳು ಬೆಂಗಳೂರಿನಲ್ಲಿ ಕೆಜಿಎಫ್​ ಬಾಬು ಸೇರಿದಂತೆ ರಾಜ್ಯಾದ್ಯಂತ 50 ಕಡೆ ಹಲವಾರು ಕಾಂಗ್ರೆಸ್ ನಾಯಕರ ನಿವಾಸದ ಮೇಲೆ ದಾಳಿ ನಡೆದಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಇಂದು ಬೆಳಗ್ಗೆ ಐಟಿ ಅಧಿಕಾರಿಗಳು ಜಿ.ಶಂಕರ್​ ಮನೆ ಬಾಗಿಲು ತಟ್ಟಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಕೆಜಿಎಫ್​ ಬಾಬು ಸೇರಿದಂತೆ ಹಲವು ಕಾಂಗ್ರೆಸ್​ ನಾಯಕರ ಮನೆಗಳ ಮೇಲೆ ಐಟಿ ದಾಳಿ

ಮಾತ್ರವಲ್ಲದೆ, ಬಾಗಲಕೋಟೆ ಜಿಲ್ಲೆಯೊಂದರಲ್ಲಿ ಎರಡು ಕಡೆ ಐಟಿ ದಾಳಿ ನಡೆದಿದೆ. ನವನಗರ ಸೆಕ್ಟರ್ ನಂ 55 ರಲ್ಲಿರುವ ವಿಜಯಪುರ ಬಾಲಾಜಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಹೆಚ್​.ಎಲ್ ಪಾಟೀಲ್ ಮನೆ ಮೇಲೆ ಇಂದು ದಾಳಿ ನಡೆಸಿ ತಲಾಷ್ ಮಾಡಲಾಗಿದೆ. ಶುಗರ್ಸ್ ಕಾರ್ಖಾನೆಯಲ್ಲಿ ಇತ್ತೀಚೆಗೆ ಎಸ್.ಆರ್ ಪಾಟೀಲ್ ಅವರ ಭಾವಚಿತ್ರದ ಗೋಡೆ ಗಡಿಯಾರ, ಟಿ ಶರ್ಟ್ ಪತ್ತೆಯಾಗಿದ್ದವು. ಈ ಹಿನ್ನಲೆ ಇಂದು ಐಟಿ ಅಧಿಕಾರಿಗಳು ದಾಲಿ ನಡೆಸಿದ್ದಾರೆ. ಆನಂದ ನಗರದಲ್ಲಿರುವ ಬಾಲಾಜಿ ಶುಗರ್ಸ್ ಸಕ್ಕರೆ ಕಾರ್ಖಾನೆಯ ಪಾಲುದಾರ ದಿ.ನಂದಕುಮಾರ ಪಾಟೀಲ್ ಮನೆಯಲ್ಲಿಯೂ ಐಟಿ ಪರಿಶೀಲನೆ ನಡೆಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:51 pm, Thu, 20 April 23